ಆಗುಂಬೆ ಸಮೀಪ ಕಾರು ಪಲ್ಟಿ! ತೋಟದೊಳಗೆ ಬಿದ್ದ ವಾಹನ! ಚಿಕ್ಕಮಗಳೂರು ಮೂಲದ ಮೂವರಿಗೆ ಗಂಭಿರ ಗಾಯ
ಆಗುಂಬೆ ಸಮೀಪ ಕಲ್ಮನೆ ಬಳಿ ಕಾರು ಅಪಘಾತವಾಗಿದ್ದು ಚಿಕ್ಕಮಗಳೂರು ಜಿಲ್ಲೆ ತರಿಕೆರೆ ಮೂಲದ ಮೂವರಿಗೆ ಗಾಯವಾಗಿದೆ. A incident near Kalmane near Agumbe injured three people from Tarikere in Chikkamagaluru district.

KARNATAKA NEWS/ ONLINE / Malenadu today/ Sep 5, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು (Tirthahalli Taluk) ಕಲ್ಮನೆ ಸಮೀಪ ಕಾರೊಂದು ಪಲ್ಟಿಯಾಗಿ ತೋಟದೊಳಗೆ ಬಿದ್ದ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರಿ ಸ್ಥಳೀಯ ಆಸ್ಪತ್ರೆಯಲ್ಲಿ ಚಕಿತ್ಸೆ ನೀಡಲಾಗುತ್ತಿದೆ.
ಹೇಗಾಯ್ತು ಘಟನೆ
ಗಾಯಗೊಂಡವರುಚಿಕ್ಕಮಗಳೂರು ಜಿಲ್ಲೆ ತರಿಕೆರೆ ಮೂಲದವರು. ಕಾರ್ಕಳಕ್ಕೆ ತಮ್ಮ ಮಗನನ್ನು ಬಿಟ್ಟು ವಾಪಸ್ ಆಗುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಆಗುಂಬೆ ಸಮೀಪ ಸಿಗುವ ಕಲ್ಮನೆ ಬಳಿ ಕಾರ್ಕಳದಿಂದ ಬರುತ್ತಿದ್ದಾಗ, ವೇಗವಾಗಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಅಲ್ಲದೆ ರಸ್ತೆ ಬದಿಯಲ್ಲಿ ಪಲ್ಟಿಯಾಗಿ, ತಗ್ಗಿನಲ್ಲಿದ್ದ ತೋಟದೊಳಗೆ ಹೋಗಿ ಬಿದ್ದಿದೆ. ಪಲ್ಟಿಯಾದ ರಭಸಕ್ಕೆ ಕಾರಿನ ಡೋರ್ಗಳು ತೆಗೆಯಲು ಬರುತ್ತಿರಲಿಲ್ಲ.
ಇನ್ನೂ ಘಟನೆ ಬೆನ್ನಲೆ ಶಬ್ಧ ಕೇಳಿ ಓಡಿ ಬಂದ ಸ್ಥಳೀಯರು ಕಾರಿನ ಗಾಜನ್ನು ಒಡೆದು, ಕಾರಿನೊಳಗಿದ್ದ ಮೂವರನ್ನ ಹೊರತೆಗೆದಿದ್ದಾರೆ. ಬಳಿಕ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಿದ್ದಾರೆ. ಆಗುಂಬೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ
ಇನ್ನಷ್ಟು ಸುದ್ದಿಗಳು
-
ಬಾರ್ನಲ್ಲಿ ಎಣ್ಣೆ ಕೊಡ್ಲಿಲ್ಲ ಎಂದು ಸಿಬ್ಬಂದಿಯನ್ನ ಅಟ್ಟಾಡಿಸಿ ಹಲ್ಲೆ! ಬಿಹೆಚ್ ರೋಡ್ನಲ್ಲಿ ನಿನ್ನೆ ನಡೆದಿದ್ದೇನು?
-
ಸಚಿವರ ಶಾಕ್/ 48 ಗಂಟೆಯಲ್ಲಿ ಬದಲಾಯ್ತು ಶಿವಮೊಗ್ಗ AIRPORT ನಲ್ಲಿದ್ದ ಈ ವ್ಯವಸ್ಥೆ!