ಅಪರಿಚಿತ ಮಹಿಳೆಯಿಂದ ಅನುಮಾನ, ಹಸು ಸಾಲಕ್ಕೆ ಮ್ಯಾನೇಜರ್​ಗೆ ಬೆದರಿಕೆ, ಹೋಟೆಲ್​ನಲ್ಲಿ ಚಾಕು ಇರಿತ, ರೈಲ್ವೆ ಸ್ಟೇಷನ್​ನಲ್ಲಿ ಕಿರಿಕ್! TODAY @NEWS

Here is a brief report of various crime cases that took place in Shivamogga ಶಿವಮೊಗ್ಗದಲ್ಲಿ ನಡೆದ ವಿವಿಧ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ ಇಲ್ಲಿದೆ

ಅಪರಿಚಿತ ಮಹಿಳೆಯಿಂದ ಅನುಮಾನ, ಹಸು ಸಾಲಕ್ಕೆ ಮ್ಯಾನೇಜರ್​ಗೆ ಬೆದರಿಕೆ,  ಹೋಟೆಲ್​ನಲ್ಲಿ ಚಾಕು ಇರಿತ, ರೈಲ್ವೆ ಸ್ಟೇಷನ್​ನಲ್ಲಿ ಕಿರಿಕ್!  TODAY @NEWS

KARNATAKA NEWS/ ONLINE / Malenadu today/ Aug 10, 2023 SHIVAMOGGA NEWS

ಅಪರಿಚಿತ ಮಹಿಳೆಯ ಓಡಾಟ, ಊರಲ್ಲಿ ಅನುಮಾನ!

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಸೊರಬ ಪೊಲೀಸ್ ಸ್ಟೇಷನ್ (Soraba Police Station) ವ್ಯಾಪ್ತಿಯಲ್ಲಿ ಬರುವ ಹಿರಲೇ ಗ್ರಾಮದಲ್ಲಿ ಅಪರಿಚಿತ ಮಹಿಳೆಯೊಬ್ಬರು ಓಡಾಡುತ್ತಿರುವುದು ಊರಿನಲ್ಲಿ ಅನುಮಾನ ಮೂಡಿಸಿತ್ತು. ಇನ್ನೂ ಮಹಿಳೆಯನ್ನು ವಿಚಾರಿಸಿದ ಊರಿನವರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ವಿಚಾರಿಸಿದಾಗ, ಆಕೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದು ಗೊತ್ತಾಗಿದೆ. ತಕ್ಷಣ ಆಕೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಪೊಲೀಸರು ಶಿಫ್ಟ್ ಮಾಡಿದ್ದಾರೆ.  

ಬ್ಯಾಂಕ್ ಮ್ಯಾನೇಜರ್​ಗೆ ಬೆದರಿಕೆ

ಶಿವಮೊಗ್ಗ ತಾಲ್ಲೂಕಿನ ಹೊಸಳ್ಳಿ ಶಾಖೆಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಹಸು ಸಾಲ ನೀಡದಿದ್ದರೇ ಕೊಲೆ ಮಾಡುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ ಬಗ್ಗೆ ವರದಿಯಾಗಿದೆ. ಕಳೆದ ಆಗಸ್ಟ್ 7 ರಂದು ನಡೆದ ಘಟನೆ ಬಗ್ಗೆ ದೂರು ದಾಖಲಾಗಿದ್ದು,  ಬ್ಯಾಂಕ್‌ ಮ್ಯಾನೇಜರ್‌ ನಿರಂಜನ್‌ ಅವರಿಗೆ ಚಾಕು ತೋರಿಸಿ, ಜೀವ ಬೆದರಿಕೆ ಒಡ್ಡಿರುವ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ (Tunganagar Police Station) ಎಫ್ಐಆರ್ ದಾಖಲಾಗಿದೆ. .

ಹೋಟೆಲ್​ ಕಾರ್ಮಿಕನಿಗೆ ಇರಿತ

ಶಿವಮೊಗ್ಗ ಜಿಲ್ಲೆ ಭಧ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಸರ್ಕಲ್​ನಲ್ಲಿರುವ ಹೋಟೆಲ್​ವೊಂದರಲ್ಲಿ ಜಗಳ ನಡೆದು ಕಾರ್ಮಿಕನಿಗೆ ದುಷ್ಕರ್ಮಿಯೊಬ್ಬ ಇರಿದಿದ್ದಾನೆ. ರೌಡಿಶೀಟರ್ ನೂರುಲ್ಲಾ ಎಂಬಾತ ಕುಡಿದು ರಸ್ತೆಯಲ್ಲಿ ತೂರಾಡುತ್ತಿದ್ದ ಸಂದರ್ಭದಲ್ಲಿ ಪೈರೋಜ್ ಎಂಬವರು ಮೈಮೇಲೆ ಬೀಳಬೇಡ, ಲೇಡಿಸ್ ಓಡಾಡುವ ಜಾಗದಲ್ಲಿ, ನೋಡ್ಕೊಂಡು ಹೋಗಲಾಗಲ್ವ ಎಂದಿದ್ದಾರೆ. ಇದೇ ವಿಚಾರಕ್ಕೆ ಜಗಳವಾಗಿದೆ.  ಬಳಿಕ ಸ್ಥಳೀಯರು ಜಗಳ ಬಿಡಿಸಿದ್ಧಾರೆ. ಆನಂತರ ಪುನಃ ಹೋಟೆಲ್​ಗೆ ಬಂದ ನೂರುಲ್ಲಾ ಫೈರೋಜ್​ರ ಸಂಬಂಧಿ ಕಾರ್ಮಿಕನಿಗೆ ಇರಿದಿದ್ಧಾನೆ. ಈ ವೇಳೆ ತಡೆಯಲು ಬಂದ ವ್ಯಕ್ತಿಗೂ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಸದ್ಯ ಪ್ರಕರಣ ಸಂಬಂಧ ಭದ್ರಾವತಿ ಹೊಸಮನೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ರೈಲ್ವೆ ಸ್ಟೇಷನ್​ ಮುಂದೆ ಕಿರಿಕ್ 

ಆಟೋ ಬಾಡಿಗೆ ವಿಚಾರಕ್ಕೆ ಶಿವಮೊಗ್ಗ ರೈಲ್ವೆ ಸ್ಟೇಷನ್​  (Shimoga Railway Station) ಎದುರು ಆಟೋ ಚಾಲಕರು , ಇನ್ನೊಬ್ಬ ಚಾಲಕನಿಗೆ ಹಲ್ಲೆ ಮಾಡಿದ ಆರೋಪವೊಂದು ಕೇಳಿಬಂದಿದೆ. ಈ ಸಂಬಂಧ  ಜಯನಗರ ಪೊಲೀಸ್ ಸ್ಟೇಷನ್ (Jayanagar Police Station) ನಲ್ಲಿ ದಾಖಲಾದ ಎಫ್​ಐಆರ್​ ಪ್ರಕಾರ, ಬಾಡಿಗೆ ವಿಚಾರದಲ್ಲಿ ಆಟೋ ಚಾಲಕರು ದೂರುದಾರ ಚಾಲಕನಿಗೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. 

ದುಬಾರಿ ಶೂಗಳನ್ನು ಕದ್ದ ಕಳ್ಳರು

ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ (Doddapete Police Station)  ನಲ್ಲಿ ದುಬಾರಿ ಶೂ ಹಾಗೂ ಚಪ್ಪಲಿ ಕದ್ದಿರುವ ಸಂಬಂಧ ದೂರು ದಾಖಲಾಗಿದೆ. ನೆಹರು ರೋಡ್​ ನಲ್ಲಿರುವ ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿದ್ದು 10 ಸಾವಿರ ಮೌಲ್ಯದ ಶೂಗಳನ್ನ ಕದ್ದೊಯ್ದ ಕಳ್ಳರು, ಜೊತೆಯಲ್ಲಿ 200 ರೂಪಾಯಿ ಹಣವನ್ನ ಕದ್ದೊಯ್ದಿದ್ಧಾರೆ ಎಂದು ದೂರಲಾಗಿದೆ.   

ಇನ್ನಷ್ಟು ಸುದ್ದಿಗಳು



 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು