ಟಾಟಾ ಇಂಡಿಕಾದಲ್ಲಿ ಮೊಟ್ಟೆ ಕೊಟ್ಟು ಬರುತ್ತಿದ್ದಾಗ, ಸಾಗರದಿಂದ ಬರುತ್ತಿದ್ದ ಒಮಿನಿ ಟಿಕ್ಕಿ | ಓರ್ವ ಸಾವು | ಇಬ್ಬರಿಗೆ ಗಾಯ

Tata Indica car collided with an Omni car near Manchale village in Anandapura, Sagar taluk, Shivamogga district

ಟಾಟಾ ಇಂಡಿಕಾದಲ್ಲಿ ಮೊಟ್ಟೆ ಕೊಟ್ಟು ಬರುತ್ತಿದ್ದಾಗ, ಸಾಗರದಿಂದ ಬರುತ್ತಿದ್ದ ಒಮಿನಿ ಟಿಕ್ಕಿ  | ಓರ್ವ ಸಾವು | ಇಬ್ಬರಿಗೆ ಗಾಯ
Tata Indica car, Omni car Manchale village , Anandapura, Sagar taluk, Shivamogga district

SHIVAMOGGA | MALENADUTODAY NEWS | Jun 7, 2024  ಮಲೆನಾಡು ಟುಡೆʼ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದ ಸಮೀಪ ಮಂಚಾಲೆ ಗ್ರಾಮದ ಬಳಿಯಲ್ಲಿ ಟಾಟಾ ಇಂಡಿಕಾ ಹಾಗೂ ಒಮಿನಿ ವಾಹನದ ನಡುವೆ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು, ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ. 

ನಿನ್ನೆ ಮಧ್ಯಾಹ್ನ ಒಂದು ಮೂವತ್ತರ ಸುಮಾರಿಗೆ ಘಟನೆ ಸಂಭವಿಸಿದ್ದು, ಘಟನೆ ಸಂಬಂಧ ಆನಂದಪುರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ರಿಜಿಸ್ಟರ್‌ ಆಗಿದೆ. ಸಾಗರದಿಂದ ಉಳ್ಳೂರಿಗೆ ಮೊಟ್ಟೆ ಸಪ್ಲೆ ಮಾಡಿ ವಾಪಸ್‌ ಸಾಗರಕ್ಕೆ ಬರುತ್ತಿದ್ದ ಟಾಟಾ ಇಂಡಿಕಾ ಕಾರಿಗೆ ಭದ್ರಾವತಿ ನಿವಾಸಿ ಅಜಯ್‌ ಚಲಾಯಿಸುತ್ತಿದ್ದ ಒಮಿನಿ ಕಾರು ಡಿಕ್ಕಿಯಾಗಿದೆ. ಮುಖಾಮುಖಿ ಡಿಕ್ಕಿಯಾದ ಸಂದರ್ಭದಲ್ಲಿ ಒಮಿನಿ ಕಾರಿನ ಚಾಲಕ ಅಜಯ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನೂ ಇಂಡಿಕಾದಲ್ಲಿದ್ದ ನೂರುಲ್ಲಾ ಹಾಗೂ ಒಮಿನಿಯಲ್ಲಿದ್ದ ಉಲ್ಲಾಸ್‌ ಗಾಯಗೊಂಡಿದ್ದಾರೆ. ಇನ್ನೂ ಘಟನೆಯಲ್ಲಿ ಓಮಿನಿ ಪೂರ್ಣ ಜಖಂಗೊಂಡಿದೆ. 

A Tata Indica car collided with an Omni car near Manchale village in Anandapura, Sagar taluk, Shivamogga district