SHIVAMOGGA | Jan 11, 2024 | ಶಿವಮೊಗ್ಗ ಸಿಟಿಯಲ್ಲಿ NSUI ವಿದ್ಯಾರ್ಥಿ ಸಂಘಟನೆ ಯುವನಿಧಿ ಯೋಜನೆ (yuva nidhi) ಶಿವಮೊಗ್ಗದಲ್ಲಿ ಉದ್ಘಾಟನೆಗೊಳ್ಳುತ್ತಿರುವ ಹಿನ್ನಲೆಯಲ್ಲಿ ಯುವ ಜ್ಯೋತಿ ಜಾಥಾವನ್ನು ಹಮ್ಮಿಕೊಂಡಿತ್ತು. ಈ ಜಾಥಾದಲ್ಲಿ ಸಚಿವ ಮಧು ಬಂಗಾರಪ್ಪ ಹಾಗೂ ಸಚಿವ ಶರಣಪ್ರಕಾಶ್ ಪಾಟೀಲ್ರವರು ಪಂಜು ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.
ಫ್ರೀಡಂಪಾರ್ಕ್ನಲ್ಲಿ ಸಿಎಂ ಸಿದ್ದರಾಮಯ್ಯ ರಿಂದ ಯುವನಿಧಿ ಯೋಜನೆ ಉದ್ಘಾಟನೆಗೊಳ್ಳಲಿದೆ. ಇದಕ್ಕಾಗಿ ನಿನ್ನೆ ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲಿಸಲು ಸಚಿವರುಗಳು ಆಗಮಿಸಿದ್ದರು. ಈ ನಡುವೆ ನಿನ್ನೆ ಸಂಜೆ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರ ಜೊತೆಯಲ್ಲಿ ಯುವ ಜ್ಯೋತಿ ಜಾಥಾದಲ್ಲಿ ಇಬ್ಬರು ಸಚಿವರು ಸಹ ಪಾಲ್ಗೊಂಡರು.
ಯುವನಿಧಿ ಯೋಜನೆ ಚಾಲನೆ ಹಿನ್ನೆಲೆ ನಡೆದ ಜಾಥಾ ಶಿವಮೊಗ್ಗದ ಜೈಲ್ ರಸ್ತೆಯಿಂದ ಗೋಪಿ ಸರ್ಕಲ್‌ವರೆಗೆ ಸಾಗಿಬಂತು. ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ್ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ಕಾಂಗ್ರೆಸ್ ಮುಖಂಡರಾದ ರಮೇಶ್ ಹೆಗ್ಡೆ, ಆರ್.ಪ್ರಸನ್ನಕುಮಾರ್, ಮಧುಸೂದನ್, ಕೆ.ಚೇತನ್, ಚರಣ್, ಹರ್ಷಿತ್, ರವಿ ಕಾಟಿಕೇರೆ, ಕಲೀಂ ಪಾಷಾ, ದೇವೇಂದ್ರಪ್ಪ, ಸಂತೆ ಕುಡೂರು ವಿಜಯ್, ಧೀರಜ್, ರಂಗೇಗೌಡರು ಮತ್ತಿತರರು ಸೇರಿದಂತೆ ವಿವಿಧ ಮುಖಂಡರು ಪಾಲ್ಗೊಂಡಿದ್ದರು.
ಇನ್ನೂ ಈ ವೇಳೇ ಮಾತನಾಡಿದ ಮಧು ಬಂಗಾರಪ್ಪ ಜ.12ರಂದು ಸಿಎಂ ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ಯುವನಿಧಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಫಲಾನುಭವಿಗಳು ಹಾಗೂ ಪದವಿ ವಿದ್ಯಾರ್ಥಿಗಳು ಯೋಜನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು
ಇನ್ನೂ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಮಾತನಾಡಿ ಯುವನಿಧಿ ಯೋಜನೆ ಕುರಿತು ಜಾಗೃತಿ ಮೂಡಿಸುವ ಆಶಯದಿಂದ ಶಿವಮೊಗ್ಗ ಜಿಲ್ಲಾ ಎನ್‌ಎಸ್‌ಯುಐ ಘಟಕ ಯುವ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲಾ ಮಟ್ಟದಲ್ಲಿ ಸಂಘಟನೆ ಉತ್ತಮ ಕೆಲಸ ಮಾಡುತ್ತಿದೆ ಎಂದಿದ್ದಾರೆ
ಫೋಟೋ ವರದಿ : ಮಧು ಶಿವಮೊಗ್ಗ