ನಾಯಿಯನ್ನು ಕೊಲ್ಲಲು ಮುಂದಾದವ ಎದುರುಮನೆ ಹಿರಿಯ ತಾಯಿಯನ್ನ ಕೊಂದ | ಭದ್ರಾವತಿಯಲ್ಲಿ ನಡೆದಿದ್ದೇನು?

mentally unstable youth named Manjunath k…ed his neighbor, a 70-year-old woman named Fazlunissa, in Aralihalli village, Bhadravati.

ನಾಯಿಯನ್ನು ಕೊಲ್ಲಲು ಮುಂದಾದವ ಎದುರುಮನೆ ಹಿರಿಯ ತಾಯಿಯನ್ನ  ಕೊಂದ | ಭದ್ರಾವತಿಯಲ್ಲಿ ನಡೆದಿದ್ದೇನು?
Aralihalli village, Bhadravati, mentally unstable youth

SHIVAMOGGA | MALENADUTODAY NEWS | Jun 3, 2024  ಮಲೆನಾಡು ಟುಡೆʼ 

ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಯುವಕನೊಬ್ಬ ನಾಯಿಯನ್ನು ಕೊಲ್ಲಲು ಮಚ್ಚು ಎತ್ತಿಕೊಂಡ..ಈತನ ಮಚ್ಚಿನೇಟಿಗೆ ನಾಯಿ ಸಿಗಲಿಲ್ಲ. ಇದರ ಬೆನ್ನಲ್ಲೆ ಆತ ಎದುರುಗಡೆ ಮನೆಯ ಅಜ್ಜಿಯನ್ನೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆಯೊಂದು ಭದ್ರಾವತಿಯಲ್ಲಿ ನಡೆದಿದೆ.  ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಅರಳಿಹಳ್ಳಿ ಗ್ರಾಮದಲ್ಲಿ ಮಾನಸಿಕ ಸ್ಥಿಮಿತಕಳೆದೊಂಡಿರುವ ಮಂಜುನಾಥ ಎಂಬ ಯುವಕ ಎದುರು ಮನೆಯ ಅಜ್ಜಿಯನ್ನೇ ಕೊಂದಿರುವ ಆರೋಪಿ. 

ಮಂಜುನಾಥನ ಮನೆಯ ಬಳಿ ನೆನ್ನೆಯೆಲ್ಲಾ ನಾಯಿಯೊಂದು ಓಡಾಡಿದೆ. ಮೊದಲೇ ಮಾನಸಿಕ ಸೀಮಿತವಿಲ್ಲದ ಮಂಜುನಾಥ ನಾಯಿಯನ್ನು ಕೊಲ್ಲಲು ಮಚ್ಚಿನ ಸಮೇತನಾಗಿ ಬೀದಿಗಿಳಿದಿದ್ದ ನಿನ್ನೆಯಿಂದಲೇ ಓಡಾಡುತ್ತಿದ್ದನಂತೆ. ಆಗ  ಗ್ರಾಮದ ಕೆಲವರು ಥಳಿಸಿ ಬುದ್ದಿಹೇಳಿ ಮನೆಗೆ ಕಳಿಸಿದ್ದರಂತೆ

ಆನಂತರ ಮಂಜನ ತಮ್ಮ ಮತ್ತು ಆತನ ಪತ್ನಿ ಜಗಳವಾಡಿಕೊಂಡು ಮನೆ ಬಿಟ್ಟು ಹೋಗಿದ್ದಾರೆ. ಒಬ್ಬನೇ ಇದ್ದ ಮಂಜುನಾಥ್ ನಿಗೆ ಇಂದು ಮತ್ತೆ ನಾಯಿಯ ದರ್ಶನವಾಗಿದೆ. ನಾಯಿಯನ್ನು ಕಡಿಯಲು ಕತ್ತಿ ತೆಗೆದುಕೊಂಡಿದ್ದಾನೆ. ನಾಯಿ ತಪ್ಪಿಸಿಕೊಂಡು ಓಡಿ ಹೋಗಿದೆ. 

ಇದೇ ವೇಳೆ ಮಂಜುನಾಥನ ಮನೆ ಎದುರು ಇರುವ ಅಜ್ಜಿ ಫಜಲುನ್ನಿಸ್ಸಾ (70) ಎಂಬವರು ವಿಷಯ ಗೊತ್ತಿಲ್ಲದೇ ತಮ್ಮ ಪಾಡಿಗೆ ತಾವು ಮನೆಯೊಳಗೆ ಹೋಗುತ್ತಿದ್ರು. ಈ ಮಂಜುನಾಥನಿಗೆ ಏನನ್ನಿಸಿತೋ ಏನೋ ಹಿಂಬದಿಯಿಂದ  ಅಜ್ಜಿಮನೆಗೆ ನುಗ್ಗಿದ ಆತ, ವೃದ್ಧೆಯ ತಲೆಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮ ಅವಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.  

ಇನ್ನೂ ಘಟನೆ ಬಗ್ಗೆ ಮಾಹಿತಿ ಇಲ್ಲದ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ಆರಂಭಿಸಿ ವಿಚಾರಣೆ ಮಾಡಿದ್ದಾರೆ. ಆಗ ಮಂಜುನಾಥನ ಮಾನಸಿಕತೆಯ ಬಗ್ಗೆ ಗೊತ್ತಾಗಿದ್ದು, ಅಲ್ಲದೆ ಆತವೆಸಗಿದ ಕೃತ್ಯದ ಬಗ್ಗೆ ತಿಳಿದುಬಂದಿದೆ. ಮಂಜುನಾಥ

ಮಾನಸಿಕ ವೈದ್ಯರಿಂದ ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ. 

ಆದರೆ ಇತ್ತೀಚೆಗೆ ಔಷಧಿಯನ್ನು ಸೇವಿಸುವುದನ್ನ ನಿಲ್ಲಿಸಿದ್ದ. ಮೆಡಿಸನ್‌ ಬಿಟ್ಟಿದ್ದರಿಂದ ಆತ ಮತ್ತೆ  ಅಸ್ವಸ್ಥತೆಯಿಂದ ವರ್ತಿಸುತ್ತಿದ್ದ. ವೃದ್ಧೆಯನ್ನು ಕೊಲೆ ಮಾಡಿದ ಆತ ಅಲ್ಲಿಯೇ  ಸರ್ಕಲ್ ಬಳಿ ನಿಂತಿದ್ದ. ಆತನ ಮೈಮೇಲೆಲ್ಲಾ ರಕ್ತವಾಗಿರುವುದನ್ನ ಗಮನಿಸಿದ ಗ್ರಾಮಸ್ಥರು ಆತನಿಗೆ ಹೊಡೆದು ಏನು ಮಾಡಿದೆ ಎಂದು ಕೇಳಿದ್ದಾರೆ. ಏಟು ಬಿದ್ದ ಮೇಲೆ ನಡೆದ ಘಟನೆಯನ್ನು ಹೇಳಿದ್ದಾರೆ. ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸದ್ಯ ಆರೋಪಿಯನ್ನ ಬಂಧಿಸಿದ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.   

A mentally unstable youth named Manjunath k…ed his neighbor, a 70-year-old woman named Fazlunissa, in Aralihalli village, Bhadravati. Manjunath had been trying to kill a stray dog that had been roaming around his house. He attacked Fazlunissa with a machete when she was entering her house.