ಬಿ.ವೈ.ವಿಜಯೇಂದ್ರ, ಆರ್​.ಅಶೋಕ್​, ನಳಿನ್ ಕುಮಾರ್ ಕಟೀಲ್, ರವಿಕುಮಾರ್​​ರಿಗೆ​ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ & ಸವಾಲ್! ನಾಲ್ಕು ಮಾತು

SHIVAMOGGA  |  Jan 2, 2024  |  ಸಚಿವ ಮಧು ಬಂಗಾರಪ್ಪರವರು ತುಸು ಗರಂ ಆಗಿದ್ದಾರೆ. ಮಾಧ್ಯಮಗಳ ವರದಿ ಹಾಗೂ ಬಿಜೆಪಿಯ ಟೀಕೆ ಬಗ್ಗೆ ಇವತ್ತು ಅವರು ಸುದ್ದಿಗೋಷ್ಟಿ ನಡೆಸಿ ನೇರಾನೇರ ವಾಗ್ದಾಳಿ ನಡೆಸಿದ್ರು. ಈ ವೇಳೇ ಅವರು ಹೇಳಿದ್ದೇನು ಎಂಬುದರ ವಿವರವನ್ನು ನೋಡುವುದಾದರೆ, ಚೆಕ್ ಬೌನ್ಸ್ ಪ್ರಕರಣದ ತೀರ್ಪಿನ ಹಿನ್ನಲೆಯಲ್ಲಿ ತಮ್ಮ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು ಮೊದಲು ಅವರದ್ದೇ ಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮಾಡುತ್ತಿರುವ ಭ್ರಷ್ಟಾಚಾರದ ಆರೋಪಕ್ಕೆ ಉತ್ತರಿಸಲಿ  ಎಂದು ವಾಗ್ದಾಳಿ ನಡೆಸಿದ್ರು.ಮ 

READ : ಹೈದರಾಬಾದ್​ ನಿಂದ ಚಿತ್ರದುರ್ಗಕ್ಕೆ ತರುತ್ತಿದ್ದ ಅಡಿಕೆ ದುಡ್ಡು ಸಿನಿಮಾ ಸ್ಟೈಲ್​ನಲ್ಲಿ ಲೂಟಿ ಕೇಸ್​ ! ಹಲವರ ಅರೆಸ್ಟ್! 63 ಲಕ್ಷ ರಿಕವರಿ

ಮಧು ಬಂಗಾರಪ್ಪ

  • ಬಿಜೆಪಿ ಶಾಸಕರೇ ಆಗಿರುವ ಯತ್ನಾಳ್ ಅವರು ಕೋರೊನಾ ಕಾಲದಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಿದ್ದಾರೆ. 45 ರೂ ಮಾಸ್ಕ್‌ಗೆ 450 ರೂ ಬಿಲ್ ಮಾಡಿದ್ದಾರೆ.ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಆಗಿದೆ.ಅವರು ಯಾರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂಬುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಉತ್ತರಿಸಲಿ

  • ನನ್ನ ತಂದೆಯವರು ಮುಖ್ಯಮಂತ್ರಿಯಾಗಿದ್ದಾಗ ನಾನು ಅವರನ್ನು ಪವಿತ್ರವಾಗಿ ನೋಡಿಕೊಂಡಿದ್ದೇನೆ. ಚೋಟಾಸಹಿ, ಉದ್ದ ಸಹಿ ಮಾಡಿ ನನ್ನ ತಂದೆಯನ್ನು ಕೇಸಿಗೆ ಸಿಲುಕಿಸಲಿಲ್ಲ, ಕೆಲವು ಪಟಿಂಗರನ್ನಿಟ್ಟುಕೊಂಡು ನನ್ನ ವಿರುದ್ದ ಟ್ವಿಟ್ ಮಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರನಿಗೆ ಮಾನ ಮರ್ಯಾದೆ ಏನಾದರೂ ಇದ್ದರೆ ರಾಜೀನಾಮೆ ಕೊಡಲಿ, ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಕೊಳೆತು ನಾರುತ್ತಿದೆ. ಮೊದಲು ಅದನ್ನು ನೋಡಿಕೊಳ್ಳಿ, ನನ್ನ ತಟ್ಟೆ ಕ್ಲೀನ್‌ಆಗಿದೆ  

  • ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ್, ಎಂ.ಎಲ್ ಸಿ ರವಿಕುಮಾರ್ ಅವರನ್ನು ಯೂಸ್ ಲೆಸ್ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು,ಡಿಸಿಎಂ ಆಗಿದ್ದ ಅಶೋಕ್ ಅವರ ಮೇಲೂ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಅದನ್ನು ಮುಂದಿನ ದಿನಗಳಲ್ಲಿ ತೆಗೆಯುತ್ತೇನೆ  

  • ಎಂಎಲ್ ಸಿ ರವಿಕುಮಾರ್ ಜೀವನದಲ್ಲಿ ಒಂದು ಗ್ರಾಮಪಂಚಾಯ್ತಿ ಚುನಾವಣೆಯನ್ನು ಎದುರಿಸಲಿಲ್ಲ. ಕೇವಲ ಮಾತನಾಡಲು ಬಿಜೆಪಿ ಅವರನ್ನಿಟ್ಟುಕೊಂಡಿದೆ. ನಳೀನ್ ಕುಮಾರ್ ಕಟೀಲ್ ಕರಾವಳಿಯಲ್ಲಿ ಸಾವಿನ ಮೇಲೆ ರಾಜಕಾರಣ ಮಾಡಿಕೊಂಡು ಬರುತ್ತಿರುವ ವ್ಯಕ್ತಿ ಧಮ್ ಇದ್ದರೆ ತಾಕತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ಕಟೀಲ್ ಸ್ಪರ್ಧಿಸಲೆ ನಾನೇ ಕರಾವಳಿಗೆ ಬರುತ್ತೇನೆ   

ಚೆಕ್ ಬೌನ್ಸ್ ಪ್ರಕರಣ ವ್ಯವಹಾರಿಕವಾಗಿದ್ದು ಅದು ಖಾಸಗಿ ವಿಷಯವಾಗಿದೆ. ನನ್ನ ಖಾಸಗಿ ವಿಷಯವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವ ನೀಚತನ ಬಿಜೆಪಿ ಮಾಡುತ್ತಿದೆ. ಮಾಧ್ಯಮಗಳು ಇಂತಹ ವಿಷಯಗಳಲ್ಲಿ ನನ್ನ ಸ್ಪಷ್ಟಿಕರಣ ತೆಗೆದುಕೊಳ್ಳಬೇಕಿತ್ತು ಎಂದ ಮಧು ಬಂಗಾರಪ್ಪರವರು ಬಿಜೆಪಿಯವರು ಪಂಚಖಾತ್ರಿ ಯೋಜನೆಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯಯೋಜನೆಯ ಸೌಲಭ್ಯವನ್ನು ಬಿಜೆಪಿ ಕಾರ್ಯಕರ್ತರು ಪಡೆಯಬಾರದು ಎಂದು ಆ ಪಕ್ಷದ ನಾಯಕರು ಕರೆ ನೀಡಲಿ ಎಂದು ಸವಾಲು ಹಾಕಿದರು.

Leave a Comment