ತೀರ್ಥಹಳ್ಳಿ | ರಾಜಕಾಲುವೆ ವಿಚಾರಕ್ಕೆ ಜಮೀನಿನಲ್ಲಿಯೇ ವಿಷಕುಡಿದ ಅಣ್ಣ ತಮ್ಮ | ಮಣಿಪಾಲ್‌ ಆಸ್ಪತ್ರೆಗೆ ಶಿಫ್ಟ್‌ | ಶಾಸಕರ ದೌಡು

brothers, Dinesh and Satish, attempted suicide by consuming poison in front of officials who had come to clear an alleged encroachment on their land in Thirthahalli taluk,

ತೀರ್ಥಹಳ್ಳಿ | ರಾಜಕಾಲುವೆ ವಿಚಾರಕ್ಕೆ ಜಮೀನಿನಲ್ಲಿಯೇ ವಿಷಕುಡಿದ ಅಣ್ಣ ತಮ್ಮ | ಮಣಿಪಾಲ್‌ ಆಸ್ಪತ್ರೆಗೆ ಶಿಫ್ಟ್‌  | ಶಾಸಕರ ದೌಡು
Thirthahalli taluk

SHIVAMOGGA | MALENADUTODAY NEWS | Jul 8, 2024  ಮಲೆನಾಡು 

ಮಲೆನಾಡಲ್ಲಿ ಒತ್ತುವರಿ ವಿಚಾರ ಎಷ್ಟರಮಟ್ಟಿಗೆ ಕಗ್ಗಂಟಾಗಿದೆ ಎನ್ನುವುದಕ್ಕೆ ಮತ್ತೊಂದು ಪ್ರಕರಣ ಸಾಕ್ಷಿಯಾಗಿದೆ. ಆಡಳಿತ ವ್ಯವಸ್ಥೆ ತಮ್ಮ ಜಮೀನಿನಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಬಂದ ವಿಚಾರಕ್ಕೆ ಇಬ್ಬರು ಸಹೋದರರು ಅಧಿಕಾರಿಗಳ ಎದುರಲ್ಲೆ ವಿಷ ಕುಡಿದ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕುನಲ್ಲಿ ನಡೆದಿದೆ. 

ಅಳಿಯನ ಆತ್ಮಹತ್ಯೆ ಬಗ್ಗೆ ಮಾತನಾಡಿದ ಬಿ.ಸಿ ಪಾಟೀಲ್‌ | ಮೆಗ್ಗಾನ್‌ ...

ಘಟನೆಯ ವಿವರ ನೋಡುವುದಾದರೆ, ತಾಲೂಕಿನ ಅರಳಸುರುಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹುಲಿಸರ ಗ್ರಾಮದ ಸರ್ವೇ ನಂ 125 ಹಾಗೂ 126 ರಲ್ಲಿ ದಿನೇಶ್ (45 ವರ್ಷ ) ಹಾಗೂ ಸತೀಶ್ (49 ವರ್ಷ ) ಎಂಬವರು ಜಮೀನು ಮಾಡುತ್ತಿದ್ದರು. ಇವರ ಜಮೀನಿಗೆ ಹೊಂದಿಕೊಂಡಂತೆ ಗುಡ್ಡದನೀರು ಹರಿಯುವ ಕಾಲುವೆ ಇತ್ತು ಎನ್ನಲಾಗಿದೆ. ಅದು ಮುಚ್ಚಿಹೋಗಿದೆ. ರಾಜಕಾಲುವೆ ಒತ್ತುವರಿ ಮಾಡಿ ಮುಚ್ಚಿದ್ದು ಯಾರು ಎಂಬುದು ಸದ್ಯಕ್ಕೆ ಅಸ್ಪಷ್ಟ. ಅಲ್ಲದೆ ಇಬ್ಬರು ಸಹೋದರರು ತಮ್ಮದೇ ಜಮೀನಲ್ಲಿ ರಸ್ತೆಗೂ ಜಾಗ ಬಿಟ್ಟುಕೊಟ್ಟಿದ್ದರು ಎನ್ನಲಾಗುತ್ತಿದೆ. 

ಇನ್ನೂ ರಾಜಕಾಲುವೆ ಮುಚ್ಚಿ ಹೋಗಿದ್ದರಿಂದ ಗುಡ್ಡದ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ ಎಂದು ಗ್ರಾಮಸ್ಥರು ದೂರಿದ್ದರು. ಹೀಗಾಗಿ ಗ್ರಾಮಸ್ಥರ ಅಹವಾಲಿನ ಮೇರೆಗೆ ಸರ್ಕಾರಿ ಅಧಿಕಾರಿಗಳು, ದಿನೇಶ್‌ ಹಾಗೂ ಸತೀಶ್‌ರ ಜಮೀನಿನಲ್ಲಿ ರಾಜಕಾಲುವೆ ಮಾಡಲು ಮುಂದಾಗಿದ್ದಾರೆ. ಈ ವೇಳೇ ಆಕ್ರೋಶ ಹೊರಹಾಕಿದ ಸಹೋದರು ಅಲ್ಲಿಯೇ ಇದ್ದ ಕಳೇನಾಷಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.  

ತಕ್ಷಣವೇ ಇಬ್ಬರನ್ನು ತೀರ್ಥಹ‍‍ಳ್ಳಿ ಸರ್ಕಾರಿ ಆಸ್ಪತ್ರೆ ಜೆಸಿ ಹಾಸಿಟಲ್‌ಗೆ ದಾಖಲಿಸಿದ್ದಾರೆ. ಅಲ್ಲಿಂದ  ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೀರ್ಥಹ‍‍ಳ್ಳಿ ಶಾಸಕ  ಆರಗ ಜ್ಞಾನೇಂದ್ರ ಭೇಟಿ ನೀಡಿದ್ದಾರೆ. ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿರುವ ಅವರು ಇಬ್ಬರ ಚಿಕಿತ್ಸೆಗೆ ಕ್ರಮ ಕೈಗೊಂಡಿದ್ದಾರೆ.Two brothers, Dinesh and Satish, attempted suicide by consuming poison in front of officials who had come to clear an alleged encroachment on their land in Thirthahalli taluk, Shivamogga district. The brothers were farming on survey numbers 125 and 126 in Hulisara village, Aralasuruli Gram Panchayat.