KARNATAKA NEWS/ ONLINE / Malenadu today/ Sep 20, 2023 SHIVAMOGGA NEWS’
ಶಿವಮೊಗ್ಗ ಜಿಲ್ಲೆಯಲ್ಲಿ ಹಬ್ಬಗಳ ಆಚರಣೆ ವೇಳೇ ಬೈಕ್ ರ್ಯಾಲಿಯನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಮಾಡಿದೆ. ಈ ನಡುವೆ ಸಾಗರ ತಾಲ್ಲೂಕಿನಲ್ಲಿ ಗಣಪತಿ ಪ್ರತಿಷ್ಟಾಪನೆ ವೇಳೇ ಅನುಮತಿ ಪಡೆಯದೆ ಬೈಕ್ ರ್ಯಾಲಿ ನಡೆಸಿದ ಆರೋಪವೊಂದಕ್ಕೆ ಸಂಬಂಧಿಸಿದಂತೆ ಸಾಗರ ಟೌನ್ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಈ ಸಂಬಂಧ ಸಿಸಿಟಿವಿ ದೃಶ್ಯಾವಳಿ ಗಮನಿಸಿ, ಐಪಿಸಿ ಸೆಕ್ಷನ್ 279, 188, 189, 190ರ ಅಡಿ ಪೊಲೀಸರು ಕೇಸು ದಾಖಲಿಸಿದ್ದರು. ಪ್ರಕರಣ ಸಂಬಂಧ ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ್ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡವರಿಗೆ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ಈ ನಡುವೆ ಮಾಜಿ ಸಚಿವ ಹರತಾಳು ಹಾಲಪ್ಪರವರು ವಿಚಾರ ತಿಳಿದು ಸ್ಟೇಷನ್ಗೆ ಆಗಮಿಸಿ, ಹಬ್ಬದ ಹುಮ್ಮಸಿನಲ್ಲಿ ನಡದ ಘಟನೆ ಇದಾಗಿದ್ದು, ಯಾವುದೇ ಉದ್ದೇಶಪೂರ್ವಕ ಕೃತ್ಯವಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆ ಬಳಿಕ ಡಿವೈಎಸ್‌ಪಿ ಯುವಕರಿಗೆ ಎಚ್ಚರಿಕೆ ನೀಡಿ ಪ್ರಕರಣವನ್ನು ಇತ್ಯರ್ಥ ಮಾಡಿದ್ದಾರೆ. ಕಳೆದ ಸೋಮವಾರ ನಡೆದ ಘಟನೆ ಬಗ್ಗೆ ಇದೀಗ ವರದಿಯಾಗಿದೆ
ಇನ್ನಷ್ಟು ಸುದ್ದಿಗಳು
ಹಬ್ಬದ ದಿನ ತವರು ಮನೆಯಿಂದ ಗಂಡನ ಮನೆಗೆ ಹೋದ ಬೆನ್ನಲ್ಲೆ ಯುವತಿ ಸಾವು! ಮದುವೆಯಾಗಿ ಏಳು ತಿಂಗಳಿನಲ್ಲಿ ನಡೆದಿದ್ದೇನು?
ಚೈತ್ರಾ ಕುಂದಾಪುರ ವಿರುದ್ಧ ಟಿಕೆಟ್ ಡೀಲ್ ಕೇಸ್/ ಶಿವಮೊಗ್ಗ ನಗರದಲ್ಲಿ ಆರೋಪಿ ಮಹಜರ್! ಯಾರೆಲ್ಲಾ ಬಂದಿದ್ರು!?