ನೋಟ್ ಬ್ಯಾನ್ ಟೈಂನಲ್ಲಿ ನೋಟ್ ಎಕ್ಸ್​ಚೇಂಜ್​ ಹೆಸರಲ್ಲಿ ನಡೆದಿತ್ತು ಎಲ್ಲಿಯು ಕೇಳದಂತಹ ಕೃತ್ಯ! 27 ಕೇಸ್​, 18 ವಾರಂಟ್ ! ಶಿವಮೊಗ್ಗ-ಬೆಂಗಳೂರು! JP FLASHBACK

Do you know that the gang who committed robbery in Shimoga and took shelter in Bangalore was caught? ಶಿವಮೊಗ್ಗದಲ್ಲಿ ದರೋಡೆ ನಡೆಸಿ, ಬೆಂಗಳೂರಲ್ಲಿ ಶೆಲ್ಟರ್ ಪಡೆದಿದ್ದ ಗ್ಯಾಂಗ್ ಸಿಕ್ಕಿಬಿದ್ದಿದ್ದೇಗೆ ಗೊತ್ತಾ

ನೋಟ್ ಬ್ಯಾನ್  ಟೈಂನಲ್ಲಿ ನೋಟ್ ಎಕ್ಸ್​ಚೇಂಜ್​ ಹೆಸರಲ್ಲಿ ನಡೆದಿತ್ತು ಎಲ್ಲಿಯು ಕೇಳದಂತಹ ಕೃತ್ಯ!  27 ಕೇಸ್​, 18 ವಾರಂಟ್ ! ಶಿವಮೊಗ್ಗ-ಬೆಂಗಳೂರು!  JP FLASHBACK

KARNATAKA NEWS/ ONLINE / Malenadu today/ Sep 5, 2023 SHIVAMOGGA NEWS 

ನೋಟ್ ಬ್ಯಾನ್​ ಆಗಿದ್ದಾಗ,  ಕಮಿಷನ್ ಆದಾರದಲ್ಲಿ ಎಕ್ಸ್​ಚೇಂಜ್​  ಮಾಡಿಸಿಕೊಡುವವರನ್ನು ಬಹಳಷ್ಟು ಜನರು ಹುಡುಕಾಡುತ್ತಿದ್ದರು. ಅವರ ಜೊತೆ  ನಟೋರಿಯಸ್ ಗ್ಯಾಂಗ್ ಒಂದು ಕೂಡ ಅಂತಹ ಕಮಿಷನ್​ ಎಕ್ಸ್​ಚೆಂಜ್ ದಾರರು ಎಲ್ಲಿದ್ದಾರೆ ಎಂದು ಹುಡುಕಾಡುತ್ತಿದ್ರು.  ಅಲ್ಲದೆ ನಾವು ಪಿಲ್ಡ್ ಗೆ ಎಂಟ್ರಿ ಕೊಟ್ರೆ ತಪ್ಪಾಗುತ್ತೆ ಅಂತಾ ಕಾಲೇಜು ಸ್ಟೂಡೆಂಟ್​ಗಳನ್ನು ಮುಂದಿಟ್ಟುಕೊಂಡು ಡೀಲ್​ ಕುದುರಿಸಿತ್ತು. ಆದರೆ ಆನಂತರ ಅಲ್ಲಿ ನಡೆದಿದ್ಧೆ ಬೇರೆ.. 

ಇನ್ನೊಂದು ಕಡೆ. ಕೋಟಿಗಟ್ಟಲೇ ಸಂಪಾದಿಸಲು ಹೊರಟು, ಕಮಿಷನ್ ಆಸೆಗೆ ನೋಟು ಬದಲಾವಣೆಗೆ ಹೋದವನು ಗ್ಯಾಂಗ್​ಲೂಟಿ ಮಾಡಿತ್ತು.  ನಡೆದ ದರೋಡೆ ಕೇಸನ್ನ ಪತ್ತೆ ಮಾಡಲು ಹೋದ ಪೊಲೀಸರು ನೋಟ್​ ಎಕ್ಸ್​ಚೇಂಜ್​ ಗ್ಯಾಂಗ್​ನ್ನ ಹಿಡಿದಿತ್ತು…  ಇವತ್ತಿನ ಜೆಪಿ ಫ್ಲ್ಯಾಶ್ ಬ್ಯಾಕ್​

2017 ಡಿಸೆಂಬರ್​ 5

2017 ರ ಅಪರಾಧ ಜಗತ್ತಿನ ಕಥೆಯಿದು. ಆ ವರ್ಷದಲ್ಲಿ ನೋಟ್ ಬ್ಯಾನ್ ಕ್ರೈಂ ಪ್ರಕರಣಗಳು ಹೆಚ್ಚು ಸದ್ದು ಮಾಡಿತ್ತು. 500 ಮತ್ತು ಸಾವಿರ ರೂಪಾಯಿ ನೋಟು ಬ್ಯಾನ್ ಆಗ್ತಿದ್ದಾ ಹಾಗೆ, ಹೂತಿಟ್ಟಿದ್ದ ದುಡ್ಡೆಲ್ಲಾ ಹೊರಕ್ಕೆ ಬರಲು ಆರಂಭಿಸಿದ್ದವು. ಬ್ಲಾಕ್ ಮನಿ ಹೊಂದಿರುವವರು ತಮ್ಮಲ್ಲಿನ ಕಪ್ಪು ಹಣವನ್ನು ವೈಟ್ ಮಾಡಿಕೊಳ್ಳೋದಕ್ಕೆ ವಿವಿಧ ರೀತಿಯ ವಾಮಮಾರ್ಗವನ್ನು ಅನುಸರಿಸಿದ್ದರು. 

ದುಡ್ಡು ದುಡ್ಡು ದುಡ್ಡು

ಆ ಸಂದರ್ಭದಲ್ಲಿ ಬ್ಯಾಂಕ್ ಎಟಿಎಂ ಗಳಲ್ಲಿ ಕ್ಯೂ ನಿಂತ ಬಡವರಿಗೆ ಸಿಕ್ಕ 2000 ರೂಪಾಯಿ ನೋಟುಗಳಿಗಳಿಂತಲೂ,  ಗುಲಾಬಿ ನೋಟುಗಳು  ಶ್ರೀಮಂತರ ಮನೆಯ ಟ್ರೆಜರಿ  ಸೇರಿದ್ದೆ ಹೆಚ್ಚು. ಈ ನಡುವೆ ನೋಟು ಎಕ್ಸ್​ಚೇಂಜ್ ಮಾಡಿಕೊಡುವ ದಂಧೆ ಕೂಡ ಜೋರಾಗಿ ನಡೆದಿತ್ತು. ಅದರಲ್ಲಿ ತಾವ್ಯಾಕೆ ಒಂದು ಕೈ ನೋಡಬಾರದು ಎಂದುಕೊಂಡ ಆ ಟ್ರಮಂಡಸ್ ಗ್ಯಾಂಗ್  ಫಿಲ್ಡ್ ಗೆ ಎಂಟ್ರಿ ಕೊಡೋದಕ್ಕೆ ಅಣಿಯಾಗಿತ್ತು. ಆದರೆ ರೌಡಿಗಳು ವ್ಯವಹಾರ ಮಾಡಿದರೇ ನಂಬಿಕೆ ಬಿಕರಿಯಾಗಲ್ಲ. ಹೀಗಾಗಿ ಅವರು ಕಾಲೇಜು ವಿದ್ಯಾರ್ಥಿಗಳನ್ನು ತಮ್ಮ ವ್ಯವಹಾರಕ್ಕೆ ಬಳಸಿಕೊಳ್ಳಲು ಮುಂದಾಗಿದ್ರು.  

ನಡೀತು ದರೋಡೆ

ಇಂತಹದ್ದೊಂದು ಪ್ಲಾನ್ ತಯಾರಾದ ಬೆನ್ನಲ್ಲೆ ಭದ್ರಾವತಿಯಲ್ಲಿ ಒಂದು ಇನ್ಸಿಡೆಂಟ್ ಆಗಿತ್ತು.  ಅದು ಬೈಪಾಸ್ ರಸ್ತೆಯ ಒಂದು ಜಾಗ. ಅವತ್ತು ಡಿಸೆಂಬರ್ 5 2017   ರ ರಾತ್ರಿ 9 ಗಂಟೆ ಮಾರುತಿ ಓಮ್ನಿ ಕಾರನ್ನು ಅಡ್ಡಗಟ್ಟಿದ್ದ ದರೋಡೆಕೋರರು ಕಾರಿನಲ್ಲಿದ್ದ ವ್ಯಕ್ತಿಯನ್ನ ಬೆದರಿಸಿ 15  ಲಕ್ಷ ರೂಪಾಯಿನ್ನ ಲೂಟಿ ಮಾಡಿದ್ದರು. ಆ ಟೈಂನಲ್ಲಿ ಅಷ್ಟೊಂದು ದುಡ್ಡು ಹಿಡ್ಕೊಂಡು ಓಡಾಡುವುದು ಕಷ್ಟವೇ ಆಗಿತ್ತು. ಆದರೆ ಹಾಲಿನ ವ್ಯಾಪಾರದ ದುಡ್ಡನ್ನ ಹಿಡಿದುಕೊಂಡು ಹೋಗ್ತಿದ್ದವನನ್ನ ದರೋಡೆ ಕೋರರ ಟೀಂ ಲೂಟಿ ಮಾಡಿತ್ತು. 

ದಾಖಲಾಯ್ತು ಕೇಸ್ 

ಈ ವಿಚಾರ ಪೊಲೀಸ್ ಕಂಪ್ಲೇಂಟ್ ಆಗಿ ಅಂದಿನ ಎಸ್​ಪಿ ಅಭಿನವ್ ಖರೆಯವರ ಗಮನಕ್ಕೆ ಬರುತ್ತೆ  ಅಂದಿನ ಡಿಸಿಬಿ ಇನ್ಸ್ ಪೆಕ್ಟರ್ ಕುಮಾರ್,ಡಿ.ಎಸ್.ಬಿ ವಿಭಾಗದ ಮುತ್ತಣ್ಣಗೌಡ,ಡಿ.ಸಿ.ಐ.ಬಿ ವಿಭಾಗದ ಇನ್ಸ್ ಪೆಕ್ಟರ್ ಚಂದ್ರಶೇಖರ್ ಒಳಗೊಂಡ ಒಟ್ಟು ಹದಿಮೂರು ಮಂದಿಯ ಸಿಬ್ಬದಿಗಳ ತಂಡ ರೆಡಿಯಾಗುತ್ತೆ.  ಪೊಲೀಸ್ ಸಿಬ್ಬಂದಿಗಳಾದ ನಾಗೇಶ್,ನಾಗರಾಜ್,ರೆಹಮಾನ್ ,ಇಂದ್ರೇಶ್ ಉದಯ್ ಕುಮಾರ್,ಹಬಿಬುಲ್ಲ.ಚೂಡಾಮಣಿ,ಜಗದೀಶ್,ವಿಠೋಬರಾವ್,ಶ್ರೀಧರ್,ರೆಹಮಾನ್,ವೆಂಕಟೇಶ್,ಪ್ರವೀಣ್ ಮತ್ತು ಸತೀಶ್ ರಾಜ್ ಒಳಗೊಂಡ ಸಿಬ್ಬಂದಿಗಳನ್ನೇ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. 

ತನಿಖೆ ಆರಂಭ

ಆರಂಭಿಕ ಹಂತದಲ್ಲಿ ದರೋಡೆಗೊಳಗಾದ ವ್ಯಕ್ತಿಯ ಬಳಿಯಲ್ಲಿ ಹಾಲಿನ ವ್ಯಾಪಾರದ ದುಡ್ಡು ಇರೋ ಮಾಹಿತಿ ಯಾರ್ಯಾರಿಗೆ ಗೊತ್ತಿತ್ತು ಎಂಬುದನ್ನ ಪೊಲೀಸರು ವಿಚಾರಿಸ್ತಾರೆ. ಈ ವೇಳೆ ವಿದ್ಯಾರ್ಥಿಗಳಿಬ್ಬರು ದರೋಡೆಗೆ ಒಳಗಾಗಿದ್ದ ವ್ಯಕ್ತಿಯನ್ನು ಸಂಪರ್ಕಿಸಿದ್ದರು ಎಂಬ ಮಾಹಿತಿ ಸಿಗುತ್ತದೆ. ಆ ವಿಚಾರದ ಕೆದಕಿದ ಪೊಲೀಸರಿಗೆ ಹಳೆ  ನೋಟ್ ಎಕ್ಸ್​ಚೆಂಜ್ ನ ಸಂಗತಿ ತಿಳಿಯುತ್ತದೆ. 30 ಪರ್ಸೆಂಟ್ ಹೆಚ್ಚು ಹಳೇನೋಟು ಕೊಟ್ಟು, ನಿಗದಿತ ಅಮೌಂಟ್​ನ ಹೊಸ ನೋಟು ಎಕ್ಸ್​ಚೆಂಜ್​ನ ಮಾತುಕತೆಯಾಗಿರುವುದು ತಿಳಿಯುತ್ತದೆ. 

ಪೊಲೀಸರ ತನಿಖೆಗೆ ಸಿಕ್ತು ಹೊಸ ಹಾದಿ

ಆ ಡೀಲ್ ಗೆ  ದರೋಡೆಗೊಳಗಾದ ವ್ಯಕ್ತಿ ಒಪ್ಪಿಕೊಂಡು, ಮಾರುತಿ ವ್ಯಾನ್​​ನಲ್ಲಿ  15 ಲಕ್ಷ ಹೊಸ ನೋಟಿನ ಕಂತಿನೊಂದಿಗೆ ಬಂದಿದ್ದರು. ಆದರೆ, 500 ರೂಪಾಯಿನ ಒಂದು ನೋಟನ್ನು ತರದ ಗ್ಯಾಂಗ್​, ಕಂತೆ ಕಂತೆ ಹೊಸನೋಟನ್ನು ದರೋಡೆ ಮಾಡಿಕೊಂಡು ಪರಾರಿಯಾಗಿತ್ತು. ಸರಿ ಆಗಿದ್ದಾಯ್ತು, ಪೊಲೀಸರು ತನಿಖೆ ಮುಂದುವರಿಸುತ್ತಾರೆ. ದರೋಡೆಗೊಳಗಾದ ವ್ಯಕ್ತಿಯನ್ನು ಸಂಪರ್ಕಿಸಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸ್ತಾರೆ. ಗೌಪ್ಯವಾಗಿ ನಡೆದ ವಿಚಾರಣೆ ವೇಳೆ ವಿದ್ಯಾರ್ಥಿಗಳು  ಆರ್ ಹೆಸರಿನ ರೌಡಿಶೀಟರ್​ನ ಹೆಸರನ್ನು ಹೇಳುತ್ತಾರೆ. ಮುಂದಿನ ಹಂತವಾಗಿ ಪೊಲೀಸರು ವಿದ್ಯಾರ್ಥಿಗಳು ಹಾಗೂ ಅವರು ಹೇಳಿದ ಆರೋಪಿಯ ಮೊಬೈಲ್​ಗಳ ಪೂರ್ತಿ ಮಾಹಿತಿಯನ್ನು ತೆಗೆಸುತ್ತಾರೆ. ಆಗ  ಪೊಲೀಸರಿಗೆ ಕಾಣೋದು ಇದು ಹಂದಿ ಅಣ್ಣಿ ಗ್ಯಾಂಗ್​ನ ಕೃತ್ಯ ಎಂಬ ಕಟು ಸತ್ಯ..

ಹುಡುಕಾಟ ಶುರು

ಮೆಂಟಲ್ ಸೀನ, ವೆಂಕಟೇಶನ ಮರ್ಡರ್ ಕೇಸ್​ನಲ್ಲಿದ್ದ ಆರೋಪಿಗಳು ದರೋಡೆ ಮಾಡಿರೋದು ಪೊಲೀಸರಿಗೆ ಪಕ್ಕಾ ಆಗುತ್ತೆ. ಆರೋಪಿಗಳೆಲ್ಲಿ? ಪ್ರಶ್ನೆಗೆ ಉತ್ತರ ಹುಡುಕಿ ಹೊರಟ ಪೊಲೀಸರಿಗೆ ಲೊಕೇಷನ್​ ಬೆಂಗಳೂರು ಎನ್ನುವುದು ಗೊತ್ತಾಗುತ್ತದೆ.  ಕುಮಾರ್ ಮುತ್ತಣಗೌಡ ಹಾಗು ಚಂದ್ರಶೇಖರ್ ಟೀಂ ಸೀದಾ ಬೆಂಗಳೂರಿನತ್ತ ಪಯಣ ಬೆಳೆಸುತ್ತೆ.ಪೊಲೀಸ್ರು ಮೊದಲು ಮೆಜೆಸ್ಟಿಕ್ ಸುತ್ತಮುತ್ತಲ ಎಲ್ಲಾ ಲಾಡ್ಜ್ ಗಳನ್ನು ತಡಕಾಡುತ್ತಾರೆ. ಸರಿಸುಮಾರು 50 ಲಾಡ್ಜ್ ನೊಳಗೆ ತಲಾಶ್ ಮಾಡುತ್ತಾರೆ. ಆದರೆ ಗೂಗಲ್ ಲೊಕೇಷನ್​, ಒಂದು ಸ್ಪಷ್ಟ ಜಾಗವನ್ನೆ ತೋರಿಸುತ್ತಿರುತ್ತದೆ. 

ಹೆಚ್ಚಾಯ್ತು ಅನುಮಾನ

ಎಲ್ಲಿ ಹುಡುಕಿದ್ರೂ ಸಿಗದ ಆರೋಪಿಗಳ ಲೋಕೇಷನ್​ ಮಾತ್ರ ಒಂದೆ ಕಡೆ ತೋರಿಸುತ್ತಿದೆ. ಹೇಗಿದು ಎಂದುಕೊಂಡ ಪೊಲೀಸ್ ಟೀಂಗೆ ಎಸ್​ಪಿ ಅಭಿನವ್ ಖರೆ, ಹಿರಿಯ ಅಧಿಕಾರಿಗಳ ಸಹಾಯ ಒದಗಿಸ್ತಾರೆ. ಬೆಂಗಳೂರು ಪೊಲೀಸ್ ಟೀಂ ಜೊತೆಗೆ ಕೆಲವು ಹೋಟೆಲ್ ಮ್ಯಾನೇಜರ್​ಗಳ ನೆರವು ಸಹ ಸಿಗುತ್ತದೆ. ಆಗಲೇ ಅಸಲಿಗೆ ಆಟ ಶುರುವಾಗೋದು. 

 

ಐಡಿ ನೀಡ್ತು ನಟೋರಿಯಸ್  ಗ್ಯಾಂಗ್ ಸುಳಿವು.

ಹೌದು, ಹೋಟೆಲ್ ಮ್ಯಾನೇಜರ್​ಗಳನ್ನ ವಿಚಾರಿಸಿದಾಗ, ಒಂದು ಲಾಡ್ಜ್​ಗೆ  ಎಕ್ಸೆಂಟ್ ಕಾರಿನಲ್ಲಿ ಐವರು ಯುವಕರು ಬಂದಿರೋ ವಿಚಾರ ಗೊತ್ತಾಗುತ್ತದೆ. ಆದರೆ ಅವರೇನಾ ಆರೋಪಿಗಳು ಎಂಬುದು ಗೊತ್ತಾಗುವುದಿಲ್ಲ.ಹೀಗಾಗಿ ಪೊಲೀಸರು ಒಂದು ಪ್ಲಾನ್ ಮಾಡುತ್ತಾರೆ. ರಿಸಪ್ಶನ್ ಟೇಬಲ್​ನ ಸಿಸಿ ಟಿವಿ ಪೂಟೇಜ್ ಹಾಗೂ ಅಡ್ರೆಸ್ ಪ್ರೂಪ್ ಪಡೆಯುವಂತೆ ಮ್ಯಾನೇಜರ್​ಗಳಿಗೆ ಸೂಚಿಸ್ತಾರೆ. ಪೊಲೀಸರ ಅಣತಿಯಂತೆ ಅನುಮಾನಸ್ಪದ ವ್ಯಕ್ತಿಗಳ ಬಳಿ ತೆರಳಿದ ಮ್ಯಾನೇಜರ್​,  ಸರ್ ನೆನ್ನೆ ರಾತ್ರಿ ಅಡ್ರೆಸ್ ಪ್ರೂಫ್ ಕೇಳೋದು ನಮ್ ನೈಟ್ ಶಿಪ್ಟ್ ಮ್ಯಾನೇಜರ್ ಮರೆತಿದಾರೆ.ಅಡ್ರೆಸ್ ಪ್ರೂಫ್ ಇದ್ರೆ ಕೊಡಿ..ಇಲ್ಲ ಅಂದ್ರೆ ಮ್ಯಾನೆಜ್ ಮೆಂಟ್  ಪ್ರಾಬ್ಲಮ್​ ಆಗುತ್ತೆ  ಅಂತಾ ಹೇಳ್ತಾರೆ. ಲಾಡ್ಜ್ ನವರಿಗೆ ಅನುಮಾನ ಬಾರದ ರೀತಿ ಕಾರಿನಲ್ಲಿದ್ದ ಯುವಕ,ಅದಕ್ಕೇನಂತೆ ಸಾರ್,ತಗೊಳ್ಳಿ,,ನನ್ನದೇ ಅಡ್ರೆಸ್ ಪ್ರೂಫ್ ಅಂತಾ ಒರಿಜಿನಲ್ ಡಿಎಲ್ ತೋರಿಸುತ್ತಾನೆ.ಮೊಬೈಲ್ ನಲ್ಲಿ ಪೊಟೋ ಕ್ಲಿಕ್ಕಿಸಿಕೊಂಡ ಮ್ಯಾನೇಜರ್ ಆಯ್ತು ಸಾರಿ ಹೊರಡಿ ಅಂತಾ ಹೇಳಿ ಇತ್ತ,ಪೋಟೋ ಹಾಗು ರಿಸೆಪ್ಷನ್ ಕೌಂಟರ್ ವಿಡಿಯೋವನ್ನು ಇನ್​ಸ್ಪೆಕ್ಟರ್ ಕುಮಾರ್ ಗೆ ವಾಟ್ಸಾಪ್ ನಲ್ಲಿ ಕಳುಹಿಸ್ತಾರೆ.

ಪೋಟೋ ವಿಡಿಯೋ ವಿಷ್ಯುವಲ್ ನೋಡಿದ ಪೊಲೀಸ್ರಿಗೆ ಆಗಿತ್ತು ಶಾಕ್.

ಲಾಡ್ಜ್ ಮ್ಯಾನೇಜರ್ ಕಳುಹಿಸಿದ ಪೋಟೋ ಮತ್ತು ಸಿಸಿ ಟಿವಿ ವಿಷ್ಯುವಲ್ ನೋಡಿದ ಪೊಲೀಸ್ರು ಕ್ಷಣಕಾಲ ದಂಗಾಗಿ ಹೋಗಿದ್ದರು. ಅರೆ ಪ್ರೊಕ್ಲಮೇಷನ್ ಡಿಕ್ಲೇರ್ ಆಗಿರೋ ಆರೋಪಿಗಳಲ್ವೆ ಇವರು..ಪೊಲೀಸ್ರಿಗೆ ಮತ್ತು ನ್ಯಾಯಾಲಯದ ಕಣ್ಣಿಗೆ ಮಣ್ಣೆರೆಚಿ ಓಡಾಡ್ತಿರೋ ಗ್ಯಾಂಗ್ ಇದೇ ಅಲ್ವಾ ಅಂತಾ..ಕುಮಾರ್,ಮುತ್ತಣ್ಣ ಗೌಡ ಮೈಯಲ್ಲ ಕಣ್ಣಾಗಿ ಬಿಡುತ್ತಾರೆ. ಬ್ಯಾಂಕ್ ಮ್ಯಾನೇಜರ್ ಕಳುಹಿಸಿದ ಪೋಟೋ  ಹಾಗೂ ಸಿಸಿ ಟಿವಿ ಪೂಟೇಜ್ ನಲ್ಲಿದ್ದವರು ಹಂದಿ ಅಣ್ಣಿಯ ಹುಡುಗ್ರು ಎಂಬುದು ಗೊತ್ತಾಗುತ್ತೆ.  ಅವರೆಲ್ಲರ ಮೇಲೆ 27 ಕೇಸುಗಳಿದ್ದವು.  ನ್ಯಾಯಾಲಯದಿಂದ 18 ವಾರೆಂಟ್ ಗಳು ಜಾರಿಯಾಗಿದ್ದವು.  ಇವರ ಬಗ್ಗೆ ಡಂಗೂರ ಸಾರ್ಸಿ,ಮನೆ ಮುಂದೆ ನೋಟಿ ಅಂಟಿಸಿ ,ಪ್ರೊಕ್ಲಮೇಷನ್ ಕೂಡ ಹೊರಡಿಸಲಾಗಿತ್ತು. .ಆದ್ರೆ ಇವರ್ಯಾರು ಅಲ್ಲಿಯವರೆಗೆ  ಪೊಲೀಸ್ರಿಗೆ ಸಿಕ್ಕಿಬಿದ್ದಿರಲಿಲ್ಲ. 

ಬೆಂಗಳೂರಿನಿಂದ ಶಿವಮೊಗ್ಗದತ್ತ ಹೊರಟಿತ್ತು ಟೀಂ.

ಸರಿ ಆಯ್ತು,ಎಲ್ಲರನ್ನೂ ಹಿಡಿಯಬೇಕು ಒಬ್ಬರು ತಪ್ಪಿಸಿಕೊಳ್ಳಬಾರದು ಎಂಬ ನಿರ್ಣಯಕ್ಕೆ ಬಂದ ಪೊಲೀಸ್ ಟೀಂ . ಅಷ್ಟೊತ್ತಿಗೆ ಲಾಡ್ಜ್​ನಲ್ಲಿ ಶೆಲ್ಟರ್ ಪಡೆದಿದ್ದ ಟೀಂ ಬೆಂಗಳೂರಿನಿಂದ ಶಿವಮೊಗ್ಗದೆಡೆಗೆ ವಾಪಸ್ಸಾಗುಲು ಅಣಿಯಾಗಿತ್ತು. ಈ ವೇಳೆ ಕುಮಾರ್ ಹಾಗು ಮುತ್ತಣ್ಣ ಟೀಂ ಎಲ್ಲರನ್ನು ವಶಕ್ಕೆ ಪಡೆದು,ಭದ್ರಾವತಿಯ ನ್ಯೂಟೌನ್ ಪೊಲೀಸರ ಸುಪರ್ಧಿಗೆ ನೀಡುತ್ತೆ.

15 ಲಕ್ಷ ರೂಪಾಯಿಯಲ್ಲಿ ಒಂದು ಶಿಪ್ಟ್ ಕಾರು ಖರೀದಿ.

9 ಮಂದಿ ಆರೋಪಿಗಳು ಒಟ್ಠಾಗಿ ಸಿಕ್ಕಿಬಿಳ್ತಾರೆ. ಅವರ ವಿಚಾರಣೆಯಲ್ಲಿ ಹಣಕ್ಕಾಗಿ ದರೋಡೆ ಮಾಡಿದ ವಿಚಾರ ಗೊತ್ತಾಗುತ್ತದೆ. 30 ಪರ್ಸೆಂಟ್​ ಹೆಚ್ಚುವರಿಯಾಗಿ ಹಳೆ ನೋಟು ಕೊಡುತ್ತೇವೆ, ಹೊಸ ನೋಟು ಕೊಡಿ ಎಂದು ದರೋಡೆಗೊಳಗಾಗಿದ್ದ ವ್ಯಕ್ತಿಯನ್ನು ಇವರು ತಮ್ಮ ಸ್ನೇಹಿತರ ಮೂಲಕ ಸಂಪರ್ಕಿಸಿದ್ದರು. ಆಮೇಲೆ ನಡೆದಿದ್ದು ಹೈಕ್ಲಾಸ್ ದರೋಡೆ… .

15 ಲಕ್ಷದಲ್ಲಿ ಉಳಿದಿದ್ದೆಷ್ಟು ಗೊತ್ತಾ 

ಹೌದು, ಆರೋಪಿಗಳು 15 ಲಕ್ಷ ರೂಪಾಯಿ ದರೋಡೆ ಮಾಡಿ ಬೆಂಗಳೂರಿಗೆ ಹೋಗಿ  80 ಸಾವಿರ ಬಾರ್ ನಲ್ಲಿದ್ದ ಹುಡುಗಿಯರ ಮೆಲೆ ಚೆಲ್ಲಿದ್ರು ,60 ಸಾವಿರ ಅಂದರ್ ಬಾಹರ್ ಆಡಿ ಕಳೆದಿದ್ದರು, .ಇನ್ನು ಒಂದು ಲಕ್ಷಕ್ಕೂ ಹೆಚ್ಚು ಮೋಜುಮಸ್ತಿ ಅಂತಾ ಖರ್ಚು ಮಾಡಿದ್ರು. ಒಂದು ಕಾರು ಖರೀದಿಸಿದ್ರು.  ಉಳಿದಿರೋದು 8 ಲಕ್ಷ ರೂಪಾಯಿ ಮಾತ್ರವಾಗಿತ್ತು.  

ಅವತ್ತು ನಡೆದಿದ್ದ ದರೋಡೆ ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ನೋಟ್ ಎಕ್ಸ್​ಚೇಂಜ್ ಹೆಸರಿನಲ್ಲಿ ಹೊಸ ನೋಟಿನ ಕಂತೆಗಳನ್ನು ಕಿತ್ತುಕೊಳ್ಳುವ ಮಾಸ್ಟರ್ ಪ್ಲ್ಯಾನ್​ ನ್ನು ಕೂಡ ಬಯಲು ಮಾಡಿದ್ದರು. ಆ ಸಮಯದಲ್ಲಿ ಕಮಿಷನ್​ಗೆ ಹಳೇನೋಟು ತಗೊಳ್ತಿದ್ದವರು ಘಟನೆ ನೋಡಿ ಬೆಚ್ಚಿ ಬಿದ್ದಿದ್ದರು.  


   

ಇನ್ನಷ್ಟು ಸುದ್ದಿಗಳು