ಮಾರಿಜಾತ್ರೆಯ ರಶ್​ ನಡುವೆ, ಮಗುವಿನ ತುರ್ತುಚಿಕಿತ್ಸೆ ದಾರಿಮಾಡಿಕೊಟ್ಟ ಸಾಗರದ ಜನತೆ! ಏನಿದು ಘಟನೆ ವಿವರ ಇಲ್ಲಿದೆ

In the midst of the rush of the marijatra, the people of the sagara taluk, who paved the way for the emergency treatment of the child! Here's what happened

ಮಾರಿಜಾತ್ರೆಯ ರಶ್​ ನಡುವೆ, ಮಗುವಿನ ತುರ್ತುಚಿಕಿತ್ಸೆ ದಾರಿಮಾಡಿಕೊಟ್ಟ ಸಾಗರದ ಜನತೆ!  ಏನಿದು ಘಟನೆ ವಿವರ ಇಲ್ಲಿದೆ
ಮಾರಿಜಾತ್ರೆಯ ರಶ್​ ನಡುವೆ, ಮಗುವಿನ ತುರ್ತುಚಿಕಿತ್ಸೆ ದಾರಿಮಾಡಿಕೊಟ್ಟ ಸಾಗರದ ಜನತೆ! ಏನಿದು ಘಟನೆ ವಿವರ ಇಲ್ಲಿದೆ

ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ಮಾರಿಕಾಂಬಾ ಜಾತ್ರೆಯ (Maari jatre) ನಡುವೆ ಮಾನವೀಯತೆ ಮೆರೆಯುವಂತಹ ಘಟನೆಯೊಂದು ನಡೆದಿದೆ.ಮಗುವೊಂದರ ತುರ್ತು ಚಿಕಿತ್ಸೆಗಾಗಿ ತೆರಳುತ್ತಿದ್ದ ಆ್ಯಂಬುಲೆನ್ಸ್​ಗೆ ಸಾಗರಿಕರು ಜೀರೋ ಟ್ರಾಫಿಕ್ ಮಾದರಿಯಲ್ಲಿ ದಾರಿ ಬಿಟ್ಟು ಜೀವ ಉಳಿಸುವ ಪ್ರಯತ್ನ ಮಾಡಿದ್ದಾರೆ. 

*ಪ್ರೀತಿಸಿದ್ದಕ್ಕೆ ಬಿತ್ತು ಕೇಸ್​! ಮದ್ಯ ಸೇವಿಸಲು ಹೋದವ ಆಕ್ಸಿಡೆಂಟ್​ನಲ್ಲಿ ಸಾವು! ತುಂಗಾನದಿಯಲ್ಲಿ ಬಾಲಕನ ದುರ್ಮರಣ! ಶಿವಮೊಗ್ಗ ಕ್ರೈಂ ನ್ಯೂಸ್​*

ನಡೆದಿದ್ದೇನು? 

ನಿನ್ನೆ ಭಾನುವಾರ ಜನರ ಸಂತೆಯೇ ಮಾರಿಜಾತ್ರೆಯಲ್ಲಿ ನೆರದಿತ್ತು. ಇದರ ನಡುವೆ ಶಿರಸಿಯಿಂದ ಶಿವಮೊಗ್ಗಕ್ಕೆ ಮಗುವೊಂದನ್ನ ಖಾಸಗಿ ಆ್ಯಂಬುಲೆನ್ಸ್​ನಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ವಿಚಾರ ತಿಳಿಯುತ್ತಲೇ ಪೊಲೀಸರು ಸೇರಿದಂತೆ ಸ್ಥಳೀಯರು ಹಾಗೂ ಆ್ಯಂಬುಲೆನ್ಸ್ (Ambulance)​ ಡ್ರೈವರ್​ಗಳು ಹೈವೆ ರಸ್ತೆಯಲ್ಲಿ ನಿಂತು ಸಂಚಾರ ಕ್ಲೀಯರ್ ಮಾಡತೊಡಗಿದರು. ಜೀರೋ ಟ್ರಾಫಿಕ್​ನ ರೀತಿಯಲ್ಲಿ ವಾಹನ ಬರುವ ಮಾರ್ಗದಲ್ಲಿ ಟ್ರಾಫಿಕ್ ಕ್ಲೀಯರ್ ಮಾಡಲಾಯ್ತು.ಹೀಗಾಗಿ ವಾಹನಗಳ ರಶ್​ನ ನಡುವೆ ಆ್ಯಂಬುಲೆನ್ಸ್ ನಿಗದಿತ ಸಮಯದಲ್ಲಿ ಶಿವಮೊಗ್ಗ ತಲುಪಿತು.ಶಿರಸಿ ಮೂಲದ ದಂಪತಿಯ ಮಗುವಿಗೆ ಮೆದುಳು ಸಂಬಂಧಿ ಕಾಯಿಲೆ ಬಾಧಿಸುತ್ತಿತ್ತು. ಹಾಗಾಗಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆತರಲಾಗುತ್ತಿತ್ತು.  

*ರಾಜ್ಯದ ಕೊಡಗು-ಕೇರಳ ಬಾರ್ಡರ್​ನಲ್ಲಿ ಮತ್ತೆ ಪ್ರತ್ಯಕ್ಷವಾದ ನಕ್ಸಲ್​​ ತಂಡ*

JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com