ಅಕ್ರಮದ ತನಿಖೆ ನಡುವೆ ಮುಂದುವರಿದ ಗುಂಡಿ ಅಗೆಯುವ ಕಾಮಗಾರಿ! ಸಚಿವರ ಆಕ್ಷೇಪಣೆ ನಡುವೆಯು ನಿರ್ವಿಘ್ನವಾಗಿ ನಡೆಯುತ್ತಿದೆ ಕೆಲಸ!?

Road side pit digging work continues amid illegal investigation! Despite the minister's objections, the work is going on uninterruptedly!?

ಅಕ್ರಮದ ತನಿಖೆ ನಡುವೆ ಮುಂದುವರಿದ ಗುಂಡಿ ಅಗೆಯುವ ಕಾಮಗಾರಿ! ಸಚಿವರ ಆಕ್ಷೇಪಣೆ ನಡುವೆಯು ನಿರ್ವಿಘ್ನವಾಗಿ ನಡೆಯುತ್ತಿದೆ ಕೆಲಸ!?

KARNATAKA NEWS/ ONLINE / Malenadu today/ Jun 10, 2023 SHIVAMOGGA NEWS 

ತೀರ್ಥಹಳ್ಳಿ  ತಾಲ್ಲೂಕಿನ ಗಬಡಿ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಗುಂಡಿ ಅಗೆದು ಪೈಪ್ ಲೈನ್ ಅಳವಡಿಸಲಾಗುತ್ತಿದೆ.. ಆದರೆ ಈ ಕಾಮಗಾರಿ ಜಲಜೀವನ ಮಿಷನ್ ಯೋಜನೆಯ ಉದ್ದೇಶ ಹಳ್ಳ ಹಿಡಿಸುವುದೇ ಅಧಿಕಾರಿಗಳ ಉದ್ದೇಶ ಎಂಬಂತಿದೆ.

ಏಕೆಂದರೆ, ತೀರ್ಥಹಳ್ಳಿಯ ರಾಷ್ಟ್ರೀಯ ಹೆದ್ದಾರಿ ಫೋರ್ ಟ್ರಾಕ್  ಆಗುವುದರಿಂದ ರಸ್ತೆ ಅಗಲವಾಗುತ್ತದೆ. ರಸ್ತೆ ಮತ್ತೆ ಅಗಲವಾದರೆ, ಪೈಪ್ ಲೈನ್ ರಸ್ತೆಯ ಒಳಗೆ ಸೇರುವ ಸಾಧ್ಯತೆಯೇ ಹೆಚ್ಚಿದೆ. ಆಗ ಮತ್ತೊಮ್ಮೆ ಪೈಪ್​ಗಳನ್ನ ಅಳವಡಿಸಬೇಕಾಗುತ್ತದೆ. ಈ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಆದರೆ ಯಾರೊಬ್ಬರು ಜನರ ಮಾತನ್ನು ಕೇಳುತ್ತಿಲ್ಲ ಎಂದು ಆರೋಪಿಸಲಾಗಿದೆ. 

ಕನಿಷ್ಟ  ಮುಂಜಾಗೃತ ಕ್ರಮವಾಗಿ ರಸ್ತೆಯಿಂದ ಸ್ವಲ್ಪ ದೂರ ಆಳದಲ್ಲಿ ಪೈಪ್ ಲೈನ್ ಅಳವಡಿಸಿದರೆ ಒಳ್ಳೆಯದು ಎಂಬ ಅಭಿಪ್ರಾಯ ಸ್ಥಳೀಯರಲ್ಲಿ ಕೇಳಿ ಬರುತ್ತಿದೆ. ಪ್ರತಿ ಮನೆಗೂ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂದು ಇತ್ತಿಚ್ಚೆಗೆ ಶಿವಮೊಗ್ಗದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ರು. ಈ ಯೋಜನೆಯಲ್ಲಾದ ಅಕ್ರಮದ ತನಿಖೆಯಾಗಬೇಕು ಎಂದು ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ ಒತ್ತಾಯಿಸಿದ್ರು.ಅಲ್ಲದೆ  ಜಲಜೀವನ ಮಿಷನ್ ಯೋಜನೆ ಅಕ್ರಮದ ಬಗ್ಗೆ ಸಿಇಓ ಮಟ್ಟದಲ್ಲಿ ಈಗಾಗಲೇ ತನಿಖೆಗೆ ಆದೇಶ ಮಾಡಲಾಗಿದೆ. ಇದರ ನಡುವೆ ಅವೈಜ್ಞಾನಿಕ ಕಾಮಗಾರಿಗಳು ಮುಂದುವರಿದಿದೆ.