ವಸತಿ ಶಾಲೆಯ ವಿದ್ಯಾರ್ಥಿನಿ ಸಾವಿನ ಪ್ರಕರಣ! ಮುಖ್ಯಸ್ಥರ ವಿರುದ್ಧ ಕೇಳಿಬಂದಿದ್ಯಾ ಗಂಭೀರ ಆರೋಪ!? ಪೊಲೀಸರು ಅವರನ್ನ ವಶಕ್ಕೆ ಪಡೆದಿದ್ದಾರಾ?

Residential school student's death case Serious allegations levelled against the chief? Have the police taken them into custody?

ವಸತಿ ಶಾಲೆಯ ವಿದ್ಯಾರ್ಥಿನಿ ಸಾವಿನ ಪ್ರಕರಣ! ಮುಖ್ಯಸ್ಥರ ವಿರುದ್ಧ ಕೇಳಿಬಂದಿದ್ಯಾ  ಗಂಭೀರ ಆರೋಪ!?  ಪೊಲೀಸರು ಅವರನ್ನ ವಶಕ್ಕೆ ಪಡೆದಿದ್ದಾರಾ?

KARNATAKA NEWS/ ONLINE / Malenadu today/ Jun 10, 2023 SHIVAMOGGA NEWS

ಸಾಗರ / ತಾಲ್ಲೂಕಿನ  ವಸತಿ ಶಾಲೆಗೆ ದಾಖಲಾದ ಮೂರೆ ದಿನದಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್​ನ ಪೊಲೀಸರು ಶಾಲೆಯ ಮುಖ್ಯಸ್ಥರೊಬ್ಬರನ್ನ  ವಶಕ್ಕೆ ಪಡೆಯುವ ಸಿದ್ದತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಎಂಬ ಮಾಹಿತಿ ಸ್ಥಳೀಯವಾಗಿ ಲಭ್ಯವಾಗಿದೆ.  ಆದರೆ ಪೊಲೀಸ್ ಇಲಾಖೆಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ . 

ಮೊನ್ನೆ ನಡೆದ ಘಟನೆಯ ಸಂಬಂಧ ಅನುಮಾನಸ್ಪದ ಸಾವಿನ ಆರೋಪದಡಿಯಲ್ಲಿ ಪೋಷಕರು ನೀಡಿದ ದೂರನ್ನ ಆಧರಿಸಿ ಎಫ್​ಐಆರ್ ದಾಖಲಾಗಿತ್ತು. ಈ ಆರೋಪದಡಿಯಲ್ಲಿ ಶಾಲೆಯ ಮುಖ್ಯಸ್ಥರನ್ನ ವಶಕ್ಕೆ ಪಡೆಯಲು ಸಾಧ್ಯವಾಗದು ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ. ಇದರ ನಡುವೆ ಇವತ್ತು ಶಾಲೆಯ ಎದುರು ಪೋಷಕರು ಹಾಗೂ ಕೆಲ ಮಕ್ಕಳು ಶಾಲೆಯ ಮುಖ್ಯಸ್ಥರ ವಿರುದ್ಧ ಪ್ರತಿಭಟನೆಯನ್ನ ನಡೆಸಿದ್ದಾರೆ. ಶಾಲೆಯ ಎದುರು ನಡೆದ ಧರಣಿ ಹಿನ್ನೆಲೆಯಲ್ಲಿ  ಸ್ಥಳಕ್ಕೆ ಪೊಲೀಸರು ಸಹ ಆಗಮಿಸಿದ್ದರು. ಈ ವೇಳೆ ಶಾಲೆಯ ಮುಖ್ಯಸ್ಥರನ್ನು ಪೊಲೀಸರು ತಮ್ಮೊಂದಿಗೆ ಕರೆದೊಯ್ದಿರುವ ಮಾಹಿತಿ ಇದೆ.  ಪ್ರತಿಭಟನೆ ನಡೆಯುತ್ತಿದ್ದ ಹಿನ್ನೆಲೆ ಸುರಕ್ಷತೆಯ ದೃಷ್ಟಿಯಿಂದ ಅಥವಾ ವಶಕ್ಕೆ ಪಡೆಯುವ ಪ್ರಕ್ರಿಯೆ ಭಾಗವಾಗಿ ಮುಖ್ಯಸ್ಥರನ್ನು ಸ್ಟೇಷನ್​ಗೆ ಕರೆತಂದಿರುವ ಸಾಧ್ಯತೆ ಇದೆ. 

ಇನ್ನೂ ಸಾಂತ್ವನ ಕೇಂದ್ರದವರು ಸ್ಥಳದಲ್ಲಿದ್ದು, ಕೆಲವೊಂದು ವಿಚಾರಣೆ ನಡೆಸ್ತಿದ್ದಾರೆ. ವಿಚಾರಣೆ ಬಳಿಕ ಸಾಂತ್ವನ ಕೇಂದ್ರದಿಂದ ದೂರು ದಾಖಲಾದ ಪಕ್ಷದಲ್ಲಿ, ಆ ವಿಚಾರವಾಗಿ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನೂ, ಶಾಲೆಯ ಮುಖ್ಯಸ್ಥರ ವಿರುದ್ಧ ಇವತ್ತು ಕೆಲವು ಮಕ್ಕಳು ಮಾಡಿದ ಆರೋಪಗಳು ವಿಡಿಯೋ ದೃಶ್ಯಗಳಲ್ಲಿ ಸೆರೆಯಾಗಿದೆ. ಅಪ್ತಾಪ್ತರ ಆರೋಪದ ಅಡಿಯಲ್ಲಿ ಪೋಕ್ಸೋ ಕೇಸ್​ ದಾಖಲಾಗುವ ಸಾಧ್ಯತೆಯನ್ನು ಸಹ ಅಲ್ಲಗಳೆಯುವಂತಿಲ್ಲ. ಇನ್ನೂ ಪ್ರಕರಣ ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದು ಜಸ್ಟೀಸ್​ ಫಾರ್​…….. ಎಂಬ ಅಭಿಯಾನವೂ ಆರಂಭವಾಗಿದೆ. 

ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ನಿವಾಸಿಯಾಗಿರುವ ಬಾಲಕಿಯನ್ನ, ಘಟನೆ ನಡೆದಿರುವ ಶಾಲೆಗೆ ಪೋಷಕರು ಸೇರಿಸಿದ್ದರು. ಶಾಲೆಯಲ್ಲಿ ವ್ಯಾಯಾಮ ಮಾಡಿಸಿದ್ದ ವೇಳೆಯಲ್ಲಿ ಬಾಲಕಿಗೆ ಸ್ವಲ್ಪ ಆರೋಗ್ಯ ಸಮಸ್ಯೆಯಾಗಿದೆ. ಈ ವೇಳೆಯಲ್ಲಿ ಮುಖ್ಯಸ್ಥರು ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.  ಈ ವೇಳೆ  ಹೆಚ್ಚು ಹೆಚ್ಚು ನೀರನ್ನು ಕುಡಿಸಿರುವ ಬಗ್ಗೆ ಆರೋಪ ಕೇಳಿಬಂದಿದೆ. ಇದರಿಂದ ವಾಂತಿ ಮಾಡಿಕೊಂಡ ಬಾಲಕಿಯ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ . ತದನಂತರ ಪ್ರಕರಣ ದಾಖಲಾಗಿದ್ದು ಪೊಲೀಸರು ಗಂಭೀರವಾಗಿ ತನಿಖೆ ನಡೆಸ್ತಿದ್ದಾರೆ.