ಅಡಿಕೆ ಕೊಯ್ಲಿನ ನಡುವೆ ಗೃಹಸಚಿವರ ತವರು ತೀರ್ಥಹಳ್ಳಿಯಲ್ಲಿ ಹೆಚ್ಚಿದ ಒಂಟಿಮನೆಗಳ ಕಳ್ಳತನ

ಅಡಿಕೆ ಕೊಯ್ಲು ಆರಂಭವಾದ ಬೆನ್ನಲ್ಲೆ ಮಲೆನಾಡು ತೀರ್ಥಹಳ್ಳಿಯಲ್ಲಿ ಕಳ್ಳತನದ ಪ್ರಕರಣಗಳು ಸಹ ಹೆಚ್ಚಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ತೀರ್ಥಹಳ್ಳಿ ತಾಲ್ಲೂಕಿನ ದೇಮ್ಲಾಪುರ ಗ್ರಾಮ ಪಂಚಾಯಿತಿಯಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಕಳ್ಳತನವಾಗುತ್ತಿದೆ.

ಅಡಿಕೆ ಕೊಯ್ಲಿನ ನಡುವೆ ಗೃಹಸಚಿವರ ತವರು ತೀರ್ಥಹಳ್ಳಿಯಲ್ಲಿ ಹೆಚ್ಚಿದ ಒಂಟಿಮನೆಗಳ ಕಳ್ಳತನ

ಅಡಿಕೆ ಕೊಯ್ಲು ಆರಂಭವಾದ ಬೆನ್ನಲ್ಲೆ ಮಲೆನಾಡು ತೀರ್ಥಹಳ್ಳಿಯಲ್ಲಿ ಕಳ್ಳತನದ ಪ್ರಕರಣಗಳು ಸಹ ಹೆಚ್ಚಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ತೀರ್ಥಹಳ್ಳಿ ತಾಲ್ಲೂಕಿನ ದೇಮ್ಲಾಪುರ ಗ್ರಾಮ ಪಂಚಾಯಿತಿಯಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಕಳ್ಳತನವಾಗುತ್ತಿದೆ.

ಇದನ್ನು ಸಹ ಓದಿ : BREAKING NEWS : ಶಿವಮೊಗ್ಗದ ಮತ್ತೊಂದು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಹಾ ಗೋಲ್​ಮಾಲ್​?/ ರಿಪೋರ್ಟ್​ ಕೊಡದ ತನಿಖಾಧಿಕಾರಿ

ಇದುವರೆಗು ಒಂಬತ್ತಕ್ಕೂ ಹೆಚ್ಚು ಕಡೆಗಳಲ್ಲಿ ಕಳ್ಳತವಾಗಿದೆ. ಯೋಗಿಮಳಲಿ ಈಶ್ವರ ದೇವಸ್ಥಾನ ಸೇರಿದಂತೆ, ಲೆಕ್ಕಕ್ಕೆ ಸಿಕ್ಕಂತೆ ಒಂಬತ್ತು ಕಡೆಗಳಲ್ಲಿ ಹಣ ಹಾಗೂ ಅಡಿಕೆ ಕಳ್ಳತನವಾದ ಬಗ್ಗೆ ವರದಿಯಾಗಿದೆ. 

ಅಡಿಕೆ ಚೇಣಿಗಾಗಿ ತಾಲ್ಲೂಕಿಗೆ ಹೊರಗಡೆಯಿಂದಲು ಸಾಕಷ್ಟು ಮಂದಿ ಇಲ್ಲಿಗೆ ಬರುತ್ತಾರೆ. ಅಡಿಕೆಗೆ ಸಂಬಂಧಿಸಿದ ವಿವಿಧ ಕೆಲಸಕ್ಕಾಗಿ ಬೇರೆ ಬೇರೆ ಕಡೆಗಳಿಂದ ಬರುವ ಕೆಲಸಗಾರರ ನಡುವೆ ಕಳ್ಳರು ಸಹ ಸೇರಿಕೊಳ್ಳುತ್ತಿರುವ ಸಂಶಯ ಮೂಡಿದೆ.

BREAKING NEWS : ಶಿವಮೊಗ್ಗ KSRTC ಬಸ್​ಸ್ಟಾಂಡ್​ ಪಕ್ಕದಲ್ಲಿಯೇ ಪತ್ತೆಯಾಯ್ತು ಮೃತದೇಹ

ತಾಲ್ಲೂಕಿನ ಒಂಟಿ ಮನೆಗಳಲ್ಲಿ ಗುಂಪು ಗುಂಪಾಗಿ ಕೈಗೊಳ್ಳುವ ಈ ಕೆಲಸಗಳ ನಡುವೆ, ಒಂಟಿ ಮನೆಗಳಲ್ಲಿ ಕಳ್ಳತನವಾಗುತ್ತಿರುವ ಪ್ರಕರಣಗಳು ಸಹ ಹೆಚ್ಚುತ್ತಿದೆ.ಹೀಗಾಗಿ ಕೆಲಸಕ್ಕೆ ಬರುವ ವ್ಯಕ್ತಿಗಳನ್ನು ಸಹ ಅನುಮಾನದಿಂದ ನೋಡುವಂತಾಗಿದೆ.

ಇದನ್ನು ಸಹ ಓದಿ:  ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್

ಇನ್ನೂ ಗೃಹಸಚಿವರ ತವರಲ್ಲಿಯೇ ಈ ಮಟ್ಟದ ಕಳ್ಳತನದ ಪ್ರಕರಣಗಳು ವರದಿಯಾಗುತ್ತಿದ್ದರೂ ಅದರ ಬಗ್ಗೆ ಪೊಲೀಸ್ ಇಲಾಖೆ ತೀಕ್ಷ್ಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆರೋಪ ಸ್ಥಳೀಯರದ್ಧಾಗಿದೆ. ಹಳೆಯ ಕಳ್ಳರು ಅಡಿಕೆ ಕೊಯ್ಲಿನ ಸಂದರ್ಭವನ್ನು ಕಳ್ಳತನಕ್ಕೆ ಬಳಸಿಕೊಳ್ಳುತ್ತಿದ್ದು,ಒಂಟಿ ಮನೆಗಳಲ್ಲಿ ಕಳ್ಳತನವೆಸಗುತ್ತಿದ್ದಾರೆ. ಅಂತಹ ಕಳ್ಳರನ್ನು ಪತ್ತೆ ಹಚ್ಚುವುದು ಸಹ ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್​ ಇಲಾಖೆ ಇನಷ್ಟು ಚುರುಕಾಗಬೇಕಿದೆ.  

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link