ತುಂಗಾ ನದಿಯಲ್ಲಿ ಹೆಬ್ಬಾವು/ ಬಂತು ₹10 ಲಕ್ಷ ಕರೆಂಟ್ ಬಿಲ್/ ಬಸ್ ಆಕ್ಸಿಡೆಂಟ್​ನಲ್ಲಿ ಭದ್ರಾವತಿಯ 9 ಮಂದಿಗೆ ಗಾಯ!

Various news details of Shimoga, Chikkamagaluru, Tarikere, Bhadravatiಶಿವಮೊಗ್ಗ, ಚಿಕ್ಕಮಗಳೂರು, ತರಿಕೆರೆ, ಭದ್ರಾವತಿಯ ವಿವಿಧ ಸುದ್ದಿಗಳ ವಿವರ

ತುಂಗಾ ನದಿಯಲ್ಲಿ ಹೆಬ್ಬಾವು/ ಬಂತು ₹10 ಲಕ್ಷ  ಕರೆಂಟ್ ಬಿಲ್/ ಬಸ್ ಆಕ್ಸಿಡೆಂಟ್​ನಲ್ಲಿ ಭದ್ರಾವತಿಯ 9 ಮಂದಿಗೆ ಗಾಯ!

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS


ತುಂಗಾನದಿಯಲ್ಲಿ ಕಾಣ ಸಿಕ್ಕ 12 ಅಡಿ ಉದ್ದದ ಹೆಬ್ಬಾವು 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕುರುವಳ್ಳಿ ಬಳಿ ತುಂಗಾನದಿಯಲ್ಲಿಂದ ದೊಡ್ಡ ಹೆಬ್ಬಾವೊಂದು ಕಾಣ ಸಿಕ್ಕಿತ್ತು, ನೀರಿನ ಹರಿವಿನ ನಡುವೆ ಅಡ್ಡಲಾಗಿ ಹೋಗುತ್ತಿದ್ದ ಹೆಬ್ಬಾವನ್ನು ನೋಡಲು ಅಲ್ಲಿದ್ದವರೆಲ್ಲಾ ಜಮಾಯಿಸಿದ್ದರು. ಹಲವು ಹೊತ್ತು ಅಲ್ಲಿಯೇ ಇದ್ದ ಹೆಬ್ಬಾವು ನಂತರ ಅಲ್ಲಿಂದ ಮುಂದಕ್ಕೆ ಚಲಿಸಿದೆ. ಸುಮಾರು 12 ಅಡಿ ಉದ್ದದ ಹೆಬ್ಬಾವು ನೋಡಲು ಜನರು ಜಮಾಯಿಸಿದ್ದು ವಿಶೇಷವಾಗಿತ್ತು.  


ಬಂತು ಬರೋಬ್ಬರಿ 10 ಲಕ್ಷ ರೂಪಾಯಿ ಕರೆಂಟ್ ಬಿಲ್ 

ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿರುವ ಅಂಗಡಿಯೊಂದರ ಮಾಲೀಕರಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದೆ.  ಆಗಸ್ಟ್ ತಿಂಗಳಿಗೆ 10,26,054 ರೂಪಾಯಿ ವಿದ್ಯುತ್​ ಬಿಲ್​ ನೀಡಲಾಗಿದ್ದು, ಈ ಬಗ್ಗೆ ಮಾಲೀಕರು ಸ್ಥಳೀಯ ಮಾಧ್ಯಮಗಳಿಗೆ ವಿವರಿಸಿದ್ದಾರೆ. ಇನ್ನೂ ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಸರಿ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದು, ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ತಿಳಿಸಿದ್ದಾರಂತೆ. 

ತರಿಕೆರೆಯಲ್ಲಿ ಬಸ್ ಡಿಕ್ಕಿ , ಭದ್ರಾವತಿಯ 9 ಮಂದಿಗೆ ಗಾಯ

ನಿನ್ನೆ ಚಿಕ್ಕಮಗಳೂರು ಜಿಲ್ಲೆ ಬೇಲೇನಹಳ್ಳಿ ಬಳಿ ಕೆಎಸ್​ಆರ್​ಟಿಸಿ ಹಾಗೂ ಕಾರು ನಡುವೆ ಡಿಕ್ಕಿಯಾಗಿತ್ತು. ಈ ಘಟನೆಯಲ್ಲಿ ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಅವರೆಲ್ಲರು ಭದ್ರಾವತಿಯವರು ಎಂದು ತಿಳಿದುಬಂದಿದೆ. ತರಿಕೆರೆಯಿಂದ ಭದ್ರಾವತಿಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪ್ರಕರಣ ಸಂಬಂಧ ತರಿಕೆರೆ ಪೊಲೀಸರು ಕೇಸ್ ದಾಖಲಿಸದ್ದು, ಗಾಯಾಳುಗಳು ಶಿವಮೊಗ್ಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

ಇನ್ನಷ್ಟು ಸುದ್ದಿಗಳು