ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನ ಭೇಟಿಯಾದ ಈಡಿಗ ಸಮುದಾಯ! ಕಾರಣವೇನು ಗೊತ್ತಾ?

Leaders of Ediga community have held talks with Chief Minister Siddaramaiahಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನ ಭೇಟಿಯಾಗಿ ಈಡಿಗ (ediga) ಸಮುದಾಯದ ಮುಖಂಡರು ಮಾತುಕತೆ ನಡೆಸಿದ್ದಾರೆ

ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನ ಭೇಟಿಯಾದ ಈಡಿಗ ಸಮುದಾಯ! ಕಾರಣವೇನು ಗೊತ್ತಾ?

KARNATAKA NEWS/ ONLINE / Malenadu today/ Sep 29, 2023 SHIVAMOGGA NEWS’ 

ಇತ್ತೀಚೆಗೆಷ್ಟೆ ನಡೆದಿದ್ದ ಸಮಾವೇಶವೊಂದರಲ್ಲಿ ಈಡಿಗ ಸಮುದಾಯದ ಬಿ.ಕೆ. ಹರೀಪ್ರಸಾದ್​ರವರು ಸಿಎಂ ಸಿದ್ದರಾಮಯ್ಯರವರ ವಿರುದ್ಧ ಹರಿಹಾಯ್ದಿದ್ದರು. ಆನಂತರ ಈಡಿಗ ಸಮುದಾಯಲ್ಲಿ ಸಿಎಂ ಗೆ ವಿರೋಧವಿದೆಯಾ ಎಂಬಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೆ ಸಚಿವ ಮಧು ಬಂಗಾರಪ್ಪರವರ ನೇತೃತ್ವದಲ್ಲಿ ಈಡಿಗ ಸಮುದಾಯ ಸಿಎಂ ಸಿದ್ದರಾಮಯ್ಯ ರವರನ್ನು ಭೇಟಿಯಾಗಿ ಮಾತುಕತೆ ನಡೆಸಿ ತಮ್ಮ ಅಹವಾಲವನ್ನು ಸಲ್ಲಿಸಿದೆ. 

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪರ ನೇತೃತ್ವದಲ್ಲಿ ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈಡಿಗ ಸಂಘದ ಪ್ರಮುಖರು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. 

ಈಡಿಗ ಸಮಾಜದ ಎಲ್ಲ ಉಪಪಂಗಡಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಶೀಘ್ರವೇ ಸಮಾವೇಶ ನಡೆಸಲಿದ್ದು, ಈ ಸಮಾವೇಶಕ್ಕೆ ಮುಖ್ಯಮಂತ್ರಿಯವರನ್ನ  ಮುಖಂಡರು ಆಹ್ವಾನಿಸಿದ್ದಾರೆ. 

ಈ ಸಂದರ್ಭ ಸಾರಗನ ಜಡ್ಡು ಕಾರ್ತಿಕೇಯ ಕ್ಷೇತ್ರದ ಅವಧೂತರಾದ ಯೋಗೇಂದ್ರ ಗುರೂಜಿ, ಶ್ರೀ ಕ್ಷೇತ್ರ ಸಿಗಂದೂರು ಧರ್ಮದರ್ಶಿ ಡಾ.ಎಸ್.ರಾಮಪ್ಪ, ಶಿರಸಿ ಶಾಸಕ ಭೀಮಣ್ಣ ನಾಯ್ಕ್, ಕರ್ನಾಟಕ ಪ್ರದೇಶ  ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ, ಬಿಲ್ಲವರ ಸಂಘದ ಅಧ್ಯಕ್ಷ ವೇದಮೂರ್ತಿ, 

ಸಮಾಜದ ಪ್ರಮುಖರಾದ ಧರ್ಮರಾಜ್, ಮುಡುರಾಘವೇಂದ್ರ, ರಾಘವೇಂದ್ರ ನಾಯ್ಕ್ ಸೇರಿದಂತೆ ಹಲವು ಮುಖಂಡರಿದ್ದರು. ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ಈಡಿಗ ಮತ್ತು ಅತಿಹಿಂದುಳಿದ ವರ್ಗಗಳ ಪೂರ್ವಭಾವಿ ಸಭೆ ನಡೆದಿದ್ದು, ಅಂದಿನ ಸಭೆಯಲ್ಲಿ ಹಲವರು ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಟೀಕಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 


ಇನ್ನಷ್ಟು ಸುದ್ದಿಗಳು 

  1. ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ! ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ! ಎಲ್ಲೆಲ್ಲಿಗೆ ಯಾರ್ಯಾರು ಓದಿ

  2. 2 ಲಕ್ಷ ಜನ! 3 ಸಾವಿರಕ್ಕೂ ಹೆಚ್ಚು ಪೊಲೀಸ್ ! ನಾಳಿನ ಬಂದೋಬಸ್ತ್​ ಬಗ್ಗೆ ಎಸ್​ಪಿ ಬ್ರೀಫಿಂಗ್​!

  3. ಹಿಂದೂ ಮಹಾಸಭಾದ ಮೊದಲ ಗಣಪತಿ ಪ್ರತಿಷ್ಟಾಪನೆಯಾಗಿದ್ದು ಶಿವಮೊಗ್ಗದಲ್ಲೆ! ಇಲ್ಲಿದೆ ನೋಡಿ ಇತಿಹಾಸದ ವಿನಾಯಕನ ದೃಶ್ಯಗಳು!

  4. ಹಿಂದೂ ಮಹಾಸಭಾ ಗಣಪತಿಗೆ ಸರ್ವಧರ್ಮ ‘ಸೌಹಾರ್ದ’ ಹೂವಿನ ಹಾರ!