ಕೋವಿಡ್ 19 ನ ಆತಂಕದ ನಡುವೆ ಶಿವಮೊಗ್ಗದಲ್ಲಿ ಇವತ್ತು ಮೊದಲ ಕೊರೊನಾ ಪ್ರಕರಣ ದಾಖಲಾಗಿರುವ ಬಗ್ಗೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ, ದಾಖಲಾಗಿರುವ ಪ್ರಕರಣದ ಕುರಿತು ಮಾಹಿತಿ ಕಲೆ ಹಾಕಿದಾಗ, ಹೊರರಾಷ್ಟ್ರದಿಂದ ಬಂದಿರುವ ವ್ಯಕ್ತಿಯನ್ನು ಏರ್ಪೋರ್ಟ್ನಲ್ಲಿ ರ್ಯಾಂಡಮ್ ಟೆಸ್ಟ್ ಮಾಡಿದ್ಧಾಗ ಈ ಪ್ರಕರಣ ಪತ್ತೆಯಾಗಿದೆ.
ಇದನ್ನು ಸಹ ಓದಿ : ಶಿವಮೊಗ್ಗದಲ್ಲಿ ದಾಖಲಾಯ್ತು ಕೊರೊನಾ ಪಾಸಿಟಿವ್ ಕೇಸ್
ಕಳೆದ 17 ತಾರೀಖಿನಂದು ಟೆಸ್ಟ್ ಆಗಿದ್ದ ಪ್ರಕರಣದಲ್ಲಿ ಪಾಸಿಟಿವ್ ಬಂದಿದ್ದು, ಅವರಿಗೆ ಯಾವುದೇ ಸಿಂಟಮ್ಸ್ ಇಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ, ಅವರು ಕೋವಿಡ್ ಲಸಿಕೆಯನ್ನ ಸಹ ಪಡೆದುಕೊಂಡಿದ್ದಾರೆ ಎಂದು ಮಲೆನಾಡು ಟುಡೆ ತಂಡಕ್ಕೆ ಶಿವಮೊಗ್ಗ ಜಿಲ್ಲಾ ಆರೋಗ್ಯ ಅಧಿಕಾರಿ ರಾಜೇಶ್ ಸುರಗಿಹಳ್ಳಿ ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link