ರಾಮಮೂರ್ತಿ ಹೊತ್ತ ಬೆನ್ನಲ್ಲೆ ಕೆರಳಿದ ಹೆಣ್ಣಾನೆ! ಮಾವುತನ ಸಾವು! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಸತ್ಯ!

In a shocking incident, a mahout was trampled to death by a female elephant of a temple in Kerala

ರಾಮಮೂರ್ತಿ ಹೊತ್ತ ಬೆನ್ನಲ್ಲೆ ಕೆರಳಿದ ಹೆಣ್ಣಾನೆ! ಮಾವುತನ ಸಾವು! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಸತ್ಯ!
female elephant , temple in Kerala

Shivamogga  Apr 4, 2024  ಆನೆಗಳು ಬಹಳಾನೇ ಸೂಕ್ಷ್ಮ ಜೀವಿಗಳು ಎಂಬುದಕ್ಕೆ ಕೇರಳದ ವಿಡಿಯೋವೊಂದು ವೈರಲ್‌ ಆಗಿದೆ.ಉತ್ಸವ ಮೂರ್ತಿಯನ್ನು ಹೊತ್ತು ಸಾಗಬೇಕಿದ್ದ ಆನೆ. ದೇವರನ್ನು ಹೊತ್ತುಕೊಳ್ಳುತ್ತಲೇ ತನ್ನ ಮಾವುತನ ಮೇಲೆ ದಾಳಿ ಆತನನ್ನ ಸಾಯಿಸಿ ಬಿಟ್ಟಿದೆ. ಕೇರಳದದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯಾವಳಿಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಸನ್ನಿವೇಶ ಭೀಕರವಾಗಿದೆ. 

ಇಲ್ಲಿನ ವೈಕಂನಲ್ಲಿ ಘಟನೆ ನಡೆದಿದ್ದು, ಆನೆ ತುಳಿದ ಪರಿಣಾಮ ಪುತ್ತುಪಲ್ಲಿ ನಿವಾಸಿ ಅರವಿಂದ್‌ ಎಂಬ 26 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಟಿವಿ ಪುರಂ ಶ್ರೀರಾಮಮಂದಿರದಲ್ಲಿ ಈ ಘಟನೆ ಸಂಭವಿಸಿದೆ. ಬುಧವಾರ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಉತ್ಸವ ಮೂರ್ತಿಯನ್ನು ಹೊತ್ತುಕೊಳ್ಳಲು ಆನೆ ಮುಂದಾಗಿದೆ. ಆನೆಯ ಮೇಲಿದ್ದ ಮಾವುತ ದೇವರ ಮೂರ್ತಿಯನ್ನು ಆನೆಯ ಮೇಲೆ ಎಳೆದುಕೊಂಡು ಅದರ ನೆತ್ತಿ ಮೇಲೆ ಇರಿಸಿದ್ದ. ಅಷ್ಟರವರೆಗೂ ವಾಲಾಡುತ್ತ, ಅಲ್ಲಿ ನೀಡಿದ್ದ ವಸ್ತುವನ್ನು ತಿನ್ನುತ್ತಿತ್ತು. 

ದೇವರ ಮೂರ್ತಿಯನ್ನು ಹೊತ್ತುಕೊಂಡ ಬೆನ್ನಲ್ಲೆ ಆನೆಯ ಇನ್ನೊಬ್ಬ ಮಾವುತ ಅರವಿಂದ್‌ ಆನೆಯ ಸೊಂಡಿಲ ಬಳಿಗೆ ಹೋಗಿ ಏನೋ ಮಾಡಲು ಮುಂದಾಗಿದ್ದಾನೆ. ಈ ವೇಳೆ ಸಿಟ್ಟಿಗೆದ್ದ ಆನೆ ಅರವಿಂದ್‌ನನ್ನ ತಳ್ಳಿಕೊಂಡು ಇನ್ನೊಂದು ಕಡೆಗೆ ಬಂದಿದೆ. ಆನೆಯ ಮೇಲಿದ್ದ ಮಾವುತ ಕೆಳಕ್ಕೆ ಹಾರಿದರೇ ಮತ್ತೊಬ್ಬ ವ್ಯಕ್ತಿ ತನ್ನ ಜೀವವನ್ನು ಲೆಕ್ಕಿಸಿದೇ ಆನೆಯನ್ನು ಸಮಾಧಾನ ಪಡಿಸಲು ಮುಂದಾಗಿದ್ದಾನೆ. ಆನೆಯು ಆತನ ಮಾತನ್ನ ಕೇಳಿ ನಿಂತು ಸಮಾಧಾನಗೊಂಡಿತಾದರೂ ಅಷ್ಟರಲ್ಲಿ ಅರವಿಂದ್‌ಗೆ ಗಂಭೀರವಾಗಿ ಪೆಟ್ಟು ಬಿದ್ದಿತ್ತು. ಆನೆಯ ಗಮನವನ್ನು ಬೇರೆ ಕಡೆಗೆ ಸೆಳೆದು ಅದರ ಹಿಂಭಾಗದಿಂದ ಅರವಿಂದ್‌ನನ್ನ ಬಚಾವ್‌ ಮಾಡಿದ ದೇಗುಲ ಸಿಬ್ಬಂದಿ ಅವರನ್ನ ತಕ್ಷಣವೇ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿದ್ದಾರೆ. 

ಆಸ್ಪತ್ರೆಗೆ ಸಾಗಿಸುವರೆಗೂ ಜೀವವಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅರವಿಂದ್‌ ಸಾವನ್ನಪ್ಪಿದ್ದಾರೆ. ಇನ್ನೂ ದೇಗುಲದ ಆನೆಯ ಹೆಸರು Kunjulakshmi ಎಂದು. ಈಕೆಯ ನಿರ್ವಹಣೆಗಾಗಿ ಅರವಿಂದ್‌ ಒಂದು ತಿಂಗಳ ಹಿಂದಷ್ಟೆ ಎರಡನೇ ಮಾವುತನಾಗಿ ನೇಮಕಕೊಂಡಿದ್ದ. ಆನೆ ಈತನಿಗಿನ್ನೂ ಹೊಂದಿಕೊಳ್ಳದಿರುವುದು ಘಟನೆಗೆ ಕಾರಣವಾಗಿರುವ ಸಾಧ್ಯತೆಗಳಿವೆ.