ಸ್ಟಾರ್ ಆಗಲು ಇಲ್ಲೊಂದಿದೆ ಅವಕಾಶ! ಸೌಂದರ್ಯ ಸ್ಪರ್ಧೆಗೆ ಪ್ರೀ ಆಡಿಷನ್​ ! ಏನಿದು?

Malenadu Today

KARNATAKA NEWS/ ONLINE / Malenadu today/ Nov 12, 2023 SHIVAMOGGA NEWS

Shivamogga | ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು, ರ್ಯಾಂಪ್​ ಮೇಲೆ ನಡೆಯಬೇಕು ಎಂಬ ಆಸೆ ಹೊತ್ತ ಸುಂದರಿಯರಿಗೆ ಪ್ರೀ ಆಡಿಷನ್​ನನ್ನ ಹಮ್ಮಿಕೊಳ್ಳಲಾಗಿದೆ.  ಒಂದೊಂದು ವಿಭಾಗದಿಂದ ಇದ 15 ರಿಂದ 20 ಸ್ಪರ್ಧಾಳುಗಳನ್ನು ಫಿನಾಲೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. 

ಇಲ್ಲಿ ಭಾಗವಹಿಸಿದ 10ರ ಗುಂಪಿನಲ್ಲಿ ಆಯ್ಕೆಯಾದ ಸದಸ್ಯರಿಗೆ ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಗೆ ಅವಕಾಶ ನೀಡಲಾಗುತ್ತದೆ ಎಂದು ಕರೆಯಾಳಹಳ್ಳಿ ಬಸವನಗೌಡ ಜಯಮ್ಮ(ಕೆಬಿಜೆ) ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥೆ ಕೆ.ಸಿ.ಮೇಘಾ ತಿಳಿಸಿದ್ದಾರೆ. 

READ : ಮತ್ತೆ ನಡೆಯಲಿದೆ ಶಿವಮೊಗ್ಗದ ಹುಣಸೋಡು ಸ್ಫೋಟದ ತನಿಖೆ? ಕಾರಣವೇನು ಗೊತ್ತಾ? JP EXCLUSIVE

ಈ ಸಂಬಂಧ ಸುದ್ದಿಗೋಷ್ಟಿ ನಡೆಸಿದ ಅವರು ದಾವಣಗೆರೆಯಲ್ಲಿ ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆ ಹಾಗೂ ‘‘ತಾರೆ ನೀ ಮಿನುಗು’’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿಸೆಂಬರ್ 3ರಂದು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ರು.  

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 50 ಜನರಿಗೆ ತಾರೆ ನೀ ಮಿನುಗು ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸುವುದರ ಜೊತೆಯಲ್ಲಿ  ಸಂಸ್ಥೆಯ ಪೂರಕ ಸಂಸ್ಥೆಯಾದ ಒಬಿಎಂ ಈವೆಂಟ್ಸ್ ದಾವಣಗೆರೆ ಯಿಂದ ಅಂದು ಸಂಜೆ ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿದೆ.

READ : ಸಂಸಾರಸ್ಥನ ಜೊತೆಗಿನ ಕುರುಡು ಪ್ರೀತಿಗೆ, ಅಪ್ರಾಪ್ತೆಯರ ಜೀವನದಲ್ಲಿ ಆಟವಾಡಿದ ನರ್ಸ್​! ಯಾರನ್ನೂ ನಂಬದಿರಿ ಹುಷಾರ್!

 ಆಯ್ಕೆ ಬಯಸಿ ಬಂದ ಪ್ರತಿಯೊಬ್ಬರಿಗೂ ಪ್ರೀ ಆಡಿಷನ್​ ನಡೆಸಿ,  ಐದು ವಿಭಾಗಳಲ್ಲಿ ಸ್ಪರ್ಧೆ ನಡೆಸಲಾಗುತ್ತದೆ ಎಂದು ವಿವರ ನೀಡಿದ ಮೇಘಾ ಒಂದೊಂದು ವಿಭಾಗದಿಂದ 15ರಿಂದ 20 ಸ್ಪರ್ಧಾಳುಗಳು ಫಿನಾಲೆಗೆ ಆಯ್ಕೆಯಾಗುತ್ತಾರೆ.  10ರ ಗುಂಪಿನಲ್ಲಿ ಆಯ್ಕೆಯಾದ ಸದಸ್ಯರಿಗೆ ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಗೆ ಅವಕಾಶ ನೀಡಲಾಗುತ್ತದೆ. ಅಲ್ಲದೆ ಫಿನಾಲೆಯಲ್ಲಿ ಆಯ್ಕೆಯಾದವರು ಟಿವಿ ಶೋ, ಧಾರಾವಾಹಿಗಳು ಹಾಗೂ ಚಲನಚಿತ್ರಗಳಲ್ಲೂ ಭಾಗವಹಿಸುವ ಅವಕಾಶವಿರುತ್ತದೆ ಎಂದರು. ಈ ಎರಡೂ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗೆ ದೂರವಾಣಿ(97397 48550)ಗೆ ಸಂಪರ್ಕಿಸಬಹುದು  ಎಂದು ತಿಳಿಸಿದ್ದಾರೆ


Share This Article