ತೀರ್ಥಹಳ್ಳಿ ಆಗುಂಬೆ ಸರ್ಕಲ್​ನಲ್ಲಿನ ಗಲಾಟೆ ಕೇಸ್! ಆರು ಮಂದಿ ಅರೆಸ್ಟ್! ಅವತ್ತು ನಡೆದಿದ್ದೇನು? ಪೊಲೀಸ್ ಪ್ರಕಟಣೆಯಲ್ಲಿ ಏನಿದೆ?

ತೀರ್ಥಹಳ್ಳಿ ಆಗುಂಬೆ ಸರ್ಕಲ್​ನಲ್ಲಿ ನಡೆದ ಹೊಡೆದಾಟ ಕೇಸ್! ಆರು ಮಂದಿ ಅರೆಸ್ಟ್! ಅವತ್ತು ನಡೆದಿದ್ದೇನು? ಪೊಲೀಸ್ ಪ್ರಕಟಣೆಯಲ್ಲಿ ಏನಿದೆ?Thirthahalli Agumbe Circle Clash Case! Six people have been arrested! What happened that day? What's in the police notification?

ತೀರ್ಥಹಳ್ಳಿ ಆಗುಂಬೆ ಸರ್ಕಲ್​ನಲ್ಲಿನ ಗಲಾಟೆ ಕೇಸ್! ಆರು ಮಂದಿ ಅರೆಸ್ಟ್!   ಅವತ್ತು ನಡೆದಿದ್ದೇನು? ಪೊಲೀಸ್ ಪ್ರಕಟಣೆಯಲ್ಲಿ ಏನಿದೆ?

KARNATAKA NEWS/ ONLINE / Malenadu today/ Jul 18, 2023 SHIVAMOGGA NEWS

ತೀರ್ಥಹಳ್ಳಿ/ ಪಟ್ಟಣದ ಆಗುಂಬೆ ಸರ್ಕಲ್​ ನಲ್ಲಿ ನಡೆದಿದ್ದ ನಡು ಬೀದಿ ಹೊಡೆದಾಟದ ಪ್ರಕರಣ ಸಂಬಂಧ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಕಟಣೆಯನ್ನು ನೀಡಿದೆ. ದಿನಾಂಕಃ 11-07-2023 ರಂದು  ನಡೆದಿದ್ದ ಘಟನೆ ಸಂಬಂಧ ಆರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. 

ಬಂಧಿತರು

1) ಸಮೀರ್ @ ಚೋರ್ ಸಮೀರ್, 30 ವರ್ಷ, ಇಂದಿರಾನಗರ ತೀರ್ಥಹಳ್ಳಿ, 

2) ಮೊಹಮ್ಮದ್ ಸಫಾನ್, 22 ವರ್ಷ, ಇಂದಿರಾನಗರ ತೀರ್ಥಹಳ್ಳಿ, 

3) ರೆಹಮಾಬ್ @ ರೆಹಾನ್ ಅಲಿ, ಸಂತೆ ಮಾರ್ಕೇಟ್, ತೀರ್ಥಹಳ್ಳಿ, 

4) ಮೊಹಮ್ಮದ್ ಅಫ್ತಾಬ್, 20 ವರ್ಷ, ಸೀಬಿನಕೆರೆ ತೀರ್ಥಹಳ್ಳಿ, 

5) ಮೊಹಮ್ಮದ್ ಅರ್ಷದ್, 43 ವರ್ಷ, ಸೊಪ್ಪುಗುಡ್ಡೆ ತೀರ್ಥಹಳ್ಳಿ 

6) ಡೆನ್ಸಿಲ್ ಡಿಸೋಜ, 29 ವರ್ಷ, ಇಂದಿರಾನಗರ ತೀರ್ಥಹಳ್ಳಿ  

ಘಟನೆ ನಡೆದಿದ್ದೇನು?

 ದಿನಾಂಕಃ 11-07-2023 ರಂದು ಸಂಜೆ ತೀರ್ಥಹಳ್ಳಿ ತಾಲ್ಲೂಕಿನ ವಾಸಿಗಳಾದ ಅಫ್ರೋಜ್ ಮತ್ತು ಆತನ ಸ್ನೇಹಿತರು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಗುಂಬೆ ಸರ್ಕಲ್  ಬಳಿ ಹೋಗುತ್ತಿದ್ದರು. ಈ ವೇಳೇ  ಸಮೀರ್, ಸಫಾನ್ ಹಾಗೂ ಆತನ ಕಡೆಯವರು ಅಡ್ಡಗಟ್ಟಿ  ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ. ಅಲ್ಲದೆ  ಅಫ್ರೋಜ್ ನನ್ನು ಮಚ್ಚು ಹಿಡಿದು ಅಟ್ಟಾಡಿಸಿದ್ದರು. ಈ ಸಂಬಂಧ ತೀರ್ಥಹಳ್ಳಿ ಪೊಲೀಸರು ಐಪಿಸಿ 143, 144, 147, 148, 341, 323, 324, 307, 504 ಸಹಿತ 149 ಕೇಸ್ ದಾಖಲಿಸಿದ್ದರು. 


ಶಿವಮೊಗ್ಗದ ಈ ಭಾಗಗಳಲ್ಲಿ ಎರಡು ದಿನ ಇರೋದಿಲ್ಲ ವಿದ್ಯುತ್ ! ಎಲ್ಲೆಲ್ಲಿ? ಯಾವಾಗ ! ಪೂರ್ಣ ವಿವರ ಇಲ್ಲಿದೆ ಓದಿ

ಎಲ್ಲೆಂದರಲ್ಲಿ ಉಗಿಯಬೇಡಿ! ಭದ್ರಾವತಿ ಕೋರ್ಟ್​ನಲ್ಲಿ ಗುಟ್ಕಾ ಉಗಿದಿದ್ದಕ್ಕೆ ಏನಾಯ್ತು ಗೊತ್ತಾ!?

ಭದ್ರಾವತಿ / ಬಾಯ್ತುಂಬಾ ಗುಟ್ಕಾ ಹಾಕಿ ಎಲ್ಲಂದರಲ್ಲಿ ಉಗಿಯುವ ಅಭ್ಯಾಸ ಕೆಲವರಿಗೆ ಇರುತ್ತದೆ. ಅಂತಹ ವ್ಯಕ್ತಿಯೊಬ್ಬರಿಗೆ ಭದ್ರಾವತಿ ಕೋರ್ಟ್ ಜಡ್ಜ್  ತಕ್ಕ ಪಾಠವನ್ನು ಕಲಿಸಿದ್ಧಾರೆ. ಭದ್ರಾವತಿ ಹೆಚ್ಚುವರಿ ಸಿವಿಲ್ ಹಿರಿಯ ನ್ಯಾಯಾಲದ, ಹೊರ ಭಾಗದ ಗೋಡೆಯೊಂದರ ಮೇಲೆ ಅಲ್ಲಿಯೇ ನಿಂತಿದ್ದ ವ್ಯಕ್ತಿಯೊಬ್ಬ ಗುಟ್ಕಾ ಜಗಿದು ಉಗಿಯುತ್ತಿದ್ದ, ಆಕಸ್ಮಾತ್​ ಆಗಿ ಇದನ್ನು ನ್ಯಾಯಾದೀಶರು ಕಂಡಿದ್ದಾರೆ. ತಕ್ಷಣವೇ ಆತನ ಪೊಲೀಸರ ಜೊತೆಯಲ್ಲಿ ಉಗುಳಿತಿದ್ದ ವ್ಯಕ್ತಿಯನ್ನು ಕರೆಸಿಕೊಂಡಿದ್ದಾರೆ. ಅಲ್ಲದೆ ಉಗಿದು ಗಲೀಜು ಮಾಡಿದ್ದನ್ನ ಆತನಿಂದಲೇ ಕ್ಲೀನ್ ಮಾಡಿಸಿದ್ದಾರೆ. ಬಳಿಕ ಅಲ್ಲಿದ್ದ ಸಾರ್ವಜನಿಕರಿಗೆ  ಈ ರೀತಿ ಮಾಡದಿರಿ ಎಂದು ತಿಳಿ ಹೇಳಿದ್ದಾರೆ


ಕೆಎಎಸ್​ ಅಧಿಕಾರಿಗಳ ವರ್ಗಾವಣೆ! ಶಿವಮೊಗ್ಗಕ್ಕೆ ಮೂವರು ಆಫಿಸರ್​ ಟ್ರಾನ್ಸಫರ್​! ಯಾವ್ಯಾವ ಸ್ಥಾನಕ್ಕೆ ಯಾರು ಆಯ್ಕೆ! ಇಲ್ಲಿದೆ ಡಿಟೇಲ್ಸ್!

ಶಿವಮೊಗ್ಗದ ಪ್ರಮುಖ ಭಾಗಗಳಲ್ಲಿ ಜುಲೈ 19 ರಂದು ಇಡೀದಿನ ಇರೋದಿಲ್ಲ ಕರೆಂಟ್ ! ಎಲ್ಲೆಲ್ಲಿ? ವಿವರ ಇಲ್ಲಿದೆ

ಪೋಸ್ಟ್ ಆಫೀಸ್​ನಲ್ಲಿ SB ಅಕೌಂಟ್ ಇದೆಯಾ? ಆಧಾರ್ ಲಿಂಕ್ ಮಾಡಿಸಿದ್ದೀರಾ? ಇಲ್ಲದಿದ್ದರೇ ರದ್ದಾಗುತ್ತೆ ಈ ಸೌಲಭ್ಯ! ವಿವರ ಓದಿ!

ಬಿತ್ತಿದ ಜೋಳಕ್ಕಾಗಿ ಹೊಲದಲ್ಲೇ ಹೊಡೆದಾಟ! ಶಿವಮೊಗ್ಗದಲ್ಲಿ ತಾರಕಕ್ಕೇರಿದ ಅನ್ನದಾತರ ಕಾಳಗ! ವಿಡಿಯೋ ಸ್ಟೋರಿ