ದೊಡ್ಡಪೇಟೆಯ ಗಲ್ಲಿ ಗಲ್ಲಿಯಲ್ಲಿ ಪೊಲೀಸ್‌ ನಡಿಗೆ | 33+06 ಕೇಸ್‌ ದಾಖಲು

foot patrolling was conducted in various areas under the jurisdiction of Shivamogga A and B sub-divisions, Bhadravathi, Thirthahalli, Sagar, and Shikaripura sub-divisions.

ದೊಡ್ಡಪೇಟೆಯ ಗಲ್ಲಿ ಗಲ್ಲಿಯಲ್ಲಿ  ಪೊಲೀಸ್‌ ನಡಿಗೆ | 33+06 ಕೇಸ್‌ ದಾಖಲು
Shivamogga A and B sub-divisions, Bhadravathi, Thirthahalli, Sagar, Shikaripura sub-division

SHIVAMOGGA | MALENADUTODAY NEWS | Jun 11, 2024 ಮಲೆನಾಡು ಟುಡೆ 

ಶಿವಮೊಗ್ಗ ಪೊಲೀಸರು ಹಳೇ ಶಿವಮೊಗ್ಗದ ಮೇಲೆ ಹೆಚ್ಚಿನ ನಿಗಾವಹಿಸಿದ್ದಾರೆ, ಅಲ್ಲದೆ ದೊಡ್ಡಪೇಟೆಯಲ್ಲಿ ಪೂಟ್‌ ಪೆಟ್ರೋಲಿಂಗ್‌ ಹೆಚ್ಚಿಸಿದ್ದಾರೆ. ಅನುಮಾಸ್ಪದ ವ್ಯಕ್ತಿಗಳ ವಿರುದ್ಧ ಕೇಸ್‌ ದಾಖಲಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನಿನ್ನೆದಿನ  ದಿನಾಂಕಃ 10-06-2024  ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಕೆ ಆರ್ ಪುರಂ, ಸೀಗೆಹಟ್ಟಿ, ಓ ಟಿ ರಸ್ತೆ, ಎನ್ ಟಿ ರಸ್ತೆ, ಸವಾಯಿ ಪಾಳ್ಯ,ಹೊಸಮನೆ, ಶರಾವತಿ ನಗರ, ನಾಗಪ್ಪ ಕೇರಿ, ಲಷ್ಕರ್ ಮೊಹಲ್ಲಾ, ಯಲಕಪ್ಪನ ಕೇರಿ, ಮೆಹಬೂಬ್ ಗಲ್ಲಿ, ಉರ್ದು ಬಜಾರ್, ಗಾಂಧಿ ಬಜಾರ್, ಚೋರ್ ಬಜಾರ್, ಕುಂಬಾರ ಗುಂಡಿ, ಕಸ್ತೂರ್ ಬಾ ರಸ್ತೆ ಪೂಟ್‌ ಪೆಟ್ರೋಲಿಂಗ್‌ ನಡೆಸಲಾಗಿದೆ. 

 

ಅತ್ತ  ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ರವೀಂದ್ರ ನಗರ, ಉಷಾ ವೃತ್ತ, ಬೊಮ್ಮನಕಟ್ಟೆ, ರಾಗಿಗುಡ್ಡ, ಮಲ್ಲಿಕಾರ್ಜುನನಗರ, ಚೋರ್ಡಿ, ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಕೋಡಿಹಳ್ಳಿ ಕ್ರಾಸ್, ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ಚಿಕ್ಕಪೇಟೆ ನಗರ, ಹೊಸನಗರ ಬಸ್ ನಿಲ್ದಾಣ, ಸಾಗರ ಉಪ ವಿಭಾಗ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣ ಸಾಗರ, ಯಳವರಸಿ, ಕಾರ್ಗಲ್ ಬಜಾರ್, ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ ಭದ್ರಾಪುರದಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು  (Foot Patrolling) ಮತ್ತು ಠಾಣಾ ವ್ಯಾಪ್ತಿಗಳ ಹೊರ ವಲಯಗಳಲ್ಲಿ Area Domination ವಿಶೇಷ ಗಸ್ತು ಮಾಡಿದೆ 

 

ಈ ವೇಳೆ  Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 33 ಲಘು ಪ್ರಕರಣಗಳನ್ನು ಹಾಗೂ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಗಾಂಜಾ ಸೇವನೆ ಮಾಡಿರುವುದು ದೃಢ ಪಟ್ಟ 06 ಜನ ಆರೋಪಿತರ ವಿರುದ್ಧ NDPS ಕಾಯ್ದೆ ಯಡಿ 06 ಪ್ರಕರಣ ಗಳನ್ನು ದಾಖಲಿಸಲಾಗಿರುತ್ತದೆ.

 

Shivamogga police have increased surveillance in Old Shivamogga, intensified foot patrolling in Doddapet, and are filing cases against suspicious individuals. On 10th June 2024, foot patrolling was conducted in various areas under the jurisdiction of Shivamogga A and B sub-divisions, Bhadravathi, Thirthahalli, Sagar, and Shikaripura sub-divisions. During this operation, a total of 33 minor cases were registered against individuals involved in public nuisance and suspicious activities. Additionally, 6 individuals were found to be consuming marijuana and cases were filed against them under the NDPS Act.