ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗದಲ್ಲಿ VHP ಶೋಭಾಯಾತ್ರೆ! ಸೆಪ್ಟೆಂಬರ್​ 27 ಕ್ಕೆ ಶಿವಪ್ಪನಾಯಕ ಸರ್ಕಲ್​ನಲ್ಲಿ ಸಮಾವೇಶ!

Malenadu Today

KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’ 

ಶಿವಮೊಗ್ಗ / ವಿಶ್ವ ಹಿಂದೂ ಪರಿಷತ್​ 60 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ ಶೌರ್ಯ ಜಾಗರಣ ರಥಯಾತ್ರೆ ಆಯೋಜಿಸುತ್ತಿದೆ. ಪೂರಕವಾಗಿ  ಶಿವಮೊಗ್ಗ ಜಿಲ್ಲೆಯಲ್ಲಿ ಸೆಪ್ಟೆಂಬರ್​ 27ರಂದು ರಥಯಾತ್ರೆ, ಶೋಭಾ ಯಾತ್ರೆ ಮತ್ತು ಸಾರ್ವಜನಿಕ ಸಭೆ ನಡೆಯಲಿದೆ.

ಈ ಬಗ್ಗೆ  ನಿನ್ನೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ವಿಹಿಂಪ ಜಿಲ್ಲಾಧ್ಯಕ್ಷ ಜೆ. ಆರ್. ವಾಸುದೇವ್, ನಮ್ಮದು  ಶೌರ್ಯ ಪರಾಕ್ರಮಗಳ ಇತಿಹಾಸ, ಸಾವಿರಾರು ವರ್ಷಗಳಿಂದ ಈ ರಾಷ್ಟ್ರದ ಮೇಲೆ ಪರಕೀಯರ ಆಕ್ರಮಣಗಳು ನಡೆಯುತ್ತಲೇ ಇದ್ದರೂ ಸಹ ಅದನ್ನು ದಿಟ್ಟವಾಗಿ ಎದುರಿಸಲಾಗಿದೆ..ಅವರ ತ್ಯಾಗ ಬಲಿದಾನಗಳಳ ಪರಿಣಾಮವಾಗಿ ಧರ್ಮವು ಸುರಕ್ಷಿತವಾಗಿ ನಮ್ಮ ಕಾಲಖಂಡರದವರೆಗೂ ತಲುಪಿಸಿದ್ದಾರೆ. ಅದನ್ನು ಸಂರಕ್ಷಿಸುವ ಹೊಣೆ ಮತ್ತು ಮುಂದಿನ ಪೀಳಿಗೆಗೆ ಯಥಾವತ್ತಾಗಿ ತಲುಪಿಸಿ ಧರ್ಮ ರಕ್ಷಣೆಯನ್ನು ಮಾಡಬೇಕಾದ ಕಾರ್ಯವು ಪ್ರತಿಯೊಬ್ಬ ಹಿಂದೂವಿನ ಮೇಲಿದೆ ಎಂದು ತಿಳಿಸಿದ್ದರು. 

ಇನ್ನೂ ರಥಯಾತ್ರೆಯ ಬಗ್ಗೆ ಮಾಹಿತಿ ನೀಡುತ್ತಾ, ಉದ್ದೇಶಿತ ಈ ರಥಯಾತ್ರೆಯು ಸೆ. 25 ಚಿತ್ರದುರ್ಗದಿಂದ ಆರಂಭ ವಾಗಿ. ಕರ್ನಾಟಕ ದಕ್ಷಿಣ ಪ್ರಾಂತದಲ್ಲಿರುವ ಎಲ್ಲಾ ಜಿಲ್ಲೆಗಳ ಮೂಲಕ  ಹಾದುಹೋಗುವಂತೆ ಆಯೋಜಿಸಲಾಗಿದೆ ಎಂದರು. 

ಚಿತ್ರದುರ್ಗದಿಂದ ,ದಾವಣಗೆರೆ, ಶಿಕಾರಿಪುರ, ಸೊರಬ, ಸಾಗರ, ತೀರ್ಥಹಳ್ಳಿ ಯಲ್ಲಿ ಸಂಚರಿಸಲಿರುವ ಶೋಭಾಯಾತ್ರೆಯು, ಆನಂತರ ಶಿವಮೊಗ್ಗ ತಲುಪಲಿದೆ. 27 ರಂದು ಶಿವಮೊಗ್ಗದಲ್ಲಿ ಬೃಹತ್ ಶೋಭ ಯಾತ್ರೆ ಮತ್ತು ಸಾರ್ವಜನಿಕ ಸಭೆ ನಡೆಯಲಿದೆ.  ಅಂದು ಶಿವಪ್ಪ ನಾಯಕ ವೃತ್ತದಲ್ಲಿ ಸಂಜೆ 5.30ಕ್ಕೆ  ಸಾರ್ವಜನಿಕ ವೇದಿಕೆ ಕಾರ್ಯಕ್ರಮವಿದೆ ಎಂದರು. ಈ ಸಭೆಯಲ್ಲಿ ಬಿಳಕಿಯ ರಾಚೋಟೇಶ್ವರ ಸ್ವಾಮೀಜಿ ಪಾಲ್ಗೊಳ್ಳುವರು. ಪ್ರಮುಖ ಭಾಷಣವನ್ನು ವಿಹೆಚ್​ಪಿ ಲೋಹಿತಾಶ್ವ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ

ಬಜರಂಗದಳವು ಆಯೋಜಿಸಿರುವ ಈ ರಾಷ್ಟ್ರವ್ಯಾಪ್ತಿ ರಥಯಾತ್ರೆಯಲ್ಲಿ ಪ್ರತಿ ಯೊಬ್ಬ ಹಿಂದುವೂ ಭಾಗವಹಿಸಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ವಿಹಿಂಪ ಜಿಲ್ಲಾ ಕಾರ್ಯದರ್ಶಿ ನಾರಾಯಣ ವರ್ಣೇಕರ್, ಬಜರಂಗದಳದ ಸಂಯೋಜಕ ರಾಜೇಶ್ ಗೌಡ, ನಾಗೇಶ್, ಸುರೇಶ್ ಉಪಸ್ಥಿತರಿದ್ದರು ಮನವಿ ಮಾಡಿದ್ರು. 


ಇನ್ನಷ್ಟು ಸುದ್ದಿಗಳು 

 


 

Share This Article