ಹಬ್ಬದ ತಯಾರಿ/ ಸಾವಿರದ ಇನ್ನೂರು ಹೆಚ್ಚುವರಿ ಬಸ್​ಗಳನ್ನು ರೋಡಿಗಿಳಿಸಿದ KSRTC

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS

 

ಇನ್ನೇನು ಕೆಲವೇ ದಿನಗಳು ಕಳೆದ ಗೌರಿ  ಗಣೇಶ ಮನೆಗೆ ಬರುತ್ತಾರೆ.. ಗೌರಿ ಮತ್ತು ಗಣೇಶನ ಹಬ್ಬಕ್ಕೆ  ಇಡೀ ಕರುನಾಡು ಸಿದ್ದಗೊಳ್ಳುತ್ತಿದೆ. ಇದರ ಬೆನ್ನಲ್ಲೆ ಜನರಿಗೆ ಯಾವುದೇ ತೊಂದರೆಯಾಗದಂತೆ ಕೆಎಸ್​ಆರ್​ಟಿಸಿ ಸಂಸ್ಥೆ 1200 ವಿಶೇಷ ಬಸ್​ಗಳ ವ್ಯವಸ್ತೆಯನ್ನು ಕಲ್ಪಿಸಿದೆ. ಇರುವ ಬಸ್​ಗಳ ಜೊತೆಗೆ ಹೆಚ್ಚುವರಿ ಬಸ್​ಗಳನ್ನು ಕಲ್ಪಿಸುತ್ತಿದ್ದು, ಈ ಬಸ್​ ಗಳು  ಸಪ್ಟೆಂಬರ್‌ 15 ರಿಂದ 18ವರೆಗೂ ಸಂಚರಿಸಲಿವೆ. 

ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್‌) ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ ಸೇರಿದಂತೆ ಹೊರರಾಜ್ಯಗಳಿಗೂ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 

ಇನ್ನೂ ಸ್ಯಾಟ್​ಲೈಟ್ ಬಸ್​ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆಗೆ ಬಸ್​ ಸೌಲಭ್ಯವನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಆಡ್ವಾನ್ಸ್ ಬುಕ್ಕಿಂಗ್ ಸೌಲಭ್ಯವನ್ನು ನೀಡಲಾಗಿದ್ದು,  ನಾಲ್ಕಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಆಡ್ವಾನ್ಸ್ ಟಿಕೆಟ್ ಬುಕ್ ಮಾಡಿದರೆ, ಟಿಕೆಟ್​ ದರದಲ್ಲಿ ಐದು ಪರ್ಸೆಂಟ್ ರಿಯಾಯಿತಿ ಸಹ ನೀಡುತ್ತಿದೆ.  

ಇನ್ನಷ್ಟು ಸುದ್ದಿಗಳು 


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor