ಪೊಲೀಸ್​ ಕಣ್ತಪ್ಪಿಸಿದ ಪೂರ್ಣೇಶನ ಮಿಂಚಿನ ಓಟಕ್ಕೆ 2ನೇ ಕ್ಲೈಮ್ಯಾಕ್ಸ್​! ರೋಚಕ ಮರದ ಮೇಲೆ ಮಲಗುವವನ ಈ ಸ್ಟೋರಿ!

Balehonnur police in Chikkamagaluru district have arrested Poornesh again

ಪೊಲೀಸ್​  ಕಣ್ತಪ್ಪಿಸಿದ ಪೂರ್ಣೇಶನ ಮಿಂಚಿನ ಓಟಕ್ಕೆ 2ನೇ ಕ್ಲೈಮ್ಯಾಕ್ಸ್​! ರೋಚಕ ಮರದ ಮೇಲೆ ಮಲಗುವವನ ಈ ಸ್ಟೋರಿ!
Balehonnur police in Chikkamagaluru district have arrested Poornesh again

SHIVAMOGGA  |  Jan 17, 2024  |    ಚಿಕ್ಕಮಗಳೂರು ಜಿಲ್ಲೆ  ಬಾಳೆಹೊನ್ನೂರು ಪೇಟೆಯಲ್ಲಿ ಕಳೆದೊಂದು ತಿಂಗಳಿನಿಂದಲೂ ಸುದ್ದಿಯಾಗುತ್ತಿರುವ ಪೂರ್ಣೆಶ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. 

ಮರಗಳ ಮೇಲೆ ಮಲಗಿ ರಾತ್ರಿ ಕಳೆಯುತ್ತಿದ್ದ ಈತ ಪೊಲೀಸರಿಗೆ ಬಹುಮುಖ್ಯವಾಗಿ ಬೇಕಾಗಿದ್ದ ಆರೋಪಿಯಾಗಿದ್ದ. ವಾಟೆಂಟ್​ ಲಿಸ್ಟ್​ನಲ್ಲಿದ್ದ ಈತನನ್ನ ಬಂಧಿಸಲು ಹೋದಾಗ ಪೊಲೀಸರಿಗೆ ಮಚ್ಚು ಬೀಸಿದ್ದ. ಪ್ರತಿಯಾಗಿ ಈತನ ಕಾಲಿಗೆ ಪೊಲೀಸರು ಬುಲೆಟ್ ಇಳಿಸಿದ್ದರು. ತನ್ನ ಎಸ್ಕೇಪ್​ ಸ್ಟೈಲ್ ಹಾಗೂ ರಾತ್ರಿ ಕಳೆಯುವ ರೀತಿಯಲ್ಲೆ ಸುದ್ದಿಯಾಗಿದ್ದ ಪೂರ್ಣೇಶನನ್ನ ಪೊಲೀಸರು ಬಂಧಿಸಿದ್ದು ಸುದ್ದಿಯಾಗಿತ್ತು. 

ಬಾಳೆಹೊನ್ನೂರು

ಆ ಬಳಿಕ ಪೂರ್ಣೇಶನ ಗಾಯಕ್ಕೆ ಚಿಕಿತ್ಸೆ ನೀಡುವಾಗಲೂ ಪೊಲೀಸರೇ ಯೋಗಕ್ಷೇಮ ವಿಚಾರಿಸಿದ್ದರು. ಇಷ್ಟೆಲ್ಲಾ ಸೇವೆ ಬಂಧನ ಸೇವೆ ಮಾಡಿದ್ರೂ ಸಹ ಪೂರ್ಣೇಶ  ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರ ಕಣ್ಣಪ್ಪಿಸಿ ಪರಾರಿಯಾಗಿದ್ದ. 

ಮಾಗಲು ಪೂರ್ಣೇಶ

ಕೊಲೆ ಯತ್ನ ಬೆದರಿಕೆ, ಪೊಲೀಸರ ಮೇಲೆ ಹಲ್ಲೆ ಸೇರಿದಂತೆ ಸುಮಾರು 9 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಮಾಗಲು ಗ್ರಾಮದ ಪೂರ್ಣೇಶ್ ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ತನ್ನ ಸ್ವಗ್ರಾಮ ಮಾಗಲು ಸಮೀಪದ ಕಾಡಿನಲ್ಲಿ ಮರಗಳ ಮೇಲೆ ದಿನ ಕಳೆಯುತ್ತಿದ್ದ ಆರೋಪಿ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದ

ಮೊದಲೇ ಹೇಳಿದಾಗೆ ಆನಂತರ  ಬಾಳೆಹೊನ್ನೂರು ಪೊಲೀಸರು ಮಾಗಲು ಗ್ರಾಮದಲ್ಲಿದ್ದ ಆತನ ಮನೆಯ ಮೇಲೆ ದಾಳಿ ಮಾಡಿ ಆತನನ್ನ ಬಂಧಿಸಿದ್ದರು ಗುಂಡೇಟಿನಿಂದ ಗಾಯಗೊಂಡಿದ್ದ ಈತನಿಗೆ ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರ ಭದ್ರತೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. 

ಮಲ್ಲೆಗೌಡ ಆಸ್ಪತ್ರೆಯಿಂದ ಎಸ್ಕೇಪ್

ಚಿಕಿತ್ಸೆ ಬಳಿಕ ಕೊಂಚ ಸುಧಾರಿಸಿಕೊಂಡಿದ್ದ ಪೂರ್ಣೇಶ್ ಇತ್ತೀಚೆಗೆ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ ನಿದ್ರೆಗೆ ಜಾರಿದ್ದ ವೇಳೆ ಪೊಲೀಸ್ ಸಿಬ್ಬಂದಿಯ ಜೇಬಿನಲ್ಲಿದ್ದ ಕೈಕೋಳದ ಕೀ ಎಗರಿಸಿ ಕೋಳದಿಂದ ಬಿಡಿಸಿಕೊಂಡು ಯಾರಿಗೂ ತಿಳಿಯದಂತೆ ಪರಾರಿಯಾಗಿದ್ದ. ಆ ಬಳಿಕ ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಅದೃಷ್ಟಕ್ಕೆ ಕಾಲಿಗೆ ಗುಂಡೇಟು ಬಿದ್ದಿದ್ದ ಪರಿಣಾಮ ಪೂರ್ಣೇಶನಿಗೆ ಹೆಚ್ಚು ದೂರ ಹೋಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಸ್ವಗ್ರಾಮ ಮಾಗಲು ಸಮೀಪದಲ್ಲೇ  ಅಡಗಿಕೊಂಡಿದ್ದ . ಊರಿನ ಸೇತುವೆ ಬಳಿ ಅಡಗಿದ್ದ ಆರೋಪಿಯನ್ನು ಪೊಲೀಸರು ಮತ್ತೆ ಎಚ್ಚರಿಕೆ ಕೊಟ್ಟು ಅರೆಸ್ಟ್ ಮಾಡಿದ್ದಾರೆ.