ಮತ್ತೆ ಬಂದ್ ಆಯ್ತು ಹಲ್ಕೆ-ಮುಪ್ಪಾನೆ ಲಾಂಚ್ ! ಕಾರಣವೇನು ಗೊತ್ತಾ?

Halke-Muppane launch closed again! Do you know the reason?ಮತ್ತೆ ಬಂದ್ ಆಯ್ತು ಹಲ್ಕೆ-ಮುಪ್ಪಾನೆ ಲಾಂಚ್ ! ಕಾರಣವೇನು ಗೊತ್ತಾ?

ಮತ್ತೆ ಬಂದ್ ಆಯ್ತು ಹಲ್ಕೆ-ಮುಪ್ಪಾನೆ ಲಾಂಚ್ ! ಕಾರಣವೇನು ಗೊತ್ತಾ?

KARNATAKA NEWS/ ONLINE / Malenadu today/ Aug 27, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು (Sagara Taluk) ಕರೂರು ಹೋಬಳಿಯಿಂದ ಕಾರ್ಗಲ್ ಜೋಗಕ್ಕೆ ಸಂಪರ್ಕಿಸುವ ಲಾಂಚ್​ ಮತ್ತೆ ಸ್ಥಗಿತಗೊಂಡಿದೆ. 

ಹೌದು, ಈ ಹಿಂದೆ ಬೇಸಿಗೆಯಲ್ಲಿ ನೀರಿನ ಕೊರತೆಯಿಂದಾಗಿ  ಲಾಂಚ್ ಸೇವೆ ಸ್ಥಗಿತಗೊಂಡಿತ್ತು. ಇದೀಗ ತಾಂತ್ರಿಕ ದೋಷದಿಂದಾಗಿ ಲಾಂಚ್ ಕೆಟ್ಟು ನಿಂತಿದೆ.  ಹಲ್ಕೆ ಮುಪ್ಪಾನೆ ಲಾಂಚ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಈಗ ಎರಡು ದಿನಗಳಿಂದ ಲಾಂಚ್ ಸ್ಥಗಿತಗೊಂಡಿದೆ.  ಲಾಂಚ್​ನ  ಗೇರ್​ ಬಾಕ್ಸ್​ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಇನ್ನಷ್ಟೆ ಸರಿಪಡಿಸಬೇಕಿದೆ.  

ತುಮರಿ, ಮಾರಲಗೋಡು, ಬ್ಯಾಕೋಡು ಭಾಗದ ಜನರು  ಜೋಗ, ಕಾರ್ಗಲ್‌ಗೆ ತೆರಳಲು ಈ ಲಾಂಚ್ ಅನುಕೂಲವಾಗಿದೆ. ಅಲ್ಲದೆ  ಹೊಳೆಬಾಗಿಲು ಲಾಂಚ್‌ಗೆ ಪರ್ಯಾಯವಾಗಿ ಸಿಗಂದೂರಿಗೆ ತೆರಳಲು ಈ ಲಾಂಚ್ ಅನುಕೂಲವಾಗುತ್ತಿತ್ತು.   


ಇನ್ನಷ್ಟು ಸುದ್ದಿಗಳು