ಪೊಲೀಸ್ ಇಲಾಖೆ  ಈಗಲೂ ಎಚ್ಚೆತ್ತುಕೊಳ್ಳಲಿಲ್ಲ ಎಂದ್ರೆ..ಮುಂದೆ ಕಾದಿದೆ ಗಂಡಾಂತರ. ಮಲೆನಾಡು ಟುಡೆಯ ಗ್ರೌಂಡ್ ರಿಯಾಲಿಟಿ ಸ್ಟೋರಿ

The police department still hasn't woken up... there is danger ahead. Here is the ground reality story of Malenadu Today.ಪೊಲೀಸ್ ಇಲಾಖೆ  ಈಗಲೂ ಎಚ್ಚೆತ್ತುಕೊಳ್ಳಲಿಲ್ಲ ಎಂದ್ರೆ..ಮುಂದೆ ಕಾದಿದೆ ಗಂಡಾಂತರ. ಮಲೆನಾಡು ಟುಡೆಯ ಗ್ರೌಂಡ್ ರಿಯಾಲಿಟಿ ಸ್ಟೋರಿ ಇಲ್ಲಿದೆ.

ಪೊಲೀಸ್ ಇಲಾಖೆ  ಈಗಲೂ ಎಚ್ಚೆತ್ತುಕೊಳ್ಳಲಿಲ್ಲ ಎಂದ್ರೆ..ಮುಂದೆ ಕಾದಿದೆ ಗಂಡಾಂತರ. ಮಲೆನಾಡು ಟುಡೆಯ ಗ್ರೌಂಡ್ ರಿಯಾಲಿಟಿ ಸ್ಟೋರಿ



KARNATAKA NEWS/ ONLINE / Malenadu today/ Oct 14, 2023 SHIVAMOGGA NEWS

ಪೊಲೀಸ್ ಇಲಾಖೆ  ಈಗಲೂ ಎಚ್ಚೆತ್ತುಕೊಳ್ಳಲಿಲ್ಲ ಎಂದ್ರೆ..ಮುಂದೆ ಕಾದಿದೆ ಗಂಡಾಂತರ. ಮಲೆನಾಡು ಟುಡೆಯ ಗ್ರೌಂಡ್ ರಿಯಾಲಿಟಿ ಸ್ಟೋರಿ ಇಲ್ಲಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನಗಳು ದಶಕಗಳಿಂದಲೂ ನಡೆಯುತ್ತಲೇ ಇದೆ. ಆದ್ರೆ ಶಿವಮೊಗ್ಗದಲ್ಲಿ ಮೊನ್ನೆ ಘಟಿಸಿದ ಘಟನೆ ನಗರದ ಆರ್ಥಿಕ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಮತೀಯ ಭಾವನೆ ಕೆರಳಿಸುವ ಸಂಘಟನೆಗಳಿಂದ ಆಗ್ಗಾಗ್ಗೆ ನಡೆಯುವ ಘಟನೆಗಳಿಂದಾಗಿ  ವಾರಗಟ್ಟಲೆ ಸೆಕ್ಷನ್ ಕರ್ಫೂ ವಿಧಿಸಲಾಗುತ್ತೆ

ಇದರಿಂದ ಜನತೆ ನಲುಗಿ ಹೋಗಿದ್ದಾರೆ.ಅದರಲ್ಲೂ ಕೊರೋನಾ ಲಾಕ್ ಡೌನ್ ನಿಂದ ತತ್ತರಿಸಿ ಹೋಗಿರುವ ಜನರು,ಆರ್ಥಿಕ ಚೇತರಿಕೆಗಾಗಿ ಹಪಹಪಿಸುತ್ತಿದ್ದಾರೆ.ಇಂತಹ ಸಂದರ್ಭದಲ್ಲಿಯೇ ಮತೀಯಭಾವನೆ ಕೆರಳಿಸುವವರು ನಗರಕ್ಕೆ ಬೆಂಕಿ ಇಡುವ ಪ್ರಯತ್ನ ಮಾಡುತ್ತಿದ್ದಾರೆ.

ಕೋಮು ಘಟನೆಗಳಿಂದ ಶಿವಮೊಗ್ಗದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ

 

ಶಿವಮೊಗ್ಗ ಮತೀಯವಾಗಿ ಅತ್ಯಂತ ಸೂಕ್ಷ್ಮ ಜಿಲ್ಲೆಯಾಗಿ ಗುರುತಿಸಿಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸ.ಇಲ್ಲಿ ಹಿಂದು ಮುಸ್ಲಿಂ ನಡುವೆ ಒಳ್ಳೆಯ ಭಾಂಧವ್ಯವಿದೆ.ಈ ಭಾಂದವ್ಯಕ್ಕೆ ಕೊಳ್ಳಿ ಇಡುವ ಪ್ರಯತ್ನಗಳು ರಾಜಕೀಯವಾಗಿ ನಡೆಯುತ್ತಲೇ ಇದೆ. 

ಹಿಂದು ಮುಸ್ಲಿಂ ರನ್ನು ಒಡೆದಾಳುವ ನೀತಿಗೆ ಜನಪ್ರತಿನಿಧಿಗಳೇ ಚಾಲನೆ ನೀಡಿದ್ದಾರೆ.ನಮಗೆ ಮುಸ್ಲಿಂ ಮತಗಳು ಬೇಡ,ಮುಸಲ್ಮಾನರಿಗೆ ಚುನಾವಣೆಯಲ್ಲಿ ಟಿಕೇಟ್ ಕೊಡುವುದಿಲ್ಲ ಎಂದು ಮಾದ್ಯಮಗಳಿಗೆ ಬಹಿರಂಗವಾಗಿ ಹೇಳಿಕೆ ಕೊಡುವ ರಾಜಕೀಯ ನಾಯಕರು,ಹಿಂದುತ್ವವನ್ನು ಗುರಾಣಿಯನ್ನಾಗಿ ಪ್ರಯೋಗಿಸುತ್ತಾ ಹೋದರೆ ಶಿವಮೊಗ್ಗದಲ್ಲಿ ಶಾಂತಿ ನೆಲೆಸಲು ಸಾಧ್ಯವೇ.?

ಹತಾಶ ಮನೋಭಾವಕ್ಕೆ ಒಂದು ಸಮುದಾಯವೇ ಬಂದು ನಿಂತರೆ ಅಂದರಿಂದ ಆಗುವ ಪ್ರಮಾದಗಳನ್ನು ಊಹಿಸಿಕೊಳ್ಳಲು ಸಾಧ್ಯವೇ..? ಬಿಜೆಪಿಯವರು ಹಿಂದುಗಳನ್ನು ಕಾಂಗ್ರೇಸ್ ನವರು ಮುಸ್ಲಿಂ ರನ್ನು ಓಲೈಸುತ್ತಾ ಹೋದರೆ..ಶಿವಮೊಗ್ಗದ ಜನತೆ ಶಾಶ್ವತವಾಗಿ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗುತ್ತದೆ.ಇದಕ್ಕೆ ಉದಾಹರಣೆ ಇತ್ತಿಚ್ಚಿನ ವರ್ಷಗಳಲ್ಲಿ ನಡೆದ ಮತೀಯ ಗಲಾಟೆಗಳು. ಅಲ್ಲದೆ ಮೊನ್ನೆ ನಡೆದ ರಾಗಿಗುಡ್ಡದ ಗಲಾಟೆ ಪ್ರಕರಣ.

.

ನಗರ ಅಶಾಂತವಾದರೆ,ಹಳ್ಳಿ ಜನ ಪೇಟೆಗೆ ಬರೋದಿಲ್ಲ

ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾದರೆ,ಹಳ್ಳಿಯ ಜನರು ಪೇಟೆಯತ್ತ ಮುಖ ಮಾಡುವುದಿಲ್ಲ. ಹಳ್ಳಿಯಿಂದ ಜನರು ಬಂದ್ರೇನೇ ನಗರದಲ್ಲಿ ವ್ಯಾಪಾರ ಬಿರುಸಿನಿಂದ ಸಾಗುತ್ತೆ .ಆದರೆ ಶಿವಮೊಗ್ಗ ನಗರದಲ್ಲಿ ವ್ಯಾಪಾರವೇ ಬಿದ್ದುಹೋಗಿದೆ.

ಶಿವಮೊಗ್ಗಕ್ಕೆ ಏನಾಗಿದೆ ಎಂದು ಜನರು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿಯೇ ಇತ್ತಿಚ್ಚಗೆ ಈದ್ ಮಿಲಾದ್ ಮೆರವಣಿಗೆಯಲ್ಲಿ ಆದ ಗಲಾಟೆಗೆ ಹೆಚ್ಚಿನ ಪೊಲೀಸರನ್ನು ನಗರಕ್ಕೆ ಕರೆಸಿಕೊಳ್ಳಲಾಯಿತು .ಮಾರನೇ ದಿನ ಶಿವಮೊಗ್ಗದ ಚಿತ್ರಣ ಬದಲಾಗಬಹುದು ಎಂದು ಅಂದುಕೊಂಡಿದ್ದ ಜನರು ನಿರಾಳರಾಗಿದ್ದರು. ಆದರೆ ನಿಷೇದಾಜ್ಞೆ ಜಾರಿಯಾಯಿತು.

ಕೊಲೆ ಘಟನೆಗೂ ಐಜಿ ನೇ ಬರಬೇಕೆಂದರೆ,ಏನರ್ಥ ?

ಶಿವಮೊಗ್ಗ ನಗರದಲ್ಲಿ ಸಣ್ಣ ಪುಟ್ಟ ಕೊಲೆಗಳಾದ್ರೂ..ಅದ್ಯೋಗೋ ಕೆಲ ಪ್ರಕರಣಗಳಲ್ಲಿ ಇದ್ದಕ್ಕಿದ್ದಂತೆ ಮತೀಯ ಬಣ್ಣ ಪಡೆದುಕೊಳ್ಳುತ್ತದೆ.ಇದು ಪೊಲೀಸರಿಗೂ ಊಹಿಸಲು ಸಾಧ್ಯವಾಗೋದಿಲ್ಲ..ಇದು ನಿಜಕ್ಕೂ ವಿಪರ್ಯಾಸದ ಸಂಗತಿ.ಪೊಲೀಸ್ ಎಂದ ಮೇಲೆ ಕಾನೂನು ಸುವ್ಯವಸ್ಥೆಗೆ ಮೊದಲ ಆದ್ಯತೆ.

ಆದ್ರೆ ಅದು ಶಿವಮೊಗ್ಗದಲ್ಲಿ ಏನಾಗಿದೆ ಎಂದು ಪ್ರಶ್ನಿಸುವಂತೆ ಮಾಡಿದೆ.ವರ್ಗಾವಣೆಗೆ ರೆಕಮೆಂಡ್ ಮಾಡಿಸಿಕೊಂಡು ಆಯಾಕಟ್ಟಿನ ಜಾಗದಲ್ಲಿ ಕೂತು..ರಾಜಕೀಯ ನಾಯಕರ ಮಾತಿಗೆ ಮಣೆಹಾಕುತ್ತಾ,.ಯಾವುದೋ ಒಂದು ಕೋಮನ್ನು ಓಲೈಸುತ್ತಾ ಹೋದರೆ ಶಿವಮೊಗ್ಗ ನಗರ ಶಾಂತಿಯಿಂದಿರಲು ಸಾಧ್ಯನಾ 

ಮೈಮೇಲೆ ಖಾಕಿ ಬಟ್ಟೆ ಹಾಕಿರುವುದ್ಕಕಾದರೂ ಕನಿಷ್ಠ ಗೌರವ ಕೊಟ್ಟು ಬೇಸಿಕ್ ಪೊಲೀಸಿಂಗ್ ಆದ್ರೂ ಮಾಡಬೇಕಲ್ಲವೇ? ಮೊನ್ನೆ ರಾಗಿಗುಡ್ಡದ ಘಟನೆಯಲ್ಲಿ ಎಸ್ಪಿಯವರೇ ಪ್ರತಿಭಟನಾಕಾರರನ್ನು ಮನವೊಲಿಸುವಂತ ಪರಿಸ್ಥಿತಿ ನಿರ್ಮಾಣವಾಯ್ತು.ಅಡಿಷನ್ ಎಸ್ಪಿ ಡಿಎಸ್ಪಿ ಇನ್ ಸ್ಪೆಕ್ಟರ್ ಗಳು ತಮ್ಮ ಜವಬ್ದಾರಿ ಏನೆಂಬುದನ್ನು ಸಾಭೀತುಪಡಿಸಬೇಕಲ್ಲವೇ..

ಕಮ್ಯುನಲ್ ಗುಂಡಾಗಳಿಗೆ ಪೋಲೀಸರ ಭಯವಿಲ್ಲ

ಶಿವಮೊಗ್ಗ ನಗರದಲ್ಲಿ ಈ ಹಿಂದೆ ಎರಡು ಕೋಮುಗಳ ನಡುವೆ ಗಲಾಟೆಗಳಾದಾಗ,ಆಯಾ ಠಾಣೆ ವ್ಯಾಪ್ತಿಯ ಇನ್ಸ್ ಪೆಕ್ಟರ್ ಗಳೇ ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದರು.ಪ್ರತಿಭಟನೆ ಮಾಡುವವರು ಅದೆಷ್ಟೇ ಪ್ರಭಾವಿಗಳಾಗಿದ್ರೂ,ಮುಖ ಮುಲಾಜಿಲ್ಲದೆ ಭಾರಿಸಿ,ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುತ್ತಿದ್ದರು.ಪರಿಸ್ಥಿತಿ ಹದ್ದುಮೀರಿ ಹೋಗುತ್ತಿದೆ ಎಂದಾಗ ಎಸ್ಪಿ ಸ್ಥಳಕ್ಕೆ ಬರುತ್ತಿದ್ದರು 

ಆದರೆ ಈಗ ಸಣ್ಣಪುಟ್ಟ ಗಲಾಟೆಗಳಾದ್ರೆ..ಎಸ್ಪಿ ಯವರೇ ಖುದ್ದು ಬರಬೇಕು,ಕೊಲೆಯಾದ್ರೆ,ಐಜಿ ದಾವಣಗೆರೆಯಿಂದ ಬರಬೇಕು ಅಂದ್ರೆ ಕಮ್ಯುನಲ್ ಗುಂಡಾಗಳಿಗೆ ಪೊಲೀಸರ ಭಯವಿಲ್ಲ ಎಂದೇ ಅರ್ಥ.ಪೊಲೀಸರು ತಮ್ಮ ಜೇಬಿನಲ್ಲಿದ್ದಾರೆ.ರಾಜಕೀಯ ನಾಯಕರು ನಮ್ಮ ಹೆಗಲ ಮೇಲಿದ್ದಾರೆ ಎಂದುಕೊಂಡೇ ಪೊಲೀಸರ ವಿರುದ್ಧ ದರ್ಪ ಮೆರೆಯುತ್ತಿದ್ದಾರೆ. 

ಗಲಾಟೆ ಮಾಡುವವರ ವಿರುದ್ಧ ಕ್ರಮ ಕೈಗೊಂಡರೆ ಎಲ್ಲಿ ನಮ್ಮ ಎತ್ತಂಗಡಿಯಾಗುತ್ತೋ ಎನ್ನೋ ಭಯದಲ್ಲಿ ಪೊಲೀಸ್ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.ಇದು ಸಮಾಜಕ್ಕೆ ಯಾವ ಸಂದೇಶ ನೀಡುತ್ತಿದೆ.ಈಗ ಜನರು ಕೂಡ ಪೊಲೀಸರಿಗೆ ಬೆಲೆಕೊಡದ ಪರಿಸ್ಥಿತಿ ನಿರ್ಮಾಣವಾಗಿದೆ.ಶಿವಮೊಗ್ಗ ನಗರದಲ್ಲಿ ಇತ್ತಿಚ್ಚಿನ ವರ್ಷಗಳಲ್ಲಿ ಅಲ್ಲಲ್ಲಿ ಪೊಲೀಸ್ ಪೇದೆಗಳ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ ಘಟನೆಗಳು ನಡೆದಿವೆ.

ಜೈಲಿನಿಂದ ರಿಲೀಸ್ ಆದವರ ಮೇಲೆ ಹದ್ದಿನ ಕಣ್ಣಿಡಬೇಕಿದೆ

ಶಿವಮೊಗ್ಗ ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಮೊದಲು ಆದ್ಯತೆ ನೀಡಬೇಕಿದೆ.ಈ ನಿಟ್ಟಿನಲ್ಲಿ ಎಸ್ಪಿ ಮಿಥುನ್  ಖಡಕ್ ಆಗಿಯೇ ಫೀಲ್ಡ್ ಗೆ ಇಳಿಯಬೇಕಿದೆ.ಈಗಾಗಲೇ ಶಿವಮೊಗ್ಗ ನಗರದಲ್ಲಿ ದೊಂಬಿ ಎಬ್ಬಿಸಿದ,ಗಲಾಟೆ ಕೊಲೆ ಮಾಡಿದ,ಕಿಡ್ನಾಪ್ ಮಾಡಿದ ಖದೀಮರೆಲ್ಲಾ ಜೈಲಿನಿಂದ ಹೊರಬಂದು ವರ್ಷಗಳೇ ಕಳೆದಿದೆ.

ಈ ಹಿಂದಿನ ಎಸ್ಪಿ ಅಭಿನವ್ ಖರೆ ಇಂತಹ ರೌಡಿಗಳ ವಿರುದ್ದ ಕೋಕಾ ಕೇಸು ದಾಖಲಿಸಿ,ಗಡಿಪಾರು ಮಾಡಿದ್ರೂ,ಕಾನೂನಿನ ಅವಕಾಶದಡಿ..ಇವರೆಲ್ಲಾ ಮತ್ತೆ ನಗರ ಪ್ರವೇಶಿದ್ದಾರೆ.ಇವರೆಲ್ಲಾ ಮತ್ತೆ ಶಿವಮೊಗ್ಗ ನಗರದ ಶಾಂತಿಗೆ ಭಂಗವನ್ನುಂಟು ಮಾಡಲು ತೆರೆಮರೆಯಲ್ಲಿ ಯತ್ನಿಸುತ್ತಿದ್ದಾರೆ.ಯಾವ್ಯಾವ ರೌಡಿಗಳು ಶಿವಮೊಗ್ಗ, ಬಳ್ಳಾರಿ, ಬೆಳಗಾಂ ಗುಲ್ಬರ್ಗಾ ಜೈಲಿನಿಂದ ಹೊರಬಂದು ಶಿವಮೊಗ್ಗದಲ್ಲಿ ಸೈಲೆಂಟ್ ಆಗಿ ಮನೆಯಲ್ಲಿದ್ದಾರೆ ಎಂಬುದರ ಮೇಲೆ ಹದ್ದಿನ ಕಣ್ಣಿಡಬೇಕಿದೆ.ಇವರು ಮತ್ತೆ ಪಾತಕ ಕೃತ್ಯ ಎಸಗಿದರೂ ಅಚ್ಚರಿಯಿಲ್ಲ ರೌಡಿ ನಿಗ್ರಹ ದಳಕ್ಕೆ ಮತ್ತಷ್ಟು ಬಲತುಂಬಬೇಕಿದೆ.ಈ ರೌಡಿಗಳು ಎಸಗುವ ಕೃತ್ಯಗಳು ಮತ್ತೆ ಮತೀಯ ಬಣ್ಣ ಪಡೆದರೂ ಅಚ್ಚರಿಯಿಲ್ಲ.

ಕಮ್ಯುನಲ್ ಇಂಟಲಿಜೆನ್ಸಿ ಸಾಮರ್ಥ್ಯ ಹೆಚ್ಚಿಸಬೇಕಿದೆ.

ಶಿವಮೊಗ್ಗಲ್ಲಿ ಪೊಲೀಸರು ಹಾಗು ಗುಪ್ತಚರ ಇಲಾಖೆ ಕಮ್ಯುನಲ್ ವಿಚಾರಗಳಲ್ಲಿ ಹೆಚ್ಚಿನ ಒತ್ತು ನೀಡಬೇಕಿದೆ. ಗಲ್ಲಿಗಳಲ್ಲಿ ಮತೀಯವಾಗಿ ಏನೆಲ್ಲಾ ಚರ್ಚೆಗಳು, ಸೋಷಿಯಲ್ ಮಿಡಿಯಾದಲ್ಲಿ ನಡೆಯುತ್ತಿರುವ ಮತೀಯ ವಿಚಾರಗಳ ಮೇಲೆ ನಿಗಾ ಇಡಬೇಕಿದೆ.




ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?