ಶಿವಮೊಗ್ಗ : ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಹೊಸ ಅಧ್ಯಕ್ಷರು ಆಯ್ಕೆಯಾಗುತ್ತಾರಾ? ಹೀಗೊಂದು ಚರ್ಚೆಯು ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬರುತ್ತಲೇ ಮಲೆನಾಡು ಟುಡೆ. ಕಾಂ ಅದರ ಬೆನ್ನು ಹಿಡಿದು ಪರಿಶೀಲನೆ ಆರಂಭಿಸಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನದ ಬದಲಾವಣೆಗೆ ರಾಜ್ಯ ಕಾಂಗ್ರೆಸ್ ನಾಯಕರು ಮುಂದಾಗಿರುವುದು ನಿಜ ಎನ್ನುವುದು ಗೊತ್ತಾಗಿದೆ. ಇಷ್ಟೆ ಅಲ್ಲದೆ ಈಗಾಗಲೇ ಐದು ಜಿಲ್ಲೆಗಳ ಅಧ್ಯಕ್ಷ ಸ್ಥಾನ ಬದಲಾವಣೆಯನ್ನು ಮಾಡಿದ್ದ ರಾಜ್ಯ ಕಾಂಗ್ರೆಸ್ ನಾಯಕರ ಮನಸ್ಸಿನಲ್ಲಿ ಆ ಸಂದರ್ಭದಲ್ಲಿಯೇ ಶಿವಮೊಗ್ಗ ಜಿಲ್ಲಾಧ್ಯಕ್ಷ ಸ್ಥಾನವನ್ನು ಬದಲಾವಣೆ ಮಾಡುವ ಇಂಗಿತ ವ್ಯಕ್ತವಾಗಿತ್ತು.
ಗುಡ್ ನ್ಯೂಸ್ : ಕಾಶಿಪುರ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಮುಕ್ತಾಯ ಹಂತಕ್ಕೆ
ಈ ನಡುವೆ ಶಿವಮೊಗ್ಗದಲ್ಲಿ ನಡೆದ ಸಮಾವೇಶ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಮುಂದಕ್ಕೆ ಹೋಗಿತ್ತು ಎನ್ನಲಾಗಿದೆ. ಇನ್ನೂ ಮೂಲಗಳ ಪ್ರಕಾರ, ಇನ್ನೊಂದು ವಾರ ಅಥವಾ ಹದಿನೈದು ದಿನಗಳ ಒಳಗಾಗಿ ಅಧ್ಯಕ್ಷ ಸ್ಥಾನದ ಬಗ್ಗೆ ಒಂದು ನಿರ್ಧಾರ ಹೊರಬೀಳಲಿದೆ.
ಯಾರ್ಯಾರು ಆಕಾಂಕ್ಷಿಗಳು?
ಈ ಮಧ್ಯೆ ಬದಲಾಗಬಹುದಾದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಯಾರ್ಯಾರು ಎನ್ನುವ ಸುದ್ದಿಯನ್ನು ಅರಸಿದಾಗ ಸಿಕ್ಕಂತ ಹೆಸರುಗಳು ಸಾಕಷ್ಟು ಕುತೂಹಲ ಮೂಡಿಸಿದೆ. ಮುಖ್ಯವಾಗಿ ಜಿಲ್ಲಾಧ್ಯಕ್ಷ ಸ್ಥಾನದ ರೇಸ್ನಲ್ಲಿ ಆರ್.ಎಂ ಮಂಜುನಾಥ್ ಗೌಡರ ಹೆಸರು ಕೇಳಿಬಂದಿದೆ. ಇವರಷ್ಟೆ ಅಲ್ಲದೆ ಕಾಂಗ್ರೆಸ್ನ ಎಸ್ಪಿ ದಿನೇಶ್ರವರ ಹೆಸರು ಪ್ರಬಲವಾಗಿ ಕೇಳಿಬಂದಿದ್ದು, ಮುಂಚೂಣಿಯಲ್ಲಿದೆ. ಇವರಿಬ್ಬರು ಮುಖಂಡರಲ್ಲದೆ, ಆರ್ ಪ್ರಸನ್ನಕುಮಾರ್ ಹಾಗೂ ರಮೇಶ್ ಹೆಗ್ಡೆಯವರ ಹೆಸರು ಸಹ ಅಧ್ಯಕ್ಷ ಸ್ಥಾನದ ಗಾದಿಗೆ ಕೇಳಿಬರುತ್ತಿದೆ.
ಇದನ್ನು ಸಹ ಓದಿ : BREAKING NEWS : ಚುನಾವಣಾ ಕಣದಿಂದ ಹಿಂದೇ ಸರಿದರಾ ಡಾ.ಧನಂಜಯ್ ಸರ್ಜಿ/ ಸದ್ಯದಲ್ಲಿಯೇ ಬಿಜೆಪಿಗೆ
ಈ ಬಗ್ಗೆ ಇದುವರೆಗೂ ಯಾವುದೇ ಅಂತಿಮ ನಿರ್ಣಯಗಳು ಆಗಿಲ್ಲ, ಆದಾಗ್ಯು ಜಿಲ್ಲಾ ಮುಖಂಡರ ಸಹಮತ ಮತ್ತು ಮುಂದಿನ ಚುನಾವಣೆ ದೃಷ್ಟಿಯಿಂದ ಅಧ್ಯಕ್ಷ ಸ್ಥಾನಕ್ಕೆ ನಾಯಕನ ಆಯ್ಕೆ ಮಾಡುವ ಸಾಧ್ಯತೆ ಇದೆ. ಇನ್ನೂ ಹಾಲಿ ಅಧ್ಯಕ್ಷ ಹೆಚ್.ಎಸ್ ಸುಂದರೇಶ್ರವರು ಸಹ ಅಧ್ಯಕ್ಷರಾಗಿ ಮುಂದುವರಿಯುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ.
ದಿವಂಗತ ಸಾರೆಕೊಪ್ಪ ಬಂಗಾರಪ್ಪರವರ ಅಪರೂಪದ ವಿಡಿಯೋ ನೋಡಿ
ಒಟ್ಟಾರೆ, ಆಯ್ಕೆ ಪ್ರಕ್ರಿಯೆ ಅಂಗಳದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದು ಅಂತಿಮ ನಿರ್ಣಯ ರಾಜ್ಯ ಕಾಂಗ್ರೆಸ್ ನಾಯಕರು ಕೈಗೊಳ್ಳಲಿದ್ದಾರೆ.
ವರದಿ : ಅಜ್ಜಿಮನೆ
