50 ಲಕ್ಷದ ರಾಬರಿ ಕೇಸಲ್ಲಿ 3 ಜಿಲ್ಲೆಯ ದರೋಡೆಕೋರರು ಸಿಕ್ಕಿಬಿದ್ದಿದ್ದೇಗೆ ಗೊತ್ತಾ! ರೋಚಕ ವರದಿ JP ಬರೆಯುತ್ತಾರೆ

ವ್ಯಾಪಾರಸ್ಥರ ವಾಹನ ಯಾವ ಏರಿಯಾ ಕಡೆ ಹೋಗುತ್ತಿದೆ.ಅನ್ನೋದನ್ನ ಆಸಿಫ್ ತನ್ನ ಸಹಚರರಿಗೆ ತಿಳಿಸ್ತಿದ್ದ. ಬೇರೆ ಬೇರೆ ವಾಹನಗಳಲ್ಲಿ ಗ್ಯಾಂಗ್ ನ ಎಲ್ಲಾ ಸದಸ್ಯರು ತಮಗೆ ಸೇಫ್ಟಿ ಯಾಗುವ ನಿರ್ಜನ ಪ್ರದೇಶದ ಒಂದು ಸ್ಥಳವನ್ನು ಗುರುತಿಸಿ ದರೋಡೆಗೆ ಸ್ಕೇಚ್ ರೂಪಿಸುತ್ತಿದ್ದ. ಇಂತಹ ಹೈಟೆಕ್ ಕ್ರಿಮಿನಲ್ ಇದೀಗ ಶಿರಸಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

50 ಲಕ್ಷದ ರಾಬರಿ ಕೇಸಲ್ಲಿ 3 ಜಿಲ್ಲೆಯ ದರೋಡೆಕೋರರು ಸಿಕ್ಕಿಬಿದ್ದಿದ್ದೇಗೆ ಗೊತ್ತಾ! ರೋಚಕ ವರದಿ JP ಬರೆಯುತ್ತಾರೆ
Malenadu today news report

ನಿಮ್ಮ ವಾಹನಗಳಿಗೆ ನೀವು ಜಿಪಿಎಸ್ ಅಳವಡಿಸದಿದ್ರೂ. ಕಳ್ಳರು ಫಿಕ್ಸ್ ಮಾಡಿರ್ತಾರೆ ಅನ್ನೋ ವಿಷಯ ನಿಮಗೆ ಗೊತ್ತಿರಲಿ. ಇದಕ್ಕೆ ಸಾಕ್ಷಿಯಾಗಿ ಇಲ್ಲೊಂದು ಪ್ರಕರಣವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ ಶ್ರೀಮಂತರು ಉದ್ಯಮಿಗಳ ವಾಹನಗಳಿಗೆ ಜಿಪಿಎಸ್ ಅಳವಡಿಸಿ ಆ ಮೂಲಕ ಉದ್ಯಮಿಗಳನ್ನು ಟ್ರ್ಯಾಕ್ ಮಾಡಿ ದರೋಡೆ ಮಾಡುತ್ತಿದ್ದ ಬನವಾಸಿ ದರೋಡೆ ಪ್ರಕರಣ ಭೇದಿಸಿದ ರೋಚಕ ಸ್ಟೋರಿ ಇಲ್ಲಿದೆ..

ಇದನ್ನು ಸಹ ಓದಿ : ಸಾರ್ವಜನಿಕರಿಗೆ ಸೂಚನೆ , ಇವತ್ತು ಶಿವಮೊಗ್ಗ & ಶಿವಮೊಗ್ಗ ಗ್ರಾಮಾಂತರದಲ್ಲಿ ಹಲವೆಡೆ ಕರೆಂಟ್ ಕಟ್! ಎಲ್ಲೆಲ್ಲಿ ಎಂಬ ವಿವರ ಇಲ್ಲಿದೆ

ನಮ್ಮ ಚಲನವಲನ ಇನ್ಯಾರಿಗೋ ಗೊತ್ತಾಗುತ್ತಿದೆ

ನಮ್ಮನ್ನು ಯಾರು ಅಬ್ಸರ್ವ್ ಮಾಡ್ತಿಲ್ಲ, ನಮ್ಮ ಚಲನ ವಲನ ಯಾರಿಗೂ ತಿಳಿಯೋದಿಲ್ಲ ಎಂದು ಅಮಾಯಕ ಉದ್ಯಮಿಗಳು ಶ್ರೀಮಂತರು ಅನ್ಕೊಂಡ್ರೆ ಅದು ತಪ್ಪಾಗಿ ಹೋಗುತ್ತೆ.

ನಮ್ಮ ಕಾರುಗಳಿಗೆ ಬೇರೆಯವರು ಜಿಪಿಎಸ್ ಹಾಕಿ...ನಮ್ಮನ್ನು ಟ್ರಾಕ್ ಮಾಡಿ ನಿರ್ಜನ ಪ್ರದೇಶದಲ್ಲಿ ದರೋಡೆ ಮಾಡಿದ್ರೆ..ಹೇಗಿರುತ್ತೆ..ಪರಿಸ್ಥಿತಿ ಊಹಿಸಿಕೊಳ್ಳೋದಕ್ಕೂ ಸಾಧ್ಯವಾಗೋದಿಲ್ಲ.

ಆದ್ರೆ ಈ ರೀತಿಯ ಖತರ್ನಾಖ್​ ಗ್ಯಾಂಗ್ ನ್ನು ಶಿರಸಿ ಪೊಲೀಸರು ಭೇದಿಸಿ, ವಾಹನ ಮಾಲೀಕರಿಗೊಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

BREAKING NEWS : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಗೆ ​ ಶೀಘ್ರದಲ್ಲಿಯೇ ಹೊಸ ಅಧ್ಯಕ್ಷ? ಯಾರಾಗ್ತಾರೆ ಡಿಸ್ಟ್ರಿಕ್ಟ್​ ಪ್ರೆಸಿಡೆಂಟ್ ಇಲ್ಲಿದೆ ವರದಿ

ಸಾಗರ ಮೂಲ, ಹೈಟೆಕ್​ ಕಳ್ಳಾಟ

ಹೌದು ಸಾಗರ ಮೂಲದ ನಟೋರಿಯಸ್ ದರೊಡೆಕೋರನೊಬ್ಬ ಎಸಗಿದ ಹೈಟೆಕ್ ರಾಜರಿ ಪ್ರಕರಣ ಇದಾಗಿದೆ. ಈತನ ಟಾರ್ಗೇಟೇ  ಅಡಿಕೆ ವ್ಯಾಪಾರಸ್ಥರು, ರಿಯಲ್ ಎಸ್ಟೇಟ್ ಉದ್ಯಮಿಗಳು. ಸುಮಾರು 14 ಜನರ ತಂಡವನ್ನು ಕಟ್ಟಿಕೊಂಡು ದರೋಡೆಗೆ ಇಳಿಯುತ್ತಿದ್ದ  ಗ್ರಾಂಗ್‌ನ ಮಾಸ್ಟರ್ ಮೈಂಡ್ ಸಾಗರದ ಆಸಿಫ್.

ರಾತ್ರಿ ವೇಳೆ ಉದ್ಯಮಿಗಳು, ಅಡಿಕೆ ವರ್ತಕರ ಕಾರಿಗೆ ಜಪಿಎಸ್ ಫಿಕ್ಸ್ ಮಾಡ್ತಿದ್ದ

ಶಿವಮೊಗ್ಗ ಜಿಲ್ಲೆಯ ಸಾಗರದ ಆಸೀಪ್ ಅಬ್ದುಲ್ ಸತ್ತಾರ.ಇನ್ನು 29 ವರ್ಷ  ದಾಟಿದ ಆಸೀಫ್ ಒಮ್ಮೆ ದರೋಡೆಗೆ  ಇಳಿದ್ರೆ ಜೀವ ತೆಗೆದಾದರೂ ಹಣವನ್ನು ದೋಚುವ ಮನಸ್ಥಿತಿಯವನು.

ಈ ಖತರ್ನಾಗ್ ಆದ್ಮಿ ಹಣವುಳ್ಳವರ ಸರ್ವೇ ಮಾಡಿ ಅವರ ಮನೆ ವಾಹನವನ್ನು ಪತ್ತೆ ಮಾಡಿ ರಾತ್ರಿ ಸಮಯದಲ್ಲಿ ಯಾರಿಗೂ ತಿಳಿಯದಂತೆ ಅವರ ವಾಹನಗಳಿಗೆ ಜಿಪಿಎಸ್ ಫಿಕ್ಸ್ ಮಾಡಿಡುತ್ತಿದ್ದ. 

ನಂತರ ಆ ವಾಹನಗಳಲ್ಲಿ  ಹಣವಂತರು ತಮ್ಮ ಉದ್ಗೋಗಕ್ಕಾಗಿ ಹಣವನ್ನು ಸಾಗಿಸುತ್ತಿರುವಾಗ ಅವರ ಚಲನವಲನ ಗಮನಿಸಿ ನಿರ್ಜನ ಪ್ರದೇಶದಲ್ಲಿ ತಡೆಗಟ್ಟಿ ಹಣ ಲಪಟಾಯಿಸ್ತಿದ್ದ.

ಸರ್ಕಾರಿ ಅಧಿಕಾರಿಗಳೇ ಹುಷಾರ್ |  ರಹಸ್ಯ ಕ್ಯಾರ್ಯಾಚರಣೆ ​ ಹೆಸರಿನಲ್ಲಿ ಹೆದರಿಸುವವರಿದ್ದಾರೆ? 

ನಿರ್ಜನ ಪ್ರದೇಶದ ನಿರ್ಧಿಷ್ಟ ಜಾಗದಲ್ಲಿ ಅಟ್ಯಾಕ್

ವ್ಯಾಪಾರಸ್ಥರ ವಾಹನ ಯಾವ ಏರಿಯಾ ಕಡೆ ಹೋಗುತ್ತಿದೆ.ಅನ್ನೋದನ್ನ  ಆಸಿಫ್ ತನ್ನ ಸಹಚರರಿಗೆ ತಿಳಿಸ್ತಿದ್ದ. ಬೇರೆ ಬೇರೆ ವಾಹನಗಳಲ್ಲಿ ಗ್ಯಾಂಗ್ ನ ಎಲ್ಲಾ ಸದಸ್ಯರು ತಮಗೆ ಸೇಫ್ಟಿ ಯಾಗುವ ನಿರ್ಜನ ಪ್ರದೇಶದ ಒಂದು ಸ್ಥಳವನ್ನು ಗುರುತಿಸಿ ದರೋಡೆಗೆ ಸ್ಕೇಚ್ ರೂಪಿಸುತ್ತಿದ್ದ. ಇಂತಹ ಹೈಟೆಕ್ ಕ್ರಿಮಿನಲ್ ಇದೀಗ ಶಿರಸಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಜಿಮ್ ಮಾಡಿಕೊಂಡು ಬಾಡಿ ಬೆಳಸಿಕೊಂಡಿದ್ದ ಆಸಿಫ್ 

ಸಾಗರದಲ್ಲಿ ಸಣ್ಣ ಪುಟ್ಟ ಕೆಲಸವನ್ನು ಮಾಡುತ್ತ ಜಿಮ್ ಮಾಡಿಕೊಂಡು ಬಾಡಿ ಬೆಳೆಸಿಕೊಂಡು,ಕುಳಿತಲ್ಲಿಯೇ ದರೋಡೆಗಳಿಗೆ ಸ್ಕೇಚ್ ಹಾಕುವ ಜಾಯಮಾನದ ಈ ಆಸೀಫ್.

ಕಲಿತದ್ದು ಮೂರಕ್ಷವಾದರೂ, ಮೊಬೈಲ್ ಬಳಕೆಯಲ್ಲಿ, ತಂತ್ರಜ್ಞಾನದಲ್ಲಿ ಎತ್ತಿದ ಕೈ. ಪೊಲೀಸರಿಗೆ ಯಾವುದೇ ಕುರುಹುಗಳು ಸಿಗದೇ ಹೋಗುವ ರೀತಿಯಲ್ಲೆ ಇವನ ಕಾರ್ಯಾಚರಣೆ ನಡೆಯುತ್ತಿತ್ತು.

ದರೋಡೆ ಮಾಡುವಾಗ ತನ್ನ ಸಹಚರರಿಗೆ ಕೆಲವಷ್ಟು ನಿಭಂದನೆಗಳನ್ನು ಹಾಕುತ್ತಿದ್ದ ಈತ ಯಾವುದೇ ವ್ಯಕ್ತಿಯು ಮೊಬೈಲ್ ತರದಂತೆ ಆಜ್ಞೆ ಹೊರಡಿಸುತ್ತಿದ್ದ. ಯಾಕೇಂದರೆ ಪೊಲೀಸರು ಮೊಬೈಲ್ ಟವರ್ ಲೊಕೇಷನ್ ಚೆಕ್ ಮಾಡಿ ತಮ್ಮನ್ನು ಹಿಡಿಯುತ್ತಾರೆ ಎಂಬುದು ಆಸಿಫ್ ಗೆ ಗೊತ್ತಿತ್ತು.  

ವಿ.ಹೆಚ್.ಪಿ ಮುಖಂಡನಿಗೆ ಸೆಂಟ್ರಲ್ ಜೈಲಿನಿಂದ ಹಣಕ್ಕಾಗಿ ಬೆದರಿಕೆ ಕರೆ! ಹಣ ಕೇಳಲು ಬಂದು ಸಿಕ್ಕಿಬಿದ್ದ ಕಟ್ಟಪ್ಪ !  ರೌಡಿಗಳಿಗೆ ಜೈಲುಗಳೇ ಹಣ ಸುಲಿಗೆಗೆ ರಾಜಮಾರ್ಗವಾಗುತ್ತಿದೆಯಾ?  BREAKING NEWS

50 ಲಕ್ಷಕ್ಕೆ ಸ್ಕೆಚ್ ಉದ್ಯಮಿ ಕಾರಿಗೆ ಜಿಪಿಎಸ್ ಅಳವಡಿಕೆ

ಅದೇ ಪ್ರಕಾರ ಅಕ್ಟೋಬರ್ 19 ರಂದು  ಅಂಡಗಿ ಸಮೀಪ ಹಸನ್ ಜಾವೇದ ಖಾನ್ ಎಂಬವರು ತನ್ನ ಸಂಬಂಧಿ ಈರ್ವರ ಜೊತೆ ಜಮೀನು ವ್ಯವಹಾರಕ್ಕಾಗಿ 50 ಲಕ್ಷ ರೂಪಾಯಿ ನಗದು ಹಣವನ್ನು ತೆಗೆದುಕೊಂಡು ಕಾರಿನಲ್ಲಿ ಹೋಗ್ತಿದ್ರು.

ಅವರು ಹೋಗುವ ಎಲ್ಲಾ ಮಾಹಿತಿಯನ್ನು ಕಲೆಹಾಕಿದ್ದ ಆಸೀಫ್ ತನ್ನ ಸಹಚರರೊಂದಿಗೆ ಬನವಾಸಿ ಸಮೀಪದ ಅಂಡಗಿ ಸಮೀಪ ಹೊಂಚು ಹಾಕಿ ಕಾಯುತ್ತಿದ್ದ. 

ಸಂಜೆ ಸುಮಾರು 5.30 ಗಂಟೆಯ ಸುಮಾರಿಗೆ ಜಿ.ಪಿ. ಎಸ್.ಟ್ರಾಕರ್ ನಲ್ಲಿ ಹಸನ್ ಖಾನರ ಕಾರು ಶಿರಸಿ ತಾಲೂಕಿನ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಡಗಿ ಸಮೀಪ ಬರುತ್ತಿದ್ದಾಗ,

ಎರಡು ಕಾರಿನಲ್ಲಿ ಬಂದಿದ್ದ ಆಸೀಫ್ ಹಾಗೂ ತಂಡ ಮಚ್ಚು, ಲಾಂಗ್, ಪಿಸ್ತೂಲ್  ನೊಂದಿಗೆ ಹಸನ್ ಖಾನ್ ರ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಹಣವನ್ನು ಕಿತ್ತುಕೊಂಡು ನಾಪತ್ತೆಯಾಗಿಯೇ ಬಿಟ್ಟಿತ್ತು. 

ರಾಜಕಾರಣBREAKING NEWS : ಚುನಾವಣಾ ಕಣದಿಂದ ಹಿಂದೇ ಸರಿದರಾ ಡಾ.ಧನಂಜಯ್​ ಸರ್ಜಿ/ ಸದ್ಯದಲ್ಲಿಯೇ ಬಿಜೆಪಿಗೆ

ಕೇವಲ ಅರ್ಧ ಗಂಟೆಯಲ್ಲಿ ಘಟನಾ ಸ್ಥಳಕ್ಕೆ ಬಂದ ಹಿರಿಯ ಪೊಲೀಸ್ ಅಧಿಕಾರಿಗಳ ತಂಡಕ್ಕೆ ಒಂದೇ ಒಂದು ಸುಳಿವನ್ನು ಬಿಟ್ಟುಕೊಡದೇ ಎಸ್ಕೇಪ್ ಆದ ಈ ತಂಡವನ್ನು ಹಿಡಿಯುವುದು ಪೊಲೀಸರಿಗೆ ಒಂದು ಸವಾಲೇ ಆಗಿತ್ತು.

ಆದರೇ ಸವಾಲಾದ ಈ ಪ್ರಕರಣವನ್ನು ಭೇದಿಸಲು ಶಿರಸಿ ಪೊಲೀಸರಿಗೆ ಒಂದು ತಿಂಗಳುಗಳ ಬೇಕಾಯ್ತು. ಹಾಗಾದರೇ ಆರೋಪಿಗಳು ಬಿಟ್ಟು ಹೋದ ಆ ಒಂದು ಸಣ್ಣ ಸಾಕ್ಷಿಯಾದರೂ ಏನು?

ಮಾಸ್ಟರ್ ಮೈಂಡ್ ಆಸೀಫ್ ಸಿಕ್ಕಿ ಬಿದ್ದಿದ್ದಾದರೂ ಹೇಗೆ? ಪೊಲೀಸರ ಕಾಂರ್ಯಾಚರಣೆ ಹೇಗಿತ್ತು? ಮುಂತಾದ ಕುತೂಹಲ ಕಾರಿ ಸಂಗತಿ ಮುಂದಿದೆ...

Shimoga district | 2011 ರಲ್ಲಿ ಮುಂಬೈ ಸ್ಪೋಟಿಸಿತ್ತು ಮಲೆನಾಡಿನ ಸ್ಪೋಟಕ! ಭಯೋತ್ಪಾಧಕರಿಗೂ ಶಿವಮೊಗ್ಗ ಜಿಲ್ಲೆಗೂ ಇರುವ ನಂಟೇನು? ಯಾರೆಲ್ಲಾ ಭಯೋತ್ಪಾಧಕರು ಇಲ್ಲಿ ಆಶ್ರಯ ಪಡೆದಿದ್ದರು! ಗೊತ್ತಾ? JP STORY PART 3

ಅಡಿಕೆ ಮಾಲೀಕನೊಂದಿಗೆ ವ್ಯವಹಾರ ಮಾಡಿದ್ದ ವ್ಯಕ್ತಿಯೇ ಆಸಿಫ್ ಗೆ ಹಾಕಿಕೊಟ್ಟಿದ್ದ ಸ್ಕೆಚ್

ಬನವಾಸಿ ದರೋಡೆ ಪ್ರಕರಣ ಸಂಭವಿಸುವ ಒಂದು ವಾರದ ಮೊದಲು ಆಸೀಪ್‌ಗೆ ಒಂದು ಪೋನ್ ಬರುತ್ತೆ. ಆ ಕರೆಯಲ್ಲಿ ಮಾತನಾಡಿದವನು  ಸಿದ್ದಾಪುರ ತಾಲೂಕಿನ ನೆಜ್ಜೂರಿನ ಅಬ್ದುಲ್ ಹಮೀದ ಅಬ್ದುಲ್ ಸತ್ತಾರ ಎಂಬಾತ.

ಈತ ಆಸೀಪ್ ಸ್ನೇಹಿತನಾಗಿದ್ದ. ಸಿದ್ದಾಪುರ ಅಡಿಕೆ ವ್ಯಾಪಾರಿಯೋರ್ವ ಜಮೀನು ಖರೀದಿ ಮಾಡಲು ಈ ವಾರದಲ್ಲಿ ಹೋಗುವವನಿದ್ದಾನೆ. ಆತನ ಕೈಯಲ್ಲಿ ಲಕ್ಷಾಂತರ ರೂಪಾಯಿ ಇರುತ್ತದೆ,

ಹೇಗಾದರೂ ಮಾಡಿ ಎಗರಿಸಿ ಬಿಡೋಣ ಎಂದು ಹೇಳುತ್ತಾನೆ. ಇದೆಲ್ಲ ನಿನಗೆ ಹೇಗೆ ಗೊತ್ತು ಎಂದು ಆಸೀಪ್ ಅಬ್ದುಲ್‌ನ ಹತ್ತಿರ ಕೇಳಿದಾಗ ನನಗೆ ನಮ್ಮೂರಿನ ಅಜಿಮುಲ್ಲಾ ಹೇಳಿದ್ದಾನೆ ಎಂದು ಹೇಳುತ್ತಾನೆ.

ಈ ಅಜಿಮುಲ್ಲಾ ನೆಜ್ಜೂರು ಸಣ್ಣ ಅಡಿಕೆ ವ್ಯಾಪಾರಿ. ಸಿದ್ದಾಪುರ ತಾಲೂಕಿನ ಹಳ್ಳಿಗಳಿಂದ ಸಣ್ಣ ಅಡಿಕೆ ಬೆಳೆಗಾರರಿಂದ ಅಡಿಕೆ ಖರೀದಿಸಿ ಹಸನ್ ಖಾನ್‌ರಿಗೆ ನೀಡುತ್ತಾ ಇದ್ದ.

ಇದರಿಂದ ಹಸನ್ ಖಾನರಿಗೂ ಈತನ ಪರಿಚಯವಿತ್ತು. ಇದನ್ನೆ ದುರುಪಯೋಗ ಪಡಿಸಿಕೊಂಡ ಅಜಿಮುಲ್ಲಾ ಹಸನ್ ಖಾನರು ಬೆಳಗಾವಿಗೆ ಜಮೀನು ಖರೀದಿಗೆ ಹೋಗುವ ವಿಷಯ ತಿಳಿದುಕೊಂಡಿದ್ದ. ಆವಾಗಲೇ ನೋಡಿ ಅಸಲಿ ಆಟ ಶುರುವಾಗಿದ್ದು.

Today special ಹಾವಿಗಿಂತಲೂ ವಿಷಕಾರಿ ಮಲೆನಾಡಿನ ರಾಕ್ಷಸ ಹುಳದ ಬಗ್ಗೆ ಗೊತ್ತಾ? ಇದು ದಾಳಿ ಇಟ್ಟರೇ ಕೇಸ್​ ಖಲ್ಲಾಸ್! ಉಗುರಿನಷ್ಟಿದ್ರೂ ಉಗ್ರಸ್ವರೂಪಿ ಈ ಜಂತು..

ರಾತ್ರೋ ರಾತ್ರಿ ಜಿಪಿಎಸ್ ಫಿಕ್ಸ್

ಅಜಿಮುಲ್ಲಾನಿಗೆ ಹೇಗಾದರೂ ಮಾಡಿ ಒಂದೇ ಸಲ ಹಣ ಮಾಡುವ ದುರಾಲೋಚನೆ ಬಂದು ಬಿಡ್ತು. ಆಗ ಆತನಿಗೆ ನೆನಪಾಗಿದ್ದು ಇಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅಬ್ದುಲ್ ಹಮೀದ್.

ಈತನಿಗೆ ವಿಷಯ ತಿಳಿಸಿದ್ದ. ಅಬ್ದುಲ್ ಸ್ನೇಹಿತನಾಗಿದ್ದ ಆಸೀಫ್ ಸಾಗರದಲ್ಲಿ ಕುಳಿತೇ ದರೋಡೆಗೆ ಸ್ಕೇಚ್ ಹಾಕಿದ್ದ. ಘಟನೆ ನಡೆಯುವ ನಾಲ್ಕು ದಿನ ಹಿಂದೆ ಹಸನ್ ಖಾನರ ಮನೆಗೆ ರಾತ್ರಿ ವೇಳೆಯಲ್ಲಿ ಬಂದು ಅವರ ಕಾರಿಗೆ ಜಿ.ಪಿ.ಎಸ್.ಟ್ರಾಕರ್ ಅಳವಡಿಸಿ ಅಲ್ಲಿಂದ ನಾಪತ್ತೆಯಾಗಿದ್ದ.

ಹಸನ್ ಖಾನರು ಎಲ್ಲಿಯೇ ಹೋದರೂ  ಜಿ.ಪಿ.ಎಸ್ ನಿಂದ ಈತನಿಗೆ ಮಾಹಿತಿ ತಿಳಿಯುತ್ತಿತ್ತು. ಇದರ ಆಧಾರದಲ್ಲಿಯೇ ಅಕ್ಟೋಬರ್ ೧೯ರಂದು ಹಸನ್ ಖಾನ್ ಬೆಳಗಾವಿಗೆ ಹೋಗುವ ವಿಷಯ ತಿಳಿದಿತ್ತು.

ಆ ವೇಳೆಯಲ್ಲಿ ತನ್ನ ಸಹಚರರೊಂದಿಗೆ ಅಂಡಗಿ ಸಮೀಪದ ನಿರ್ಜನ ಪ್ರದೇಶದಲ್ಲಿ ದರೋಡೆ ಮಾಡುವ ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದರು. ಅದರಂತೆ ವ್ಯವಸ್ಥಿತವಾಗಿ ದರೋಡೆ ಮಾಡಿದ್ರು.

unde kadubu/ ಮಲೆನಾಡ Exclusive ತಿಂಡಿ ವಿಶೇಷವೇನು?/ ಅಕ್ಕಿ ಉಂಡೆ ಕಡುಬಿಗೇಕೆ ಇಷ್ಟೊಂದು ಪ್ರಖ್ಯಾತಿ?

ಆದರೇ ಈ ಪ್ರಕರಣದ ಕಿಂಗ್ ಪಿನ್ ಆಸೀಪ್ ಸಿಕ್ಕಿಬಿದ್ದಿದ್ದೆ ಒಂದು ರೋಚಕ ವಿಷಯ. ಕಳ್ಳರು ರಂಗೋಲಿ ಕೆಳಗೆ ನುಸುಳಿದರೇ ಪೊಲೀಸರು ಚಾಪೆ ಕೆಳಗೆ ನುಸುಳುತ್ತಾರೆ ಎಂಬಂತೆ ಇಂತಹ ಹಲವಾರು ಪ್ರಕರಣಗಳನ್ನು ಬೇಧಿಸಿದ್ದ ಶಿರಸಿ ಪೊಲೀಸರು ಇದಕ್ಕಾಗಿಯೇ ಒಂದು ಖಡಕ್ ತನಿಖಾ ಚಂಡ ರಚಿಸಿದ್ದರು

ಈ ತಂಡದಲ್ಲಿ  ಎಲ್ಲಾ ಪರಿಣಿತ ಕ್ರೈಂ ಸಿಬ್ಬಂದಿಗಳನ್ನೇ ಬಳಸಿಕೊಳ್ಳಲಾಗಿತ್ತು. ಸಿಬ್ಬಂದಿಗಳು ಸುಮಾರು ಮರ್ನಾ ಲ್ಕು ದಿನ ಹಸನ್ ಖಾನರ ಮನೆ ಮುಂದೇ ಓಡಾಡುತ್ತ ಮಾಹಿತಿ ಕಲೆ ಹಾಕುತ್ತಿದ್ದರು.

ಆಗ ಅವರಿಗೆ ಅನುಮಾನ ಬಂದಿದ್ದೇ ನೆಜ್ಜೂರಿನ ಅಜಿಮುಲ್ಲಾನ ಮೇಲೆ . ಮೊದಲು ಪೊಲೀಸರು ಮಪ್ತಿಯಲ್ಲಿ ಬಂದಿದ್ದು ಅಜಿಮುಲ್ಲಾನ ಬಳಿ. ಪೊಲೀಸ್ ಭಾಷೆಯಲ್ಲಿ ಅಜಿಮುಲ್ಲಾನನ್ನು ವಿಚಾರಣೆ ನಡೆಸಿದಾಗ ಆತ ಬಾಯ್ಬಿಟ್ಟಿದ್ದು

ನೆಜ್ಜೂರಿನ ಅಬ್ದುಲ್ ಹಮೀದ್ ಎಂಬಾತನ ಹೆಸರನ್ನು. ಅಬ್ದುಲ್ ಹಮಿದ್  ಪೊಲೀಸರ ಅತಿಥಿಯಾದಾಗ ಆತ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಆಸೀಪನ ಹೆಸರನ್ನು ಬಾಯ್ಬಿಟ್ಟ. ಆಸೀಪ್ ಯಾವಾಗ ಸಿಕ್ಕಿಬಿದ್ದನೋ ಅಲ್ಲಿಂದ ಶುರುವಾಯಿತು ನೋಡಿ ಕಳ್ಳ ಪೊಲೀಸ್ ಆಟ.

ಹಾಗಾದರೇ ಆಸೀಫ್ ಬಾಯ್ಬಿಟ್ಟ ಆರೋಪಿಗಳು ಯಾರು? ಸಿಕ್ಕಿಬಿದ್ದ ಆರೋಪಿಗಳು ಈ ಹಿಂದೆ ಯಾವೇಲ್ಲ ಪ್ರಕರಣದಲ್ಲಿ ಇದ್ರು? ಮುಂದೇ ಪೊಲೀಸರ ಕಾರ್ಯಾಚರಣೆ ಹೇಗೆ ನಡೆಯಿತು? ಮುಂದೆ ಓದಿ

ಯಾವಾಗ ಆಸೀಪನನ್ನು ಪೊಲೀಸರು ಎತ್ತಿಕೊಂಡು ಬಂದು ವಿಚಾರಿಸಿದರೋ ಆವಾಗ ಬನವಾಸಿ ದರೋಡೆ ಪ್ರಕರಣದ ಸಂಪೂರ್ಣ ಹೂರಣ ಹೊರಬಿತ್ತು. ಅಷ್ಟು ದಿನಗಳ ಕಾಲ ಪೊಲೀಸರು ಮೂರ್ನಾ ಲ್ಕು ಜನ ಸೇರಿ ಈ ದರೋಡೆಯನ್ನು ಮಾಡಿರಬಹುದು ಎಂದು ಉಹಿಸಿದ್ದರು.

ಆದರೆ ಆಸೀಫ್ ಬಾಯಿಬಿಟ್ಟಾಗ ಒಮ್ಮೆ ಪೊಲೀಸರೇ ದಂಗಾಗಿ ಹೋದ್ರು. ಈ ದರೋಡೆ ಪ್ರಕರಣದಲ್ಲಿ ಬರೋಬ್ಬರಿ 12 ರಿಂದ 15 ಮಂದಿ ಪಾಲ್ಗೊಂಡಿದ್ದರು.  ಇವರೆಲ್ಲರದ್ದು ಇಂತಹ ಕೃತ್ಯದಲ್ಲಿ ಎತ್ತಿದ ಕೈ ಆಗಿತ್ತು.

ಸಿದ್ದಾಪುರದ ಅಬ್ದುಲ್ ಹಮೀದ್, ಅಜಿಮುಲ್ಲಾ ಅನ್ವರ ಸಾಬ್, ಸಾಗರದ ಗಾಂಧಿನಗರದ ಮನ್ಸೂರ ಮಹ್ಮದ್ ಜಾಫರ್ ಖಾನ್, ಭಟ್ಕಳದ ಅಬ್ದುಲ್ ತೆಹಮಾನ ಶಬ್ಬಿರ ವಟಗಾರ, 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ರಿಯಾಜ್ ಫಯಾಜ್, ಕೊಪ್ಪ ನೇತಾಜಿ ನಗರದ ವಿಶ್ವನಾಥ ವಾಸು ಶೆಟ್ಟಿ, ಕೊಪ್ಪ ಮೇಲಿನ ಪೇಟೆಯ ಮನೋಹರ ಆನಂದ ಶೆಟ್ಟಿ, ತೀರ್ಥಹಳ್ಳಿಯ ಬಾಳೆಬೈಲ್‌ನ ಇಕ್ಬಾಲ್, ಹಾಗೂ ನಾಪತ್ತೆಯಾದವರ ಹೆಸರನ್ನು ಬಾಯ್ಬಿಟ್ಟಿದ್ದ. 

ಇವರೆಲ್ಲ ಈ ಮೊದಲಿಂದಲೂ ನನ್ನ ಜೊತೆ ಕೈ ಸೇರಿಸಿ ದರೋಡೆ ಮಾಡಿ  ಕೆಲಸ ಮುಗಿದ ಮೇಲೆ ಅವರವರ ಊರಿಗೆ ಹೋಗುತ್ತಿದ್ದರು ಎಂಬ ಸತ್ಯವನ್ನು ಆಸಿಫ್ ಹೇಳಿದ್ದ.

ಆದರೇ ಇಂತಹ ಹಲವು ಪ್ರಕರಣಗಳು ಈ ಹಿಂದಿನಿಂದಲೂ ಮಾಡಿಕೊಂಡು ಬಂದಂತ ಆಸೀಫ್ ಎಲ್ಲಿಯು ತನ್ನ ಕುರುಹುಗಳನ್ನು ಬಿಟ್ಟಿಕೊಡಲಿಲ್ಲ. ಆದರೇ ಸಾಗರ ಠಾಣೆಯಲ್ಲಿ ಒಂದು ಪ್ರಕರಣ ಬಿಟ್ಟರೇ ಬೇರೆಲ್ಲಿಯೂ ಸಿಲುಕಿಕೊಂಡಿರಲಿಲ್ಲ. ಇದರಿಂದ ಹಲವು ಠಾಣೆಗಳಲ್ಲಿ  ದರೋಡೆ ಪ್ರಕರಣಗಳು ದಾಖಲಾಗಿದ್ದರೂ ಇವರು ಎಲ್ಲಿಯೂ ತಗಲಾಕಿಕೊಂಡಿರ್ಲಿಲ್ಲ. 

ಆದರೆ ಈತನ ಜೊತೆಯಲ್ಲಿದ್ದ  ಅನೇಕರ ಮೇಲೆ ಭಟ್ಕಳ, ಗದಗ್, ಉಡುಪಿ, ಚಿಕ್ಕಮಗಳೂರು,ಶಿವಮೊಗ್ಗ ಇತರೆ ಕಡೆಗಳಲ್ಲಿ ಅನೇಕ ಕೇಸ್ ಗಳು ಇವೆ. .ಆದರೆ ಎಲ್ಲಿಯೂ ಸಿಲುಕಿಕೊಳ್ಳದ ಈ ನಟೋರಿಯಸ್ ಆರೋಪಿಗಳು ಶಿರಸಿ ಪೊಲೀಸರು ಬೀಸಿದ ಬಲೆಯಲ್ಲಿ  ಸಿಕ್ಕಿಬಿದ್ದಿದ್ದಾರೆ.

ಆದರೆ ಶಿರಸಿ ಪೊಲೀಸರು ಈ ಪ್ರಕರಣದಲ್ಲಿ ಒಟ್ಟು ಒಂಬತ್ತು ಜನರನ್ನು ಬಂಧಿಸಿದ್ದಾರೆ. ಇನ್ನೂ  ಹಲವು ಆರೋಪಿಗಳು  ತಲೆಮರೆಸಿಕೊಂಡಿದ್ದಾರೆ.

ಅವರನ್ನು ಅತೀ ಶೀಘ್ರದಲ್ಲಿ ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಒಂದು ವೇಳೆ ಈ ಆರೋಪಿಗಳನ್ನು ಪೊಲೀಸರು ಹಿಡಿಯದೇ ಹೋಗಿದ್ರೆ ಲೆಕ್ಕಕ್ಕೆ ಸಿಗದೇ ಇರುವಷ್ಟು  ದರೋಡೆ, ಸುಲಿಗೆಗಳು, ಕೊಲೆ ಪ್ರಕರಣಗಳು ನಡೆಯುತ್ತಿದ್ವು. 

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಸಿಬ್ಬಂದಿಗಳು

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಏನ್. IPS, ಹಾಗೂ ಡಿ.ವೈ.ಎಸ್.ಪಿ. ರವಿ ಡಿ. ನಾಯ್ಕ ಅವರ ನೇತೃತ್ವದಲ್ಲಿ ಶಿರಸಿಯಲ್ಲಿ ಹಲವು  ದರೋಡೆ ಹಾಗೂ ಸಂವೇದನಾಶೀಲ ಪ್ರಕರಣಗಳನ್ನು ಭೇದಿಸಿ,

ಈ ವರ್ಷವಷ್ಟೇ ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿ ವಿಜೇತ  ಶಿರಸಿ ಸಿ.ಪಿ.ಐ. ರಾಮಚಂದ್ರ ನಾಯಕ,ಬನವಾಸಿ ಪಿ.ಎಸ್.ಐ. ಹನುಮಂತ ಬಿರಾದಾರ, ತನಿಖಾಧಿಕಾರಿ ಪಿ.ಎಸ್.ಐ. ಚಂದ್ರಕಲಾ ಪತ್ತಾರ, ಮಾರುಕಟ್ಟೆ ಠಾಣೆಯ ಪಿ.ಎಸ್.ಐ. ಭೀಮಾಶಂಕರ, ಅಪರಾಧ  ಸಿಬ್ಬಂದಿಗಳಾದ ಕೋಟೇಶ ನಾಗರವಳ್ಳಿ,

ರಾಘವೇಂದ್ರ ಜಿ., ಶಿವರಾಜ, ಚಂದ್ರಪ್ಪ ಕೊರವರ, ಪ್ರಶಾಂತ ಪಾವಸ್ಕರ, ಮಹಾಂತೇಶ ಬಾರ್ಕೇರ, ನಾಗಪ್ಪ ಓಣಿಕೇರಿ, ಗುರುರಾಜ, ಮಂಜುನಾಥ, ರಾಮಯ್ಯ ಪೂಜಾರಿ, ಬಸವರಾಜ ಜಾಅಡರ, ಹನುಮಂತ ಮಾಕಾಪುರ,

ಅಶೋಕ ನಾಯ್ಕ, ಜಿಮ್ಮು ಶಿಂದೆ, ಕುಮಾರ ಬಣಕಾರ, ತಾಂತ್ರಿಕವಿಭಾಗದ ರಮೇಶ ನಾಯ್ಕ, ಉದಯ ಗುನಗ, ರಾಜೇಶ ನಾಯ್ಕ, ರಾಮದೇವ ಗಾಂವಕರ, ವೆಂಕಟೇಶ ನಾಯಕ, ಬಸವರಾಜ ಮ್ಯಾಗೇರಿ, ಪ್ರವೀಣ, ಸಂತೋಷ ತಳವಾರ,

ಸಿ.ಪಿ.ಐ. ಜೀಪ್ ಚಾಲಕ ಪಾಂಡು ನಾಗೋಜಿಯ ಪಾಲ್ಗೊಂಡಿದ್ದರು. ಇವರ ಕಾರ್ಯವನ್ನು ಮೆಚ್ಚಿರುವ ಎಸ್ಪಿ ವಿಷ್ಣುವರ್ಧನ್  ಬಹುಮಾನವನ್ನು ಘೋಷಣೆ ಮಾಡಿದ್ದಾರೆ.

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link