ಮಳೆಗೆ ರೆಸ್ಟ್‌ | ಮತ್ತೆ ಬಿಸಿಲ ಜಳ | ಹವಾಮಾನ ಮನ್ಸೂಚನೆಯಲ್ಲಿ ಏನಿದೆ ? ಪೂರ್ತಿ ವಿವರ ಕ್ಲಿಕ್‌ ಮಾಡಿ

The weather forecast for Shivamogga

ಮಳೆಗೆ ರೆಸ್ಟ್‌ | ಮತ್ತೆ ಬಿಸಿಲ ಜಳ | ಹವಾಮಾನ ಮನ್ಸೂಚನೆಯಲ್ಲಿ ಏನಿದೆ ? ಪೂರ್ತಿ ವಿವರ ಕ್ಲಿಕ್‌ ಮಾಡಿ
The weather forecast for Shivamogga

SHIVAMOGGA | MALENADUTODAY NEWS | Jun 18, 2024  ಮಲೆನಾಡು ಟುಡೆ 

ಕಳೆದೆರಡು ದಿನಗಳಿಂದ ಮಳೆ ಶಿವಮೊಗ್ಗದಲ್ಲಿ ರೆಸ್ಟ್‌ ತೆಗೆದುಕೊಂಡಂತಿದೆ. ಇವತ್ತು ಕೂಡ ಹವಾಮಾನ ಇಲಾಖೆಯ ಪ್ರಕಾರ ವರ್ಷಧಾರೆಯ ಸಾಧ್ಯತೆ ಕಡಿಮೆ ಇದೆ. ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ಮಾಹಿತಿ ಪ್ರಕಾರ, ಇವತ್ತು (18ನೇ ಜೂನ್ 2024) ಕರಾವಳಿ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಜಿಲ್ಲೆಗಳಲ್ಲಿ ಅನೇಕ ಸ್ಥಳಗಳಲ್ಲಿ ಬಗಾಳಿಯ ವೇಗವು (30-40 kmph) ಇರುವ ಸಾಧ್ಯತೆಯಿದೆ ಹಾಗೂ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆಯಿದೆ.

ಇನ್ನೂ ನಾಳೆ  ದಿನ (19ನೇ ಜೂನ್ 2024) ಕರಾವಳಿ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಬಿರುಗಾಳಿಯ ವೇಗವು (30-40 kmph) ಇರುವ ಸಾಧ್ಯತೆಯಿದೆ ಹಾಗೂ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆಯಿದೆ.

ಎನ್‌ಡಿಆರ್‌ಎಫ್‌ನ ಹವಾಮಾನ ಮನ್ಸೂಚನೆಯ ಆಪ್‌ ಪ್ರಕಾರ, ಇವತ್ತು ಶಿವಮೊಗ್ಗದಲ್ಲಿ ಮಧ್ಯಾಹ್ನದವರೆಗೂ ಬಿಸಿಲು ಇರಲಿದ್ದು ಆನಂತರ ಕೆಲೆವೆಡೆ ಮಳೆಯಾಗಲಿದೆ.ಕನಿಷ್ಟ 22 ಡಿಗ್ರಿ ಉಷ್ಣಾಂಶವಿರಲಿದ್ದು, ಗರಿಷ್ಟ 32 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆ ಕಾಣಲಿದೆ. ಆಪ್‌ನಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. 



The weather forecast for Shivamogga and the surrounding regions for June 18 and 19, 2024, indicates a likelihood of light to moderate rainfall with thunderstorms in coastal areas. Shivamogga can expect sunny weather until noon, followed by rain in some areas, with temperatures ranging from 22 to 32 degrees Celsius. The NDRF weather app predicts rain in Dakshina Kannada, Udupi, and Uttara Kannada districts.