ಶಿವಮೊಗ್ಗ ವಿದ್ಯಾನಗರದಿಂದ ಮಿಸ್ಸಿಂಗ್‌ ಆಗಿದ್ದ ಮಹಿಳೆ ಬಾಗಲಕೋಟೆಯಲ್ಲಿ ಕೊಲೆ | ನಡೆದಿದ್ದೇನು ಗೊತ್ತಾ?

Woman, who was missing from Shimoga Vidyanagar, was murdered in Bagalkote. Do you know what happened?

ಶಿವಮೊಗ್ಗ ವಿದ್ಯಾನಗರದಿಂದ ಮಿಸ್ಸಿಂಗ್‌ ಆಗಿದ್ದ ಮಹಿಳೆ ಬಾಗಲಕೋಟೆಯಲ್ಲಿ ಕೊಲೆ | ನಡೆದಿದ್ದೇನು ಗೊತ್ತಾ?
Shimoga Vidyanagar, Bagalkote

SHIVAMOGGA | MALENADUTODAY NEWS | Jun 18, 2024  ಮಲೆನಾಡು ಟುಡೆ 

ಶಿವಮೊಗ್ಗದಿಂದ ವಿಜಯಪುರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದರು. ಅವರ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ತಿಳಿಸುವಂತೆ ಪ್ರಕಟಣೆ ನೀಡಲಾಗಿತ್ತು. ಆ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು, ಅದರ ಲಿಂಕ್‌ ಇಲ್ಲಿದೆ  (Malenadutoday)

ಸದ್ಯ ಈ ನಾಪತ್ತೆ ಪ್ರಕರಣವನ್ನು ಶಿವಮೊಗ್ಗದ ಪೊಲೀಸರು ಭೇದಿಸಿದ್ದು ಪ್ರಕರಣವನ್ನು ಬಾಗಲಕೋಟೆ ಬಿಳಗಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಶಿವಮೊಗ್ಗದಿಂದ ವಿಜಯಪುರಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದ ಮಹಿಳೆ ಹೋಗಿದ್ದೆಲ್ಲಿಗೆ ಎಂಬುದು ಇಡೀ ಘಟನೆಗೆ ಮೂಲವಾಗಿತ್ತು. 

ಶಿವಮೊಗ್ಗದಿಂದ ಹೊರಟಿದ್ದ ಮಹಿಳೆ ಕೃಷ್ಣಾ ನದಿಯ ತೀರದಲ್ಲಿ ಹೆಣವಾಗಿ ಪತ್ತೆಯಾಗಿದ್ದಳು. ಬಿಳಗಿ ಪೊಲೀಸ್‌ ಠಾಣೆ ಪೊಲೀಸರು ಅಪರಿಚಿತ ಶವದ ಗುರುತು ಪತ್ತೆಗಾಗಿ ಕಾದಿದ್ದರು. ಅದೇ ಸಂದರ್ಭದಲ್ಲಿ ಶಿವಮೊಗ್ಗ ಪೊಲೀಸರು ಮಹಿಳೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಷ್ಟೆ ಅಲ್ಲದೆ ಈ ಸಂಬಂಧ ಆಕೆಯ ಮೊಬೈಲ್‌ ಲೊಕೆಷನ್‌ ಹಾಗೂ ಕಾಲ್‌ ಹಿಸ್ಟರಿ ತಲಾಶ್‌ ಮಾಡಿದ್ದರು. ಈ ವೇಳೆ ಅವರಿಗೆ ಯುವಕನೊಬ್ಬ ಕರೆ ಮಾಡುತ್ತಿದ್ದ ವಿಚಾರ ಗೊತ್ತಾಗಿದೆ. ತಡಮಾಡದ ಪೊಲೀಸರು ಆತನನ್ನ ಹುಡುಕಿ ಏನ‍ಣ್ಣ ವಿಷಯ ಅಂತಾ ಕೇಳಿದ್ದಾರೆ. ಮೊದಲು ಎಂತದ್ದು ಇಲ್ಲವೆಂದಿದ್ದ ಯುವಕ ಆ ಬಳಿಕ ನಡೆದಿದ್ದನ್ನ ಪೊಲೀಸರ ಮುಂದೆ ವರದಿ ರೂಪದಲ್ಲಿ ಒಪ್ಪಿಸಿದ್ದಾನೆ. 

ವಿಷಯ ಅಂದರೆ, ವಿದ್ಯಾನಗರದ ಮಮತಾ ಎಂಬವರು ಮದುವೆಯಾಗಿದ್ದರು, ಅವರ ಪತಿ ತೀರಿಕೊಂಡಿದ್ದರು. ಈ ನಡುವೆ ಅವರಿಗೆ ಫೇಸ್‌ಬುಕ್‌ (Facebook)  ನಲ್ಲಿ ರೇವಣಸಿದ್ದಯ್ಯ ಎಂಬ 26 ವರ್ಷದ ಯುವಕ ಪರಿಚಯವಾಗಿದ್ದ. ಮಮತಾಗೆ 48 ವರ್ಷ ವಯಸ್ಸಾಗಿತ್ತು. ಇಬ್ಬರ ನಡುವೆ ಪರಿಚಯ ಬೆಳೆದಿದೆ. ಸೋಶಿಯಲ್‌ ಮೀಡಿಯಾದಲ್ಲಿಯೇ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು ಎನ್ನಲಾಗಿದೆ. ಇದರ ನಡುವೆ ಆರೋಪಿ ಮಹಿಳೆಯಿಂದ ಒಂದಷ್ಟು ಹಣವನ್ನ ಪಡೆದಿದ್ದ. 8 ತಿಂಗಳ ಅವಧಿಯಲ್ಲಿ ಅರ್ಜೆಂಟಿಗೆ ಅಂತಾ ಪಡೆದಿದ್ದ ಹಣವನ್ನ ಆರೋಪಿ ವಾಪಸ್‌ ಕೊಟ್ಟಿರಲಿಲ್ಲ. ಹಾಗಾಗಿ ಮಮತಾಗೆ ಅನುಮಾನ ಬಂದಿದೆ. ಅಲ್ಲದೆ ಇದೇ ವಿಚಾರದಲ್ಲಿ ಮದುವೆ ಪ್ರಸ್ತಾಪ ಮಾಡಿದ್ದಾರೆ. ಯಾವಾಗ ಮಮತಾರ ಒತ್ತಡ ಹೆಚ್ಚಾಯಿತೋ ರೇವಣ ಸಿದ್ದಯ್ಯ ದುಡ್ಡು ಕೊಡುತ್ತೇನೆ ಬಾ ಅಂತಾ ಆಕೆಯನ್ನ ಬಬಲೇಶ್ವರಕ್ಕೆ  ಕರೆಸಿಕೊಂಡಿದ್ದಾನೆ. ಅಲ್ಲಿಂದ ಆಕೆಯನ್ನು ಕೃಷ್ಣಾ ನದಿ ತೀರಕ್ಕೆ ಕರೆದೊಯ್ದು, ಅಲ್ಲಿ ರಾಡ್‌ನಿಂದ ಹೊಡೆದು ನದಿಗೆ ತಳ್ಳಿ ಎಸ್ಕೇಪ್‌ ಆಗಿದ್ದ. 

ಹೀಗೆ ಕೊಲೆಯೊಂದನ್‌ ಎಸೆಗಿ ಪರಾರಿಯಾಗಿದ್ದ ರೇವಣಸಿದ್ದಯ್ಯ ಮೊಬೈಲ್‌ ಕಾಲ್‌ ಹಿಸ್ಟರಿಯಿಂದ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ನಾಪತ್ತೆ ಪ್ರಕರಣವೊಂದನ್ನ ಪತ್ತೆ ಹಚ್ಚಿದ ಪೊಲೀಸರು ಬಿಳಗಿ ಪೊಲೀಸರ ಮೂಲಕ ಅಪರಿಚಿತ ಶವ ಪತ್ತೆಯನ್ನ ಮಾಡಿ, ಅದು ಮಮತಾರದ್ದೆ ಮೃತದೇಹ ಎಂದು ಅಧಿಕೃತಗೊಳಿಸಿಕೊಂಡಿದ್ದರು. ಆನಂತರ ಪ್ರಕರಣವನ್ನು ಬಿಳಗಿ ಪೊಲೀಸರಿಗೆ ಹಸ್ತಾಂತರಿಸಿದ್ದರು. ಬಿಳಗಿ ಪೊಲೀಸರು ಆರೋಪಿಯನ್ನ ಅಂದರ್‌ ಮಾಡಿದ್ದಾರೆ.