ಶಿವಮೊಗ್ಗ | ಬೈಕ್‌ಗಳಿಗೆ ಡಿಕ್ಕಿಯಾಗಿ ಹೋಟೆಲ್‌ಗೆ ನುಗ್ಗಿದ ಕಾರು | ಮಹಿಳೆ ಸಾವು

A car incident occurred in Hanasavadi village, Shivamogga taluk,

ಶಿವಮೊಗ್ಗ |  ಬೈಕ್‌ಗಳಿಗೆ ಡಿಕ್ಕಿಯಾಗಿ ಹೋಟೆಲ್‌ಗೆ ನುಗ್ಗಿದ ಕಾರು | ಮಹಿಳೆ ಸಾವು
Hanasavadi village, Shivamogga taluk,

SHIVAMOGGA | MALENADUTODAY NEWS | Jun 3, 2024  ಮಲೆನಾಡು ಟುಡೆʼ 

ನಿಯಂತ್ರಣ ತಪ್ಪಿದ ಕಾರೊಂದು ಮಹಿಳೆಗೆ ಡಿಕ್ಕಿಯಾಗಿದ್ದಷ್ಟೆ ಅಲ್ಲದೆ ಹೊಟೇಲ್‌ಗೆ ನುಗ್ಗಿದ ಘಟನೆ  ಶಿವಮೊಗ್ಗ ತಾಲೂಕು ಹನಸವಾಡಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಮೇಲಿನ ಹನಸವಾಡಿ ಗ್ರಾಮದ ಮಂಜುಳಮ್ಮ ಘಟನೆಯಲ್ಲಿ ಜೀವತೆತ್ತಿದ್ದಾರೆ. 

ಶಿವಮೊಗ್ಗದಿಂದ ದಾವಣಗೆರೆಗೆ ತೆರಳುತ್ತಿದ್ದ ಕಾರು ಹನಸವಾಡಿ ಬಳಿ ಮಂಜುಳ ಅವರಿಗೆ ಡಿಕ್ಕಿ ಹೊಡೆದಿದೆ. ಆ ಬಳಿಕ ಎರಡು ಬೈಕ್‌ಗಳಿಗೆ ಡಿಕ್ಕಿಯಾಗಿ ಪಕ್ಕದ ಹೊಟೇಲ್‌ಗೆ ನುಗ್ಗಿದೆ.  ಅದೃಷ್ಟವಶಾತ್ ಹೋಟೆಲ್‌ನಲ್ಲಿದ್ದವರಿಗೆ ಯಾವುದೇ ಸಮಸ್ಯೆಯಾಗಲಿಲ್ಲ. ಇನ್ನೂ ಘಟನೆ ವೇಳೆ ಕಾರಿನಲ್ಲಿ ಐವರು ಇದ್ದರು. 

ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕೇಸ್‌ ದಾಖಲಿಸಿದೆ. ಮೃತಪಟ್ಟ ಮಹಿಳೆ ಮಂಜುಳಮ್ಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.  

A car incident occurred in Hanasavadi village, Shivamogga taluk, where a car lost control and hit a woman named Manjulamma, killing her. The car then collided with two bikes before crashing into a nearby hotel. Fortunately, no one in the hotel was injured. Five people were present in the car at the time of the accident. The Shivamogga Rural Police have visited the site and registered a case.