ಸಾಗರ ರಸ್ತೆ & NT ರಸ್ತೆಯಲ್ಲಿ ಅಪಘಾತ! ಖಾಲೀದ್ ಮತ್ತು ಸೈಫಾನ್ ಸಾವು

Incident on Sagar Road & NT Road kills Khaled and Saifan

ಸಾಗರ ರಸ್ತೆ  & NT  ರಸ್ತೆಯಲ್ಲಿ ಅಪಘಾತ!  ಖಾಲೀದ್ ಮತ್ತು ಸೈಫಾನ್ ಸಾವು
NT Road

Shivamogga Feb 19, 2024    ಸಾಗರ ತಾಲ್ಲೂಕು ಕೋಣೆಹೊಸೂರು ಸಮೀಪ ಬೈಕ್​ ಸ್ಕಿಡ್​ ಆಗಿ ಬೈಕ್​ ಸವಾರನೊಬ್ಬ ಮೃತಪಟ್ಟಿದ್ದಾರೆ. ಇಲ್ಲಿ ಪತ್ರೆಹೊಂಡದ ಬಳಿ ಈ ಘಟನೆ ನಡೆದಿದೆ.  ಶಿವಮೊಗ್ಗ ತಾಲ್ಲೂಕು ಉಂಬ್ಳೆಬೈಲ್​  ನ 26 ವರ್ಷ ಖಾಲೀದ್​ ಮೃತ ವ್ಯಕ್ತಿ. ಇನ್ನೊಬ್ಬನನ್ನ ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕೆಲಸದ ಕಾರಣಕ್ಕಾಗಿ ಸೊರಬಕ್ಕೆ ತೆರಳುತ್ತಿದ್ದರು, ಈ ವೇಳೆ ಅಪಘಾತವಾಗಿದೆ. ಘಟನೆಯಲ್ಲಿ ಕೆಳಕ್ಕೆ ಬಿದ್ದ ಖಾಲಿದ್​ ರ ತಲೆಗೆ ತೀವ್ರ ಪೆಟ್ಟು ಬಿದ್ದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಇನ್ನೊಬ್ಬರಿಗೂ  ಗಂಭೀರ ಪೆಟ್ಟಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 

ಇನ್ನೊಂದೆಡೆ ಶಿವಮೊಗ್ಗದ ಎನ್​ಟಿ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸೈಫಾನ್ ಎಂಬಾತ ಸಾವನ್ನಪ್ಪಿದ್ದಾರೆ. ಎನ್​ ಟಿ ರಸ್ತೆಯಲ್ಲಿ ಬರುತ್ತಿದ್ದಾಗ ಬೈಕ್ ಟ್ರ್ಯಾಕ್ಟರ್​ಗೆ ಡಿಕ್ಕಿಯಾಗಿದೆ. ಇತ್ತೀಚೆಗೆ ಬೈಕ್ ರ್ಯಾಲಿಯೊಂದರಲ್ಲಿ ಪಾಲ್ಗೊಂಡಿದ್ದ ಸೈಫಾನ್​, ದುರಂತ ಅಂತ್ಯ ಕಂಡಿರುವುದು ಅವರ ಕುಟುಂಬಸ್ಥರಲ್ಲಿ ದುಃ ಮೂಡಿಸಿದೆ.