ಮತದಾನ ಮುಕ್ತಾಯಕ್ಕೆ ಕೆಲವೇ ಸಮಯ ಬಾಕಿ! ಇಲ್ಲಿವರೆಗೂ ಶಿವಮೊಗ್ಗದಲ್ಲಿ ಎಷ್ಠಾಯ್ತು ಮತದಾನ? ವಿವರ ಇಲ್ಲಿದೆ ಓದಿ

KARNATAKA NEWS/ ONLINE / Malenadu today/ May 10, 2023 GOOGLE NEWS 

ಶಿವಮೊಗ್ಗ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೂ ಉತ್ತಮ ಮತದಾನವಾಗುತ್ತಿದೆ. ಬೆಳಗ್ಗೆ ಏಳು ಗಂಟೆಗೆ ಆರಂಭವಾದ ಮತದಾನ ಇಲ್ಲಿಯುವರೆಗೂ ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತು ಪಡಿಸಿ ಸುಗಮವಾಗಿ ಸಾಗಿದೆ. ಪ್ರತಿ ಎರಡು ಗಂಟೆಗೊಮ್ಮೆ ಚುನಾವಣಾ ಆಯೋಗ ಆದ ಮತಗಳ ಶೇಕಡಾವಾರು ಲೆಕ್ಕವನ್ನು ನೀಡುತ್ತಿದೆ. ಇದನ್ನ ಗಮನಿಸುವುದಾದರೆ ಒಂಬತ್ತು ಗಂಟೆಗೆ, 20 ಪರ್ಸೆಂಟ್ , 11 ಗಂಟೆಗೆ ನಲವತ್ತು ಪರ್ಸೆಂಟ್​ನಷ್ಟಿದ್ದ ಮತಪ್ರಮಾಣ ಮೂರು ಗಂಟೆಯ ಹೊತ್ತಿಗೆ ಬರೋಬ್ಬರಿ ಶೇಕಡಾ 55. 39 ರಷ್ಟಿತ್ತು. ಇದೀಗ ಐದು ಗಂಟೆಗೆ ಪ್ರಕಟ ಗೊಂಡ ಅಂಕಿ ಅಂಶಗಳ ಪ್ರಕಾರ ಶಿವಮೊಗ್ಗದಲ್ಲಿ ಒಟ್ಟಾರೆ 70.43 ಪರ್ಸೆಂಟ್ ಮತಗಳಾಗಿವೆ. 

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತದಾನ ವಿವರ.

111=ಶಿವಮೊಗ್ಗ(ಗ್ರಾ.)70.56

112=ಭದ್ರಾವತಿ.68.59 %

113=ಶಿವಮೊಗ್ಗ. 61.19%

114=ತೀರ್ಥಹಳ್ಳಿ. 73.20%

115=ಶಿಕಾರಿಪುರ  77.52%

116=ಸೊರಬ  75.31%

117=ಸಾಗರ.69.90%

ಇನ್ನೂ ಮತದಾನಕ್ಕೆ ಕೆಲವೆ ಸಮಯ ಬಾಕಿ ಉಳದಿದ್ದು, ಮತದಾನ ಮಾಡದವರು ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಬೇಕಿದೆ. 

ಶಿವಮೊಗ್ಗ ಬಸ್​ ನಿಲ್ದಾಣದಲ್ಲಿ ಬೆಂಗಳೂರು ನಗರ ಸಾರಿಗೆ (BMTC) ಬಸ್​ಗಳ ಓಡಾಟ! ಕಾರಣವೇನು ಗೊತ್ತಾ?

ಶಿವಮೊಗ್ಗ ನಗರದ ಬಸ್​ ನಿಲ್ಧಾಣದಲ್ಲಿ ಇವತ್ತು ಬೆಂಗಳೂರು ನಗರ ಸಂಚಾರಕ್ಕೆ ಮೀಸಲಾಗಿರುವ ಬಿಎಂಟಿಸಿ ಬಸ್​ಗಳ ಓಡಾಟ ಕಾಣ ಸಿಕ್ಕಿತ್ತು. ಇದು ಅಚ್ಚರಿಗೆ ಕಾರಣವಾಗಿತ್ತು. ಕೆಎಸ್​ಆರ್​ಟಿಸಿ  ಬಸ್​ಗಳು ಸೇರಿದಂತೆ ಖಾಸಗಿ ಬಸ್​ಗಳನ್ನು ಸಹ ಚುನಾವಣಾ ಪ್ರಕ್ರಿಯೆಗೆ ಬಳಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಚಾರಕ್ಕೆ ಬಸ್​ಗಳ ಕೊರತೆ ಎದ್ದು ಕಾಣುತ್ತಿತ್ತು. ಪರಸ್ಥಳದಿಂದ ವೋಟು ಹಾಕಲು ಹೊರಟವರು, ವೋಟು ಹಾಕಿ ವಾಪಸ್ ಹೊರಟವರು, ಬಸ್​ಗಳಿಗಾಗಿ ಪರದಾಡುವಂತಾಗಿತ್ತು. 

ಇನ್ನೊಂದೆಡೆ ಬಸ್​ಗಳ ಕೊರತೆಯನ್ನು ನೀಗಿಸಲು ಸಾರಿಗೆ ನಿಗಮ ಶಿವಮೊಗ್ಗದಲ್ಲಿ ಬಿಎಂಟಿಸಿ ಬಸ್​ಗಳನ್ನ  ಬಿಟ್ಟಿತ್ತು. ಆಲ್ಮೋಸ್ಟ್​ ಗಂಟೆಗೊಂದು ಬಸ್​ ಗಳ  ಓಡಾಟ ಕಂಡುಬಂದಿದ್ದು ವಿಶೇಷವಾಗಿ ಬಿಎಂಟಿಸಿ ಬಸ್​ಗಳ ಓಡಾಟ ಕುತೂಹಲ ಮೂಡಿಸಿತ್ತು. ಜನರಿಗೆ ತೊಂದರೆಯಾಗದಂತೆ ನೀರ್ವಹಿಸಲು ಕೆಎಸ್​ಆರ್​ಟಿಸಿ ಬೆಂಗಳೂರಿನ ಬಸ್​ಗಳನ್ನು ಲಾಂಗ್​ ರೂಟ್​ನಲ್ಲಿ ಓಡಿಸಿದೆ ಎನ್ನಲಾಗಿದೆ. ಈ ಬಸ್​ಗಳ ಚಾಲಕರಿಗೆ ರೂಟ್​ ಗೊತ್ತಿಲ್ಲದೇ ಇರುವುದು ಕೂಡ ಸಾಕಷ್ಟು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ. ಅಲ್ಲಲ್ಲಿ ದಾರಿಯಾವುದಯ್ಯ ಎಂದು ವಿಚಾರಿಸಿ ಚಾಲಕರು ಮುಂದಕ್ಕೆ ಸಾಗುತ್ತಿದ್ರು. ಇನ್ನೂ ಈ  ಬಸ್​ಗಳಲ್ಲಿ ಬೆಂಗಳೂರಿನ ಏರಿಯಾಗಳ ಟಿಕೆಟ್​ನ್ನ ನೀಡಲಾಗುತ್ತಿತ್ತು. 

 

ಶಿವಮೊಗ್ಗ – ಬೆಂಗಳೂರು ಮಾರ್ಗದ ಪರಿಚಯವಿಲ್ಲದೆ ತ್ರಾಸಪಟ್ಟುಕೊಂಡು ಬಿಎಂಟಿಸಿ ಬಸ್​ಗಳನ್ನು ಚಲಾಯಿಸುತ್ತಿದ್ದ ಚಾಲಕರು ಒಂದು ಕಡೆಯಾದರೆ, ಟಿಕೆಟ್ ಗೊಂದಲ ಮತ್ತು ರಶ್​ನಲ್ಲಿ ಪ್ರಯಾಣಿಕರು ಪರದಾಡುವಂತಾಗಿತ್ತು.  

ಈ ಮತಗಟ್ಟೆಯಲ್ಲಿ ಆಗಿರೋದು ಕೇವಲ ಮೂರೇ ಮತ

ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮವಾಗಿ ಮತದಾನವಾಗುತ್ತಿದ್ದರು ಕೆಲವು ಕಡೆ ಕಡಿಮೆ ಮತದಾರರ ಬಗ್ಗೆ ವರದಿಯಾಗಿದೆ ಅದರಲ್ಲಿಯೂ ಭದ್ರಾವತಿಯ ಕನಸಿನ ಕಟ್ಟೆಯ ಗ್ರಾಮದಲ್ಲಿ ಇರುವ ಮತಗಟ್ಟೆಯಲ್ಲಿ ಮಧ್ಯಾಹ್ನದವರೆಗೂ ಕೇವಲ ಎರಡು ಮತಗಳು ಚಲಾವಣೆಯಾಗಿದೆ ಇದಕ್ಕೆ ಕಾರಣ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿರುವುದು.

ಬಸ್ ಸೌಲಭ್ಯ, ಸ್ಮಶಾನ ಸೇರಿದಂತೆ ಮೂಲಬೂತ ಸೌಕರ್ಯ ಮತ್ತು ನೆಟವರ್ಕ್ ಸಮಸ್ಯೆ ಸಂಬಂಧ ವಿವಿಧ‌ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ‌, ಈ ಮೊದಲೇ  ಕನಸಿನಕಟ್ಟೆಯ ಗ್ರಾಮಸ್ಥರು ಮತದಾನ‌ ಬಹಿಷ್ಕಾರಗೊಳಿಸಿ ಬ್ಯಾನರ್ ಕಟ್ಟಿದ್ದರು‌

ಈ ಹಿನ್ನಲೆಯಲ್ಲಿ 1021 ಮತಗಳಿರುವ ಮತಗಟ್ಟೆಯಲ್ಲಿ ಇದುವರೆಗೂ ಮೂರು ಮತಗಳು ಚಲಾವಣೆಗೊಂಡಿದೆ. ಕನಸಿನಕಟ್ಟೆ ಶಿವಮೊಗ್ಗ ಗ್ರಾಮಾಂತರ ಮತಕ್ಷೇತ್ರವಾಗಿದೆ. ಮತಗಟ್ಟೆ ಸಿಬ್ಬಂದಿಗಳು,ಕೊನೆ ಕ್ಷಣದಲ್ಲಿ ಮತದಾನಕ್ಕೆ ಮತದಾರರು ಆಗಮಿಸುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ..

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು