ಈ ವಿದ್ಯೆಯನ್ನು ಶಿವಮೊಗ್ಗ ಪೊಲೀಸರೇ ಹೇಳಿಕೊಡ್ತಾರೆ | ತರಬೇತಿ ಪಡೆಯಲು ಇಲ್ಲಿದೆ ಅವಕಾಶ!?

Rifle Training Camp organized by Shimoga Police ಶಿವಮೊಗ್ಗ ಪೊಲೀಸರಿಂದ ಬಂದೂಕು ತರಬೇತಿ ಶಿಬಿರ ಆಯೋಜನೆ

ಈ ವಿದ್ಯೆಯನ್ನು ಶಿವಮೊಗ್ಗ ಪೊಲೀಸರೇ ಹೇಳಿಕೊಡ್ತಾರೆ | ತರಬೇತಿ ಪಡೆಯಲು ಇಲ್ಲಿದೆ ಅವಕಾಶ!?

KARNATAKA NEWS/ ONLINE / Malenadu today/ Oct 30, 2023 SHIVAMOGGA NEWS

 

SHIVAMAOGGA | ಶೂಟ್ ಮಾಡಬೇಕಾ ಎಂಬ ಸಿನಿಮಾ ಮಾತು, ಹಲವರ ಬಾಯಲ್ಲಿ ಬಂದು ಹೋಗುತ್ತಿರುತ್ತದೆ. ಆ ಶೂಟ್ ಮಾಡೋದಕ್ಕೆ ತಕ್ಕುದಾದ ತರಭೇತಿಯನ್ನು ಸಹ ಪಡೆಯಬೇಕು. ಅಂತಹ ತರಬೇತಿಯನ್ನು    ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ನೀಡಲಾಗುತ್ತಿದೆ. 

ಹೌದು,  ಶಿವಮೊಗ್ಗ ನಗರದಲ್ಲಿ ನಾಗರೀಕ ಬಂದೂಕು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ  ತರಬೇತಿ ಶಿಬಿರದಲ್ಲಿ ಭಾಗವಹಿಸಲು ಇಚ್ಛೆಯುಳ್ಳ  ಆಸಕ್ತ ಸಾರ್ವಜನಿಕರು ತಮ್ಮ ಸಮೀಪದ ಪೊಲೀಸ್ ಠಾಣೆ ಅಥವಾ  DAR shivamogga ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬಹುದು. 

READ : ಮಧು ಬಂಗಾರಪ್ಪ V/s ಬೇಳೂರು ಗೋಪಾಲಕೃಷ್ಣ! ಏನು ನಡೆಯುತ್ತಿದೆ ಶಿವಮೊಗ್ಗ ಕಾಂಗ್ರೆಸ್​ನಲ್ಲಿ?

ಈ, ನಿಗಧಿತ ನಮೂನೆಯಲ್ಲಿ ಭರ್ತಿಮಾಡಿ,  ಆಧಾರ್ ಕಾರ್ಡ್ ನ ನಕಲು ಪ್ರತಿ ಹಾಗೂ ಇತ್ತೀಚಿನ ಎರಡು  ಪಾಸ್​ ಪೋರ್ಟ್​ ಸೈಜ್​ನ  ಭಾವಚಿತ್ರದೊಂದಿಗೆ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದಿನಾಂಕ:20-11-2023 ಒಳಗಾಗಿ ಅರ್ಜಿಯನ್ನು  ಸಲ್ಲಿಸಬೇಕು ಎಂದು ಪೊಲೀಸ್ ಇಲಾಖೆ ತನ್ನ ಪ್ರಕಟಣೆಯಲ್ಲಿ  ತಿಳಿಸಿದೆ.