ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ಕುರಿತಂತೆ ಜಿಲ್ಲಾಡಳಿತದ ಮಹತ್ವದ ಪ್ರಕಟಣೆ

Important announcement of the district administration regarding the movement of heavy vehicles in Agumbe ghatಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ಕುರಿತಂತೆ ಜಿಲ್ಲಾಡಳಿತದ ಮಹತ್ವದ ಪ್ರಕಟಣೆ

ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ಕುರಿತಂತೆ ಜಿಲ್ಲಾಡಳಿತದ ಮಹತ್ವದ ಪ್ರಕಟಣೆ

KARNATAKA NEWS/ ONLINE / Malenadu today/ Sep 5, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರಕ್ಕೆ ಮತ್ತೆ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಜಿಲ್ಲಾಡಳಿತ ಪ್ರಕಟಣೆಯನ್ನು ನೀಡಿದೆ

ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ-ಮಲ್ಪೆ ರಸ್ತೆ ಆಗುಂಬೆ ಘಾಟಿಯಲ್ಲಿ 6, 7 ಮತ್ತು 11 ನೇ ತಿರುವಿನಲ್ಲಿ ಭಾರಿ ಮಳೆಯಿಂದಾಗಿ ಮತ್ತು ಭಾರೀ ವಾಹನಗಳ ಓಡಾಟದಿಂದ ಸಣ್ಣ ಬಿರುಕುಗಳು ಹಾಗೂ ಅಲ್ಲಲ್ಲಿ ರಸ್ತೆ ಕುಸಿತ ಕಂಡು ಬಂದ ಹಿನ್ನೆಲೆ ದಿ: 15-09-2023 ರವರೆಗೆ ಅಧಿಸೂಚಿಸಲಾಗಿದ್ದ ಭಾರೀ ವಾಹನ ಸಂಚಾರ ನಿಷೇಧವನ್ನು ಹಿಂಪಡೆದು ಸಂಚಾರಕ್ಕೆ ಅನುವು ಮಾಡಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆರ್ ಆದೇಶಿಸಿದ್ದಾರೆ.

ಈ ರಸ್ತೆಯಲ್ಲಿ ಭಾರೀ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕೆಂದು ಸಾರ್ವಜನಿಕರು, ಜನಪ್ರತಿನಿಧಿಗಳ ಕೋರಿಕೆಯನ್ನು ಪರಿಗಣನೆ ತೆಗೆದುಕೊಂಡು ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ-ಮಲ್ಪೆ ರಸ್ತೆ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧವನ್ನು ಹಿಂಪಡೆದು ಸಂಚಾರಕ್ಕೆ ಅನುವು ಮಾಡಿ ಆದೇಶಿಸಿದ್ದಾರೆ.


   

ಇನ್ನಷ್ಟು ಸುದ್ದಿಗಳು