ಶಿವಮೊಗ್ಗದ ಶೃತಿ ಮೋಟಾರ್ಸ್​ ಮಾಲೀಕ, ಉದ್ಯಮಿ ಡಿ.ಟಿ. ಪರಮೇಶ್​ ನಿಧನ

Shimoga-based Shruthi Motors owner and businessman D.T. Paramesh passes awayಶಿವಮೊಗ್ಗದ ಶೃತಿ ಮೋಟಾರ್ಸ್​ ಮಾಲೀಕ, ಉದ್ಯಮಿ ಡಿ.ಟಿ. ಪರಮೇಶ್​ ನಿಧನ

ಶಿವಮೊಗ್ಗದ  ಶೃತಿ ಮೋಟಾರ್ಸ್​ ಮಾಲೀಕ, ಉದ್ಯಮಿ ಡಿ.ಟಿ. ಪರಮೇಶ್​ ನಿಧನ

KARNATAKA NEWS/ ONLINE / Malenadu today/ Aug 2, 2023 SHIVAMOGGA NEWS

ಶಿವಮೊಗ್ಗ ನಗರದ ಪ್ರಮುಖ ಉದ್ಯಮಿ ಶೃತಿ ಮೊಟಾರ್ಸ್​ ನ ಮಾಲೀಕ ಡಿ.ಟಿ ಪರಮೇಶ್​ ರವರು ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ  ನೀಡಲಾಗುತ್ತಿತ್ತು. ಇಂದು ಬೆಳಗ್ಗೆ ಅವರು ನಿಧನರಾಗಿದ್ದರು. 

ಶಿವಮೊಗ್ಗ ನಗರದಲ್ಲಿ ಶೃತಿ ಮೋಟಾರ್ಸ್​ ಸೇರಿದಂತೆ ವಿವಿಧ ಉದ್ಯಮಗಳನ್ನು ಡಿ.ಟಿ.ಪರಮೇಶ್​ರವರು ಮುನ್ನೆಡೆಸುತ್ತಿದ್ದರು. ಮೂಲತ ಹಾಸನದವರಾದ ಅವರು ಶಿವಮೊಗ್ಗದಲ್ಲಿ ಹೆಸರುವಾಸಿಯಾಗಿದ್ದರು. ಅವರಿಗೆ ಓರ್ವ ಮಗ ಹಾಗೂ ಮಗಳಿದ್ದಾರೆ. ಬೆಂಗಳೂರಿನಲ್ಲಿರುವ ನಿವಾಸದಲ್ಲಿ ಡಿ.ಟಿ.ಪರಮೇಶ್​ರವರ ಅಂತಿಮ ದರ್ಶನಕ್ಕೆ ವ್ಯವಸ್ತೆ ಮಾಡಲಾಗಿದ್ದು, ಪರಮೇಶ್​ರವರ ಜನ್ಮಸ್ಥಳ ಹಾಸನ ಬೇಲೂರು ತಾಲ್ಲೂಕಿನ ದೇವರಾಯ ಪಟ್ಟಣದಲ್ಲಿ  ಅಂತ್ಯಕ್ರಿಯೆ ನಡೆಯಲಿದೆ. ಹಿರಿಯ ಉದ್ಯಮಿಯ ನಿಧನಕ್ಕೆ  ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಹೊಸನಗರದಲ್ಲಿ ಸೇತುವೆಯಿಂದ 50 ಅಡಿ ಆಳಕ್ಕೆ ಬಿದ್ದು ಯುವಕ ದುರ್ಮರಣ!

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕಲ್ಲುಹಳ್ಳ ಸೇತುವೆ ಬಳಿ ಆಯತಪ್ಪಿ ಬಿದ್ದು ಯುವಕನೊಬ್ಬ ಮೃತಪಟ್ಟಿದ್ದಾನೆ. ಹೊಸನಗರ ಪೇಟೆ ಸಮೀಪ ಇರುವ ಕಲ್ಲುಹಳ್ಳ ಸೇತುವೆ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಮೃತ ಯುವಕನನ್ನ ಹೊಸನಗರ ದ್ಯಾವರ್ಸದ ನಿವಾಸಿ ರಾಘು ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಯುವಕ ಸೇತುವೆ ಬಳಿ ನಡೆದುಕೊಂಡು ಹೋಗುವದನ್ನ ಸ್ಥಳೀಯರು ಗಮನಿಸಿದ್ದಾರೆ. ಆನಂತರ ಯುವಕ ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದಾನೆ. ಘಟನೆ ಹೇಗೆ ನಡೆಯಿತು ಎಂಬುದು ಸ್ಪಷ್ಟವಾಗಿಲ್ಲ. ಸ್ಥಳೀಯರು ಹೇಳುವಂತೆ, ಯುವಕ ಆಯತಪ್ಪಿ ಬಿದ್ದಿದ್ದಾನೆ ಎನ್ನಲಾಗಿದೆ. ಸೇತುವೆಯಿಂದ ಸುಮಾರು 50 ಅಡಿ ಆಳಕ್ಕೆ ಬಿದ್ದಿದ್ದ ಯುವಕನಿಗೆ ಕಲ್ಲುಗಳು ಬಡಿದು ಸಾವನ್ನಪ್ಪಿದ್ದಾರೆ. ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. 

ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದ ಬಸ್​ ಮೇಲೆ ಬಿದ್ದ ಕರೆಂಟ್ ವಯರ್​! ಇಬ್ಬರು ವಿದ್ಯಾರ್ಥಿಗಳು ಮೆಗ್ಗಾನ್​ಗೆ ಶಿಫ್ಟ್​

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಖಾಸಗಿ ಬಸ್​ ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕರೆಂಟ್ ವಯರ್ ಬಸ್​ ಮೇಲೆ ಮುರಿದು ಬಿದ್ದಿದ್ದಾರೆ. ಈ ವೇಳೇ ಇಬ್ಬರು ವಿದ್ಯಾರ್ಥಿಗಳಿಗೆ ಕರೆಂಟ್ ಶಾಕ್ ಹೊಡೆದ ಘಟನೆ ನಡೆದಿದೆ. ಸಾಗರ ತಾಲ್ಲೂಕಿನ  ಗೆಣಿಸಿನ ಕುಣಿಯ  ಬಳಿಯಲ್ಲಿ ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದೆ. ಸಾಗರ ಕಡೆಗೆ ಬರುತ್ತಿದ್ದ ಗೆಣಿಸಿನ ಕುಣಿಯ ಬಳಿಯಲ್ಲಿ ಖಾಸಗಿ ಬಸ್ ಅಪಘಾತವಾಗಿದೆ. ಅಪಘಾತಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಆದರೆ ಬಸ್ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಕಂಬ ಮುರಿದು ವಿದ್ಯುತ್ ವಯರ್ ಬಸ್ ಮೇಲೆ ಬಿದ್ದಿದೆ. ಈ ವೇಳೆ ಬಸ್​ನಲ್ಲಿದ್ದವರಿಗೆ ವಿದ್ಯುತ್ ಶಾಕ್​ ಹೊಡೆದ ಅನುಭವ ಆಗಿದೆ. ಈ ಪೈಕಿ ಇಬ್ಬರು ವಿದ್ಯಾರ್ಥಿನಿಯರು ವಿದ್ಯುತ್ ಶಾಕ್​ನಿಂದ ಪ್ರಜ್ಞೆ ತಪ್ಪಿದ್ದಾರೆ. ಅವರನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಅಲ್ಲಿಯ ವೈದ್ಯರ ಸಲಹೆ ಮೇರೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. 

ಇನ್ನಷ್ಟು ಸುದ್ದಿಗಳು 



 ​