MALENADUTODAY.COM |SHIVAMOGGA| #KANNADANEWSWEB
ಪೊಲೀಸರು ಬಳಸುವ ಎಫ್ಐಆರ್ ಭಾಷೆಗಳಿಗಿಂತಲೂ ಕೆಲವು ಕ್ರೈಂ ಸ್ಟೋರಿಗಳು ಡಿಫರೆಂಟ್ ಆಗಿರುತ್ತವೆ. ಅಂತರಾಳದಲ್ಲಿ ಇಂಟರ್ಸ್ಟಿಂಗ್ ವಿಚಾರಗಳನ್ನು ತುಂಬಿಕೊಂಡಿರುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಒಂದು ಕೇಸ್ ಇನ್ನೆಲ್ಲೋ ಮತ್ತೆಲ್ಲೋ ಸಂಬಂಧ ಹೊಂದುವ ಮುಖೇನ, ಮತ್ತೇನೋ ಆಗುವುದಕ್ಕೂ ಕಾರಣವಾಗಿರುತ್ತವೆ. ಆದರೆ ಪೊಲೀಸರ ಟೈಮಿಂಗ್ ಎಂಟ್ರಿಯಿಂದ ನಡೆಯಬಹುದಾದ ಘಟನೆಗಳು, ಜಸ್ ಮಿಸ್ ಆಗಿ, ಕ್ರೈಂ ಫೈಲ್ಗಳಲ್ಲಿ ದಾಖಲಾಗುತ್ತದೆ. ಇವತ್ತು ಸಹ ಅಂತಹದ್ದೊಂದು ಸ್ಟೋರಿ ಹೇಳೋದಿದೆ.
ವೀಕ್ಷಕರೇ ಇವತ್ತು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪೊಲೀಸರು , ಒಂದು ಪ್ರಕರಣ ಸಂಬಂಧ ಸೀಜ್ ಮಾಡಲಾದ ಪ್ರಾಪರ್ಟಿಗಳನ್ನು ಮಾಧ್ಯಮಗಳಿಗೆ ತೋರಿಸಿ ಪತ್ರಿಕಾ ಪ್ರಕಟಣೆಯ ಕಾಪಿಯನ್ನು ನೀಡುತ್ತಿದ್ರು. ಅಲ್ಲಿದ್ದ ಪ್ರಾಪರ್ಟಿ ಹಾಗೂ ಅದರ ಹಿಂದಿನ ಘಟನೆ ಬಗ್ಗೆ ಮಲೆನಾಡು ಟುಡೆ ತಂಡ ಈ ಮೊದಲೇ ವರದಿ ಮಾಡಿತ್ತು. ಅದರ ಲಿಂಕ್ ಇಲ್ಲಿದೆ ನೋಡಿ BREAKING | ಸಾಗರ ಪೊಲೀಸರ ಭರ್ಜರಿ ಕಾರ್ಯಾಚರಣೆ! ಮಂಗಳೂರಿನ ಸೃಜನ್ ಶೆಟ್ಟಿ ಸೇರಿ ಮೂವರ ಬಂಧನ !
ಮಂಗಳೂರು ಟು ಅಣೆಲೆಕೊಪ್ಪ!
ಮಂಗಳೂರಿನಿಂದ ಅಣಲೆಕೊಪ್ಪದ ಶುಂಠಿ ಕಣವೊಂದಕ್ಕೆ ಮಾರುತಿ ಶಿಫ್ಟ್ ಡಿಸೈರ್ನಲ್ಲಿ ಹೈಟೆಕ್ ಮಾದಕ ಮಾತ್ರೆ ಮತ್ತು ಪೌಡರ್ನ್ನ ತಂದಿದ್ದ ಮಂಗಳೂರು ಮೂಲದ 1) ಸೃಜನ್ ಎಸ್ ಶೆಟ್ಟಿ, 20 ವರ್ಷ, ತೋಡಾರ್ ಗ್ರಾಮ ಮಂಗಳೂರು ಹಾಗೂ ಮಾದಕ ವಸ್ತುಗಳನ್ನು ರಿಸೀವ್ ಮಾಡಿಕೊಂಡಿದ್ದ 2) ಮೊಹಮ್ಮದ್ ಸಮ್ಮಾನ್ @ ಸಲ್ಮಾನ್, 24 ವರ್ಷ, ಅಣಲೆಕೊಪ್ಪ, ಸಾಗರ ಟೌನ್ 3) ಮೊಹಮ್ಮದ್ ಯಾಸೀಫ್, 25 ವರ್ಷ, ಶ್ರೀಧರ್ ನಗರ ಸಾಗರ ಟೌನ್ ನನ್ನ, ಪೊಲೀಸರು ಇದೇ ಮಾರ್ಚ್ 13 ರಂದು ಸಿಂಪಲ್ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ರು. ಇವತ್ತು ಈ ಪ್ರಕರಣದಲ್ಲಿ ಜಪ್ತಿ ಮಾಡಿದ ಪ್ರಾಪರ್ಟಿ ಶೋ ಹಾಗೂ ಮಾಧ್ಯಮ ಪ್ರಕಟಣೆ ನೀಡಲಾಗಿದೆ.
8 ಲಾಂಗ್ ಜಪ್ತಿ!
ಇನ್ನೊಂದು ವಿಚಾರವೆಂದರೆ, ಇಲ್ಲಿ ಮಾದಕವಸ್ತು ಕೇಸ್ನಲ್ಲಿ 8 ಲಾಂಗ್ಗಳನ್ನು ಜಪ್ತಿ ಮಾಡಲಾಗಿದೆ. ಇದರ ಹಿಂದೆ ಬಲವಾದ ಕಾರಣವಿದೆ. ಪೊಲೀಸರು ಸಹ ಪ್ರಕಟಣೆಯಲ್ಲಿ ಇದರ ಬಗ್ಗೆಯು ತಿಳಿಸಿದ್ದಾರೆ. ಆರೋಪಿ ಎ1 ಸೃಜನ್ ಶೆಟ್ಟಿಯ ಮನೆಯಲ್ಲಿ ಈ ಲಾಂಗ್ಗಳು ಪತ್ತೆಯಾಗಿವೆ. ಈ ಸಂಬಂಧ ಸೃಜನ್ನನ್ನ ಕಸ್ಟಡಿಗೆ ತೆಗೆದುಕೊಂಡು ವಿಚಾರಿಸಿದಾಗ , ಆತ ಒಬ್ಬನನ್ನ ಕೊಲೆ ಮಾಡಲು ಸ್ಕೆಚ್ ಹಾಕಿರೋದು ಪತ್ತೆಯಾಗಿದೆ. ಈ ಕೊಲೆ ಸಂಚನ್ನ ವಿಫಲಗೊಳಿಸಿದ ಪೊಲೀಸರು, ಸೃಜನ್ ನೀಡಿದ ಮಾಹಿತಿಯಂತೆ, ತಿಲಕ್ ಎಂಬಾತನನ್ನ ಸಹ ಬಂಧಿಸಿದ್ಧಾರೆ.
ಡಾನ್ ಆಗಬೇಕು ಭಾಯಿ..!
ಅಸಲಿಗೆ ವಿಷಯ ಅಂದರೆ, ಈ ಸೃಜನ್ ಎಂಬಾತ ಕ್ರೈಂ ಲೋಕದಲ್ಲಿ ಹೆಸರು ಮಾಡಬೇಕು ಎಂಬ ಆಸೆಯನ್ನ ಹೊಂದಿದ್ದವ! ಇದಕ್ಕಾಗಿ ಕೆಲವು ಕ್ರೈಂ ಆಸಾಮಿಗಳ ಸಂಪರ್ಕಕ್ಕೆ ಬಂದಿದ್ದ. ಅವರುಗಳು ಈ ಸೃಜನ್ಗೆ ಮಾಲ್ ಸಪ್ಲೆ ಮಾಡುವ ಡೀಲ್ವೊಂದನ್ನ ನೀಡಿದ್ದರು. ಈ ಡೀಲ್ನ್ನ ಸಕ್ಸಸ್ ಮಾಡುವ ಉಮೇದಿನಲ್ಲಿದ್ದ ಸೃಜನ್. ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿರೋ ಕೈದಿಯೊಬ್ಬನಿಗೆ ಈತ ತಂದಿದ್ದ ಮಾದಕವಸ್ತು ಸಪ್ಲೆಯಾಗಬೇಕಿತ್ತು.
ಶಿವಮೊಗ್ಗ ಸಾಗರ ಜೈಲಿಗೆ ಬರಬೇಕಿತ್ತು ಮಾಲ್?
ಕ್ರೈಂ ಪ್ರಕರಣವೊಂದರಲ್ಲಿ ಸಾಗರ ಜೈಲಿನಲ್ಲಿ ಇಬ್ಬರು ಹಾಗೂ ಕೇಂದ್ರ ಕಾರಾಗೃಹದಲ್ಲಿದ್ದ ಒಬ್ಬ ಕೈದಿಗಾಗಿ ಈ ಮಾಲ್ ಮಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿತ್ತು. ರೌಡಿಸಂ ಚಟುವಟಿಕೆಯಲ್ಲಿ ಹೆಸರು ಮಾಡಬೇಕು ಅಂತಾ ಹೊರಟಿದ್ದ ಸೃಜನ್ಗೆ ಪುಸಲಾಯಿಸಿ ಆತನನ್ನ ಮಾಲ್ ಸಪ್ಲೆಗೆ ಅಣಿಯಾಗಿಸಿತ್ತು ಒಂದು ಟೀಂ. ಅವರು ಕೊಟ್ಟ ಮಾತ್ರೆ ಹಾಗೂ ಪೌಡರ್ಗಳನ್ನ ಹಿಡ್ಕೊಂಡು ಸೃಜನ್ ಸಾಗರಕ್ಕೆ ಬಂದಿದ್ದ. ಅಷ್ಟರಲ್ಲಿ ಪೊಲೀಸರಿಗೆ ಇನ್ಫಾರ್ಮೇಶನ್ ಲೀಕ್ ಆಗಿತ್ತು. ಪೊಲೀಸರು ಸೃಜನ್ನನ್ನ ಬಂಧಿಸಿದ್ದರು. ಜೊತೆಗೆ ರಿಸೀವರ್ಗಳನ್ನು ಅರೆಸ್ಟ್ ಮಾಡಿದ್ರು. ಅಂತಿಮವಾಗಿ ಇವತ್ತಿನ ದಿನ ಆ ಕಡೆ ಸಾಗರ ಪೊಲೀಸರು ಪ್ರಾಪರ್ಟಿ ಶೋ ನಡೆಸಿದ್ರೆ, ಇತ್ತ ಶಿವಮೊಗ್ಗ ಪೊಲೀಸರು ಕೇಂದ್ರ ಕಾರಾಗೃಹದ ಮೇಲೆ ರೇಡ್ ಮಾಡಿದ್ರು. BREAKING NEWS/ ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್ ಇಲಾಖೆಯ ದಿಢೀರ್ ರೇಡ್!
ಫಸ್ಟ್ ಕೇಸ್ನಲ್ಲಿ ಫಿಟ್ ಆದ
ಸೃಜನ್ ಶೆಟ್ಟಿ ಕೊಲೆ ಸ್ಕೆಚ್ನ ತನಿಖೆಯನ್ನು ಶಿವಮೊಗ್ಗ ಪೊಲೀಸರು ಮುಂದುವರಿಸಿದ್ದಾರೆ. ಆದರೆ ತಾನೊಬ್ಬ ಡಾನ್ ಆಗಬೇಕು ಎಂದು ಮಾಲ್ ಸಪ್ಲೆ ಮಾಡೋದಕ್ಕೆ ಶಿವಮೊಗ್ಗಕ್ಕೆ ಬಂದ ಮಂಗಳೂರು ಮೂಲದ ಸೃಜನ್ ಮೊದಲನೇ ಕೃತ್ಯದಲ್ಲಿಯೇ ಶಿವಮೊಗ್ಗ ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ಧಾನೆ. ಫಿಟ್ ಆ್ಯಂಡ್ ಸ್ಮಾರ್ಟ್ ಸಾಗರ ಪೊಲೀಸ್ ಟೀಂ ಬಾವಿ ಡಾನ್ಗೆ ಭರಪೂರ ಆತಿಥ್ಯ ನೀಡಿ ಇನ್ನಷ್ಟು ಸತ್ಯಗಳನ್ನು ಕಕ್ಕಿಸುತ್ತಿದೆ.
