KSRTC ಯಲ್ಲಿ 9,000 ಹುದ್ದೆಗಳನ್ನು ಭರ್ತಿಗೆ ನಿರ್ಧಾರ | ಟಿಕೆಟ್‌ ದರ ಏರಿಕೆಯಾಗುತ್ತಾ? ಇಲ್ಲಿದೆ ಗುಡ್‌ ನ್ಯೂಸ್‌

Karnataka State Road Transport Corporation (KSRTC) Minister Ramalinga Reddy announced plans to fill 9,000 vacancies across the four corporations, including drivers, conductors, and technical staff.

KSRTC ಯಲ್ಲಿ 9,000 ಹುದ್ದೆಗಳನ್ನು ಭರ್ತಿಗೆ ನಿರ್ಧಾರ | ಟಿಕೆಟ್‌ ದರ ಏರಿಕೆಯಾಗುತ್ತಾ? ಇಲ್ಲಿದೆ ಗುಡ್‌ ನ್ಯೂಸ್‌
Karnataka State Road Transport Corporation (KSRTC), Minister Ramalinga Reddy, , including drivers, conductors, technical staff.

SHIVAMOGGA | MALENADUTODAY NEWS | Jun 11, 2024 ಮಲೆನಾಡು ಟುಡೆ 

ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್‌ ದರ ಏರಿಕೆಯಾಗುತ್ತೆ ಎನ್ನುವ ವಿಚಾರದಲ್ಲಿ ಸಚಿವರ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದ್ದು, ಟಿಕೆಟ್‌ ದರ ಏರಿಸುವ ಬಗ್ಗೆ ಸದ್ಯ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ. ಎಲ್ಲ ನಾಲ್ಕು ನಿಗಮಗಳಿಂದ ಪ್ರಸ್ತಾವ ಬರಬೇಕು. ಬಂದ ಮೇಲೆ ಪರಿಶೀಲಿಸಲಾಗುವುದು ಎಂದಿದ್ದಾರೆ. 

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರ ಪ್ರಕಾರ,  ಡೀಸೆಲ್‌ ದರ ಏರಿಕೆಯಾಗಿದೆ. ಅದಕ್ಕೆ ಸರಿಯಾಗಿ ಟಿಕೆಟ್‌ ಮೌಲ್ಯ ಹೆಚ್ಚಳ ಮಾಡಬೇಕಿತ್ತು. 4 ವರ್ಷಗಳಿಂದ ಹೆಚ್ಚಿಸಿಲ್ಲ. ಈ ವರ್ಷ ಹೆಚ್ಚಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದಿದ್ದಾರೆ. 2020ರ ಫೆಬ್ರುವರಿಯಲ್ಲಿ ಟಿಕೆಟ್‌ ದರ ಏರಿಸಲಾಗಿತ್ತು.  

ಪ್ರಸ್ತುತ ಡೀಸೆಲ್‌ಗಾಗಿ ದಿನಕ್ಕೆ ₹4.98 ಕೋಟಿ ಬೇಕಾಗಿದೆ.ನೌಕರರ ವೇತನದ ವೆಚ್ಚ  ₹5.87 ಕೋಟಿಗೆ ಏರಿಕೆಯಾಗಿದೆ. ಡೀಸೆಲ್‌ ಮತ್ತು ನೌಕರರ ವೇತನ ವೆಚ್ಚ ಸೇರಿ ದಿನಕ್ಕೆ ₹2.45 ಕೋಟಿ ಹೆಚ್ಚಾಗಿದೆ. ಹಾಗಾಗಿ ಟಿಕೆಟ್‌ ದರ ಏರಿಸಬೇಕು ಎಂಬುದು ವ್ಯವಸ್ಥಾಪಕ ನಿರ್ದೇಶಕರ ಅಭಿಪ್ರಾಯವಾಗಿದೆ. ಆದರೆ ಈ ಪ್ರಸ್ತಾಪ ಸದ್ಯಕ್ಕಿಲ್ಲ ಎಂದು ಸಚಿವರು ಹೇಳಿದ್ದಾರೆ. 

9,000 ಹುದ್ದೆ ಭರ್ತಿಗೆ ನಿರ್ಧಾರ

ಇನ್ನೊಂದೆಡೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಸಚಿವ ರಾಮಾಲಿಂಗಾ ರೆಡ್ಡಿ  ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಸೇರಿ ನಾಲ್ಕು ನಿಗಮಗಳಲ್ಲಿ 9,000 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧಾರ ಕೈಗೊಂಡಿದ್ದೇವೆ. 2,000 ಹುದ್ದೆಗಳನ್ನು ಈಗಾಗಲೇ ತುಂಬಲಾಗಿದೆ. ಉಳಿದವು ನೇಮಕಾತಿ ಪ್ರಕ್ರಿಯೆಯಲ್ಲಿದೆ. 5,800 ಹೊಸ ಬಸ್‌ಗಳನ್ನು ಖರೀದಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

The Karnataka State Road Transport Corporation (KSRTC) Minister Ramalinga Reddy clarified that no decision has been made regarding the fare hike yet ̤ .Minister Ramalinga Reddy announced plans to fill 9,000 vacancies across the four corporations, including drivers, conductors, and technical staff. 2,000 positions have already been filled, and the remaining are in the recruitment process. The KSRTC is also purchasing 5,800 new buses.