‘ಮಾರಿ ಹಬ್ಬದ’ ಮಾತು ’| KS ಈಶ್ವರಪ್ಪ ವಿರುದ್ದ ಜಯನಗರ ಪೊಲೀಸ್ ಸ್ಟೇಷನ್​ನಲ್ಲಿ ಸುಮೊಟೋ FIR

An FIR has been registered against former minister KS Eshwarappa , ಮಾಜಿ ಸಚಿವ ಕೆಎಸ್​ ಈಶ್ವರಪ್ಪರವರ ವಿರುದ್ದ ಎಫ್ಐಆರ್ ದಾಖಲಾಗಿದೆ

‘ಮಾರಿ ಹಬ್ಬದ’ ಮಾತು ’|  KS  ಈಶ್ವರಪ್ಪ  ವಿರುದ್ದ ಜಯನಗರ ಪೊಲೀಸ್ ಸ್ಟೇಷನ್​ನಲ್ಲಿ ಸುಮೊಟೋ FIR

KARNATAKA NEWS/ ONLINE / Malenadu today/ Oct 13, 2023 SHIVAMOGGA NEWS

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ ಹಾಗೂ ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಖಂಡಿಸಿ ನಿನ್ನೆ ಬಿಜೆಪಿ ಮುಖಂಡರು ಪ್ರತಿಭಟನಾ ಸಭೆ ನಡೆಸಿದ್ದರು. ಈ ವೇಳೆ ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪ  (K.S. Eshwarappa) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಮ್ಮ ಭಾಷಣದಲ್ಲಿ ಅವರು ಬಳಸಿದ್ದ ಪದಗಳ ವಿರುದ್ಧ ಇದೀಗ   ಐಪಿಸಿ ಸೆಕ್ಷನ್ 153ಎ ಮತ್ತು 504 ಅಡಿಯಲ್ಲಿ ಸುಮುಟೋ ಕೇಸ್ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಈ ಬಗ್ಗೆ ಅಧಿಕೃತ ಮಾಹಿತಿ ಪೊಲೀಸ್ ಇಲಾಖೆ ನೀಡಿಲ್ಲ. ಮೂಲಗಳ ಪ್ರಕಾರ,  ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಮಾಜಿ ಸಚಿವರ ವಿರುದ್ದ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. 

ಹಿಂದೂ ಹರ್ಷನ ಕೊಲೆಯ ನಂತರ ಹಿಂದೂಗಳು  ಮಾರಿ ಹಬ್ಬದಲ್ಲಿ ಕುರಿ, ಕೋಳಿ ಕೊಚ್ಚಿ ಹಾಕಿದ ಹಾಗೆ ಕೊಚ್ಚಬಹುದಿತ್ತು. ಆದರೆ ಹಿಂದೂ ಸಮಾಜ ಆ ರೀತಿ ಪ್ರತಿಕ್ರಿಯಿಸದೇನೆ, ಶಾಂತ ರೀತಿಯಲ್ಲಿ ನಡೆದುಕೊಂಡಿದೆ. 

ಹಿಂದೂ ಹೆಣ್ಣುಮಕ್ಕಳು ಝಾನ್ಸಿ ರಾಣಿ, ಕಿತ್ತೂರು ಚೆನ್ನಮ್ಮಳನ ರಕ್ತ ಹಂಚಿಕೊಂಡು ಬೆಳೆದವರು. ಅಂತಹವರನ್ನ ಕೆಣಕಿದರೆ ಕೆಣಕಿದವರನ್ನ ಕೊಚ್ಚಿ ಹಾಕುತ್ತಾರೆ ಎಂದಿದ್ದರು ಎಂದು ಆರೋಪಿಸಲಾಗಿದೆ. ಇದೇ ಮಾತಿಗೆ ಪ್ರತಿಯಾಗಿ ಜಯನಗರ ಪೊಲೀಸ್ ಸ್ಟೇಷನ್​ನಲ್ಲಿ ಸುಮುಟೋ ಕೇಸ್ ದಾಖಲಾಗಿದೆ ಎಂದು ತಿಳಿದುಬಂದಿದೆ.  




ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ