KARNATAKA NEWS/ ONLINE / Malenadu today/ Oct 13, 2023 SHIVAMOGGA NEWS
ಶಿವಮೊಗ್ಗ ವಿಮಾನ ನಿಲ್ದಾಣ (Shimoga Airport) ನಲ್ಲಿ ಮತ್ತೆ ಫ್ಲೈಟ್ ಲ್ಯಾಂಡಿಂಗ್ಗೆ ಸಮಸ್ಯೆಯಾದ ಘಟನೆ ಬಗ್ಗೆ ವರದಿಯಾಗಿದೆ.
ನಿನ್ನೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದ ಇಡಿಂಗೋ ವಿಮಾನ ರನ್ವೇನಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೇ ಗಾಳಿಯಲ್ಲಿಯೇ ಸುತ್ತು ಹೊಡೆಯುತ್ತಿತ್ತು. ಆಗಸದಲ್ಲಿ ಸುಮಾರು 20 ನಿಮಿಷ ರೌಂಡ್ ಹಾಕಿದ ಬಳಿಕ ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಆಯ್ತು.
ಬೆಳಿಗ್ಗೆ 9.50ಕ್ಕೆ ಬೆಂಗಳೂರಿನಿಂದ ಹೊರಟಿದ್ದ ವಿಮಾನ 11.05ಕ್ಕೆ ಶಿವಮೊಗ್ಗದ ಸೋಗಾನೆ ಬಳಿ ಇರುವ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. 20 ನಿಮಿಷ ತಡವಾಗಿ ಲ್ಯಾಂಡ್ ಆಗಿದೆ. ಈ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ವಿಮಾನ ನಿಲ್ದಾಣದ ಮೇಲೆ ಮಿಸ್ಟ್ ಆವರಿಸಿ, ವಿಮಾನ ಲ್ಯಾಂಡಿಂಗ್ ಮಾಡಲು ಸಮಸ್ಯೆಯಾಗಿತ್ತು. ನಿನ್ನೆಯು ಇದೇ ರೀತಿಯಲ್ಲಿ ಇಂಡಿಗೋ ವಿಮಾನವನ್ನ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲು ಸಮಸ್ಯೆ ಎದುರಾಗಿತ್ತು.
ಇನ್ನಷ್ಟು ಸುದ್ದಿಗಳು
‘ಮಾರಿ ಹಬ್ಬದ’ ಮಾತು ’| KS ಈಶ್ವರಪ್ಪ ವಿರುದ್ದ ಜಯನಗರ ಪೊಲೀಸ್ ಸ್ಟೇಷನ್ನಲ್ಲಿ ಸುಮೊಟೋ FIR
ಆಕಸ್ಮಿಕ ಘಟನೆ | ರಾಘವೇಶ್ವರ ಶ್ರೀಗಳ ತಾಯಿಗೆ ಗಾಯ | ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
