ಪ್ರೀತ್ಸೆ...ಪ್ರೀತ್ಸೆ ಎಂದು ಅಪ್ರಾಪ್ತೆಗೆ ಜೀವ ಬೆದರಿಕೆ ! ದಾಖಲಾಯ್ತು ಪೋಕ್ಸೋ ಕೇಸ್! ಏನಿದು ಸಾಗರ ಪ್ರಕರಣ?

The Sagar Town police have detained a youth for allegedly threatening to kill a minor girl ಸಾಗರ ಟೌನ್​ ಪೊಲೀಸರು ಅಪ್ರಾಪ್ತೆಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪ ಸಂಬಂಧ ಯುವಕನೊಬ್ಬನನ್ನ ವಶಕ್ಕೆ ಪಡೆದಿದ್ದಾರೆ

ಪ್ರೀತ್ಸೆ...ಪ್ರೀತ್ಸೆ ಎಂದು ಅಪ್ರಾಪ್ತೆಗೆ ಜೀವ ಬೆದರಿಕೆ ! ದಾಖಲಾಯ್ತು ಪೋಕ್ಸೋ ಕೇಸ್! ಏನಿದು ಸಾಗರ ಪ್ರಕರಣ?

KARNATAKA NEWS/ ONLINE / Malenadu today/ Aug 28, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಟೌನ್​ ಪೊಲೀಸ್ ಸ್ಟೇಷನ್​ನಲ್ಲಿ (Sagar Town Police Station)  ನಲ್ಲಿ ಅಪ್ರಾಪ್ತೆಯೊಬ್ಬಳಿಗೆ ಪ್ರೀತಿಸು ಎಂದು ಹಿಂಸೆ ನೀಡಿ ಕೊಲೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. 

ಜೀವ ಬೆದರಿಕೆ ಆರೋಪ

ಸಾಗರ ಟೌನ್​ನಲ್ಲಿ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡಿದ್ದ ಯುವಕ ಆಕೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನಂತೆ. ಅಪ್ರಾಪ್ತೆಯ ತಂದೆಯ ನಿಧನದ ನಂತರ ಪರಿಚಯನಾದ ಈತ, ಇತ್ತೀಚೆಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದನಂತೆ. 

ಆರೋಪಿ ವಶಕ್ಕೆ 

ಈ ವಿಚಾರವಾಗಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಸಹಾಯ ಪಡೆದ ಅಪ್ರಾಪ್ತೆ ಸಾಗರ ಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಪ್ರಕರಣ ಸಂಬಂಧ ಯುವಕನನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸ್ತಿದ್ಧಾರೆ. 


ಇನ್ನಷ್ಟು ಸುದ್ದಿಗಳು