borewell tragedy vijayapura ಈ ಮಗು ಅಳುತ್ತಿದ್ದರೇ ಅಲ್ಲಿದ್ದವರೆಲ್ಲಾ ಸಂಭ್ರಮಿಸುತ್ತಿದ್ದರು! ಆನಂದದಲ್ಲಿದ್ದರು! ಏಕೆ ಗೊತ್ತಾ?

borewell tragedy vijayapura, malenadutoday,ಕೊಳವೆ ಬಾವಿಗೆ ಬಿದ್ದ ಮಗು

borewell tragedy vijayapura  ಈ ಮಗು ಅಳುತ್ತಿದ್ದರೇ ಅಲ್ಲಿದ್ದವರೆಲ್ಲಾ ಸಂಭ್ರಮಿಸುತ್ತಿದ್ದರು! ಆನಂದದಲ್ಲಿದ್ದರು! ಏಕೆ ಗೊತ್ತಾ?
borewell tragedy vijayapura, malenadutoday,ಕೊಳವೆ ಬಾವಿಗೆ ಬಿದ್ದ ಮಗು borewell tragedy vijayapura, malenadutoday,ಕೊಳವೆ ಬಾವಿಗೆ ಬಿದ್ದ ಮಗು

Shivamogga  Apr 4, 2024 borewell tragedy vijayapura / ಕೊಳವೆ ಬಾವಿಗೆ ಬಿದ್ದ ಮಗು / 

ಅಲ್ಲಿ ಆ ಪುಟ್ಟ ಮಗು ಜೋರಾಗಿ ಅಳುತ್ತಿದ್ದರೇ ಅಲ್ಲಿದ್ದವರೆಲ್ಲಾ ನಗುತ್ತಿದ್ದರು,ಸಂಭ್ರಮಿಸುತ್ತಿದ್ದರು, ಚಪ್ಪಾಳೆ, ಶಿಳ್ಳೆ, ಕೇಕೆ ಹಾಕಿ ಮನಸ್ಸಿಗೆ ಹಿಡಿಸಿದ ಘೋಷಣೆ ಕೂಗುತ್ತಿದ್ದರು. ಅವರೆಲ್ಲರಿಗೂ ಆ ಮಗು ಅಳುವುದೇ ಬೇಕಾಗಿತ್ತು. ಅದು ಆ ಕ್ಷಣಕ್ಕೆ ಅಳದೇ ಹೋಗಿದ್ದರೇ, ಅಲ್ಲಿದ್ದ ನೂರಾರು ಮಂದಿ ಶ್ರಮ, ಸಾವಿರಾರು ಮಂದಿಯ ಪ್ರಾರ್ಥನೆ ವ್ಯರ್ಥವಾಗುತ್ತಿತ್ತು. ಸಿದ್ದಲಿಂಗ ಮಹಾರಾಜರ ಪವಾಡ ಸುಳ್ಳಾಗುತ್ತಿತ್ತು. ಆದರೆ ಹಾಗಾಗಲಿಲ್ಲ. ಬೋರ್‌ವೆಲ್‌ನೊಳಗೆ 16 ಅಡಿ ಆಳದಲ್ಲಿ ತಲೆಕೆಳಗಾಗಿ ಬಿದ್ದರೂ, ಕಾಲು ಅಲ್ಲಾಡಿಸುತ್ತಾ ತನ್ನ ಸ್ಥೈರ್ಯ ತೋರುತ್ತಿದ್ದ ಆ ಪುಟ್ಟ ಮಗು ಬೋರ್‌ವೆಲ್‌ನಿಂದ ಆಚೆಗೆ ಬರುತ್ತಲೇ ಮತ್ತೆ ಹುಟ್ಟಿದಂತೆ ಅಳಲು ಆರಂಭಿಸಿತು.. 

ಮಗುವಿಗೆ ಏನಾಯ್ತೋ ಏನೋ? ಮಗು ಸದ್ದು ಮಾಡ್ತಿಲ್ಲ! ಅದರ ಆರೋಗ್ಯ ಹೇಗಿದ್ಯೋ ಎಂದುಕೊಂಡಿದ್ದ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಸಿಬ್ಬಂದಿ ಮಗುವನ್ನ ರಕ್ಷಣೆ ಮಾಡಿ ಭೂಮಿಯಿಂದ ಹೊರಕ್ಕೆ ತೆಗೆಯುತ್ತಲೇ ಹೆತ್ತ ತಾಯಿಗಿಂತಲೂ ಹೆಚ್ಚು ಕಾಳಜಿವಹಿಸಿದ್ರು. ಮಗುವನ್ನ ಹೊರಕ್ಕೆ ತಗೆದ ಕ್ಷಣದಲ್ಲಿ ಗಾಬರಿಯಲ್ಲಿಯೇ ಇದ್ದ ಸಿಬ್ಬಂದಿ ತಮ್ಮ ಕೈಯಲ್ಲಿ ಮಗುವಿನ ಕಣ್ಣೊರೆಸಿದರು, ತಲೆಸವರಿದರು, ಕಂದಾ, ಸಾತ್ವಿಕ…ಎಂತೆಲಾ ಕರೆಯಲಾರಂಭಿಸಿದರು. 

borewell tragedy vijayapura

ಪಾತಾಳ ಕಂಡು ಬಂದ ಸಾತ್ವಿಕ ಧರಣಿ ಮೇಲಕ್ಕೆ ಬರುತ್ತಲೇ ರಕ್ಷಣಾ ತಂಡದ ತೋಳಿನಲ್ಲಿಯೇ ಅಳಲು ಆರಂಭಿಸಿದೆ. ಅಲ್ಲೆಲ್ಲೋ ಜನರು ಶಹಬ್ಬಾಸ್‌ ಬೇಷ್‌ ಆತ್‌ ನೋಡಪ್ಪ.. ಬಪ್ಪರೇ ಮಗನೇ ಸಾವೇ ಇಲ್ಲ ಹೋಗ್‌ ನಿಂಗೆ .. ಸಿದ್ದಲಿಂಗ ಮುತ್ಯಾರ್‌ ಪವಾಡ ಮಾಡೇಬಿಟ್ರು ನೋಡ್ರಪ್ಪ ಮತ್ತೆ ಅಂತಾ ಮಾತನಾಡಿಕೊಳ್ಳಲಾರಂಭಿಸಿದರು. ಆದರೂ ರಕ್ಷಣಾ ತಂಡಕ್ಕೆ ದಿಗಿಲಿತ್ತು. ಮಗುವನ್ನ ತಕ್ಷಣವೇ ಎತ್ತಿಕೊಂಡು ತುರ್ತುವಾಹನಕ್ಕೆ ಕರೆದೊಯ್ದರು. 

ಕೊಳವೆ ಬಾವಿಗೆ ಬಿದ್ದ ಮಗು

ಭೂಮಿಯಿಂದ ಆ ಮಗುವನ್ನ ತೆಗೆಯಲು 20 ಗಂಟೆ ಕಾರ್ಯಾಚರಣೆ ನಡೆಸಿದ್ದ ರಕ್ಷಣಾ ತಂಡ ಎರಡು ನಿಮಿಷವೂ ಮಗುವನ್ನ ಸಂತೈಸಲಾಗಲಿಲ್ಲ. ಅವರಿಗೆ ಮಗುವಿನ ಪ್ರಾಣ ಉಳಿಸುವುದು ಮುಖ್ಯವಾಗಿತ್ತು. ಅದಕ್ಕಾಗಿ ಸಾತ್ವಿಕನನ್ನ ತುರ್ತುವಾಹನವೇರಿಸಿ ಕಳುಹಿಸಿಕೊಟ್ಟರು. ಸದ್ಯ ಮಗು ಆರಾಮಾಗಿದೆ.  ಸಾತ್ವಿಕ್‌ ಗೆ ಕೆಲವೊಂದು ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿದೆ. ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.