ಆಕಾಶವಾಣಿ ಬೆಂಗಳೂರು ನಿಲಯದ ಪ್ರಾದೇಶಿಕ ಸುದ್ದಿ ವಿಭಾಗದಲ್ಲಿ ಉದ್ಯೋಗ! ವಿವರ ಇಲ್ಲಿದೆ

This Article Written by / Malenadu Today / ಜನವರಿ 2, 2024

SHIVAMOGGA  |  Jan 2, 2024  |  ಅರೆಕಾಲಿಕ ವರದಿಗಾರರ ಹುದ್ದೆಗೆ ಅರ್ಜಿ ಆಹ್ವಾನ

ಆಕಾಶವಾಣಿ ಬೆಂಗಳೂರು ನಿಲಯದ ಪ್ರಾದೇಶಿಕ ಸುದ್ದಿ ವಿಭಾಗವು ಶಿವಮೊಗ್ಗ ಜಿಲ್ಲೆಗೆ  ಅರೆಕಾಲಿಕ ವರದಿಗಾರರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಪಿ.ಜಿ. ಡಿಪ್ಲೋಮೋ /ಪತ್ರಿಕೋದ್ಯಮ/ಸಮೂಹ ಮಾಧ್ಯಮದಲ್ಲಿ ಪದವಿ ಹೊಂದಿದವರು ಕನಿಷ್ಠ ಎರಡು ವರ್ಷಗಳ ಮಾಧ್ಯಮ ಅನುಭವ ಉಳ್ಳವರು ಅರ್ಜಿ ಸಲ್ಲಿಸಬಹುದು. 

READ : ಶಿವಮೊಗ್ಗ-ಶಿಕಾರಿಪುರಲ್ಲಿನ ಟ್ರಾನ್ಸಫರ್​ ಬಗ್ಗೆ ಸಿಎಂ ಸಿದ್ದರಾಮಯ್ಯರಿಗೆ ಬಿಎಸ್​ವೈ & ಕುಟುಂಬದವರ ಫೋನ್! ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

ವಯೋಮಿತಿ 24 ರಿಂದ 45 ವರ್ಷಗಳಾಗಿದ್ದು, ಆಸಕ್ತಿ ಉಳ್ಳವರು ತಮ್ಮ ಅರ್ಜಿಗಳನ್ನು ದಾಖಲಾತಿಗಳೊಂದಿಗೆ ಅಂಚೆ ವಿಳಾಸ: ಸುದ್ದಿ ವಿಭಾಗದ ಮುಖ್ಯಸ್ಥರು, ಆಕಾಶವಾಣಿ ನಿಲಯ, ರಾಜಭವನ ರಸ್ತೆ, ಬೆಂಗಳೂರು ಇಲ್ಲಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-22356344 ಮೂಲಕ ಸಂಪರ್ಕಿಸಬಹುದು.

ಮುಂದಿನ ಸುದ್ದಿ ಒದಿ

Leave a Comment