ಕಾಸ್ಟ್ಲಿ ಲೈಫ್​ಗಾಗಿ ಕಳ್ಳತನ. ಸಾಗರ ಗ್ರಾಮಾಂತರ ಸ್ಟೇಷನ್ ಪೊಲೀಸರಿಂದ ಅಪ್ರಾಪ್ತ ಸೇರಿ ಇಬ್ಬರ ಬಂಧನ

Theft for costly life. Two persons, including a minor, arrested by Sagar Rural police

ಕಾಸ್ಟ್ಲಿ ಲೈಫ್​ಗಾಗಿ ಕಳ್ಳತನ. ಸಾಗರ ಗ್ರಾಮಾಂತರ ಸ್ಟೇಷನ್ ಪೊಲೀಸರಿಂದ ಅಪ್ರಾಪ್ತ ಸೇರಿ ಇಬ್ಬರ ಬಂಧನ
Theft for costly life. Two persons, including a minor, arrested by Sagar Rural police

SHIVAMOGGA  |  Jan 23, 2024  | ಶಿವಮೊಗ್ಗ ಜಿಲ್ಲೆ ಸಾಗರ ಪೊಲೀಸರು ಮತ್ತಿಬ್ಬರು ಕಳ್ಳರನ್ನು ಬೇಟೆಯಾಡಿದ್ದಾರೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ಬಂಧಿಸಿದ್ದಾರೆ. 

ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್​ 

ಕಳೆದ ಡಿಸೆಂಬರ್‌ನಲ್ಲಿ ತಾಲೂಕಿನ ಕರ್ಕಿಕೊಪ್ಪದ ಮನೆಯಲ್ಲಿ ನಡೆದಿದ್ದ ಕಳವು ಪ್ರಕರಣ ಸೇರಿದಂತೆ 5 ಕಳವು ಪ್ರಕರಣಗಳನ್ನು ಇಲ್ಲಿನ ಸಾಗರ ಗ್ರಾಮಾಂತರ ಸ್ಟೇಷನ್ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ, ಅಂದಾಜು 5.20 ಲಕ್ಷ ಮೊತ್ತದ ಬೆಳ್ಳಿ, ಬಂಗಾರ ಆಭರಣ ಹಾಗೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. 

ಆನಂದಪುರ ವ್ಯಾಪ್ತಿ

ತಾಲೂಕಿನ ಕರ್ಕಿಕೊಪ್ಪ, ಯಳವರಸೆ, ಉಂಬ್ಳೆಬೈಲು, ಕಾನೆ, ಆನಂದಪುರ ವ್ಯಾಪ್ತಿಯ ನೇದರ ವಳ್ಳಿಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ಕಳ್ಳವು ಪ್ರಕರಣಗಳು ನಡೆದಿದ್ದು, ಪ್ರಮುಖ ಆರೋಪಿ ಪಟ್ಟಣದ ಶಿವಪ್ಪ ನಾಯಕ ನಗರದ ಎ.ಕೆ. ಕಾಲೋನಿ 2ನೇ ಕ್ರಾಸ್ ನಿವಾಸಿ ಷಣ್ಮುಖ (22) ಹಾಗೂ ಈ ಸಂಬಂಧ ಓರ್ವ ಅಪ್ರಾಪ್ತ ನನ್ನು ಸಹ ವಶಕ್ಕೆ ಪಡೆಯಲಾಗಿದೆ.

ಆರೋಪಿತರಿಂದ  ಅಂದಾಜು ₹4.20 ಲಕ್ಷ ಮೌಲ್ಯದ ಬಂಗಾರ, 20 ಸಾವಿರ ಬೆಳ್ಳಿಯ ವಸ್ತುಗಳು, ಮೊಬೈಲ್ ಸೇರಿದಂತೆ ಒಟ್ಟು 5.20 ಲಕ್ಷ ಮೊತ್ತದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಆರೋಪಿಗಳು ವಸ್ತುಗಳನ್ನು ಕಳವು ಮಾಡಿ, ಅದರಿಂದ ಸಿಗುವ ಹಣದಿಂದ ಐಷಾರಾಮಿ ಜೀವನ ನಡೆಸಬಹುದು ಎನ್ನುವ ಆಸೆ ಹೊಂದಿದ್ದರು. ಅದರಂತೆ ಹೊರವಲಯದ ಮನೆಗಳನ್ನು ಹುಡುಕಿ, ಕಳವು ಕೃತ್ಯಕ್ಕೆ ಮುಂದಾಗುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ