ರೈಲ್ವೆ ಹಳಿ ಮೇಲೆ ಬಿದ್ದ ವಿದ್ಯುತ್ ತಂತಿ! 2 ಗಂಟೆ ತಡವಾಗಿ ಹೊರಟ ಇಂಟರ್​ ಸಿಟಿ ರೈಲು!

Electric wire fell on the railway track! Intercity train left 2 hours late!ರೈಲ್ವೆ ಹಳಿ ಮೇಲೆ ಬಿದ್ದ ವಿದ್ಯುತ್ ತಂತಿ! 2 ಗಂಟೆ ತಡವಾಗಿ ಹೊರಟ ಇಂಟರ್​ ಸಿಟಿ ರೈಲು!

ರೈಲ್ವೆ ಹಳಿ ಮೇಲೆ ಬಿದ್ದ ವಿದ್ಯುತ್ ತಂತಿ! 2 ಗಂಟೆ ತಡವಾಗಿ ಹೊರಟ ಇಂಟರ್​ ಸಿಟಿ ರೈಲು!

KARNATAKA NEWS/ ONLINE / Malenadu today/ Sep 7, 2023 SHIVAMOGGA NEWS  

ಶಿವಮೊಗ್ಗ / ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪ ಕರೆಂಟ್ ವಯರ್ ತುಂಡಾಗಿ ಹಳಿ ಮೇಲೆ ಬಿದ್ದ ಕಾರಣ, ಇಂಟರ್ ಸಿಟಿ ರೈಲು ಇವತ್ತು 2 ಗಂಟೆ ತಡವಾಗಿ ಶಿವಮೊಗ್ಗ ತಲುಪಿದೆ. 

ಘಟನೆ ವಿವರ 

ಆನಂದಪುರದ ಸಮೀಪ ಇವತ್ತು ವಿದ್ಯುತ್ ವಯರ್​​  ಕಟ್ ಆಗಿ ಹಳಿ ಮೇಲೆ ಬಿದ್ದಿತ್ತು. ಅತ್ತ ಬೆಳಗ್ಗೆ 5-15 ಕ್ಕೆ ತಾಳಗುಪ್ಪದಿಂದ ಹೊರಟಿದ್ದ  ಬೆಂಗಳೂರು ಇಂಟರ್‌ಸಿಟಿ (ರೈಲು ಸಂಖ್ಯೆ 20652) ಬೆಳಗ್ಗೆ 6.05ರ ಹೊತ್ತಿಗೆ ಆನಂದಪುರ ಬಂದು ತಲುಪಿದೆ. ಅಲ್ಲದೆ ವಿದ್ಯುತ್ ವಯರ್ ಮೇಲೆ ಟ್ರೈನ್​ ಹರಿದು ನಿಂತಿದೆ. 

2 ಗಂಟೆ ರಿಪೇರಿ ಕಾರ್ಯ

ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಂದ ರೈಲ್ವೆ ಇಲಾಖೆ ಸಿಬ್ಬಂದಿ ರಿಪೇರಿ ಕಾರ್ಯ ನಡೆಸಿದ್ರು. ರೈಲ್ವೆ ಇಲಾಖೆ ಈ ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದ್ದ, ಅದರ ವಿದ್ಯುತ್ ತಂತಿಬಿದ್ದು ರೈಲು ಸಂಚಾರಕ್ಕೆ ಅಡ್ಡಿಯಾಗಿತ್ತು. ವಿದ್ಯುತ್ ತಂತಿ ತೆರವು ಗೊಳಿಸಿದ ಬಳಿಕ ಟ್ರೈನ್​ ಅಲ್ಲಿಂದ ಮುಂದಕ್ಕೆ ಸಾಗಿತು. 

ಬಳಿಕ ಶಿವಮೊಗ್ಗಕ್ಕೆ ಬೆಳಗ್ಗೆ  ಏಳು ಗಂಟೆಗೆ ಬರಬೇಕಿದ್ದ ರೈಲು 110 ಗಂಟೆ ಸುಮಾರಿಗೆ ಶಿವಮೊಗ್ಗ ತಲುಪಿದೆ. ಅಲ್ಲಿಂದ ಬೆಂಗಳೂರು ತಲುಪಿದೆ.   


   

ಇನ್ನಷ್ಟು ಸುದ್ದಿಗಳು