ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ 50 ಸಾವಿರ / ಶಿವಮೊಗ್ಗ ಗ್ರಾಮಾಂತರದಲ್ಲಿ 25 ಸಾವಿರ ಮತಗಳಿಂದ ಗೆಲುವು!?

B.Y. Vijayendra wins in Shikaripura by 50,000 votes/ Shivamogga Rural by 25,000 votes! Ashok Naik's statement

ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ  50 ಸಾವಿರ / ಶಿವಮೊಗ್ಗ ಗ್ರಾಮಾಂತರದಲ್ಲಿ 25 ಸಾವಿರ ಮತಗಳಿಂದ ಗೆಲುವು!?

KARNATAKA NEWS/ ONLINE / Malenadu today/ May 1, 2023 GOOGLE NEWS


ಶಿವಮೊಗ್ಗ/ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಅಶೋಕ್ ನಾಯ್ಕ್​  ಇವತ್ತು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡಿದ್ದರು.  ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 5 ವರ್ಷದಲ್ಲಿ ಪಾರದರ್ಶಕವಾಗಿ ಕೆಲಸಮಾಡಿದ್ದೇನೆ ಎಂದರು. 

ಪ್ರತಿ ಹಳ್ಳಿಗೂ 30 ಕೋಟಿಗೂ ಅಧಿಕ ಅನುದಾನ ಬಿಡುಗಡೆ ಮಾಡಲಾಗಿದೆ. ಅಭಿವೃದ್ಧಿಯ ಕೆಲಸಗಳು ನಡೆದಿವೆ.  ಮಾದರಿ ಹಳ್ಳಿಗಳಾಗಿ ಪರಿವರ್ತಿಸಲು  ಬಿಜೆಪಿಗೆ ಮತ ನೀಡಿ ಎಂದು ಕೋರುತ್ತಿದ್ದೇನೆ ಎಂದಿದ್ದಾರೆ. 

 

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷಕ್ಕೆ ಜನರು ಆಶೀರ್ವಾದ ಮಾಡಲಿದ್ದಾರೆ ಎಂದ ಅವು, 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ರು. 

ಬಂಜಾರ ಸಮುದಾಯದ ಒಳಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸಿದ್ದು ಒಂದು ಷಡ್ಯಂತ್ರವಾಗಿದೆ ಅಂತಾ ಆರೋಪಿಸಿದ ಅಶೋಕ್ ನಾಯ್ಕ್​, ಇದೇ 7 ನೇ ತಾರಿಖು ಅಯನೂರಿಗೆ ಪ್ರಧಾನಿ ನರೇಂದ್ರ ಮೋದಿಯವರು ಬರಲಿದ್ದಾರೆ..ಆ ಕಾರ್ಯಕ್ರಮಕ್ಕೆ ಸುನಾಮಿ ರೀತಿಯಲ್ಲಿ ಜನಸಂಖ್ಯೆ ಆಗಮಿಸಲಿದೆ ಎಂದಿದ್ಧಾರೆ. 



ಇದನ್ನೂ ಓದಿ / ಒಂದೇ ದಿನ 90 ಲಕ್ಷದ ಎಣ್ಣೆ ಜಪ್ತಿ/ ಶಿಕಾರಿಪುರದಲ್ಲಿ ಭರ್ಜರಿ ಹಣ ಪತ್ತೆ/  ಒಂದೇ ರಾತ್ರಿ 19 ಪಿಟ್ಟಿಕೇಸ್/ ಎ.ಎ. ಸರ್ಕಲ್​ ನಲ್ಲಿ ರೂಟ್ ಮಾರ್ಚ್​! ಪೊಲೀಸ್ ನ್ಯೂಸ್​ 

ಆಯನೂರಿನಲ್ಲಿ ನಡೆಯುವ ಸಭೆಯು ಈ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಕೊನೆಯ ಬಹಿರಂಗ ಸಭೆಯಾಗಲಿದೆ. ಒಳ ಮೀಸಲಾತಿ ಸಮಸ್ಯೆ ನಮ್ಮ ಕ್ಷೇತ್ರದಲ್ಲಿ ಆಗಿಲ್ಲ. ಹೊಳಲೂರು ಏತ ನೀರಾವರಿ ಯೋಜನೆ ಸಂಪೂರ್ಣಗೊಂಡಿದೆ. 100 ಕ್ಕೆ ನೂರರಷ್ಟು ಕಾಮಗಾರಿ ಮುಗಿದು ಹೋಗಿದೆ, ಜೆಡಿಎಸ್ ನವರು ನೀತಿ ಸಂಹಿತೆ ಇರುವುದರಿಂದ ಕಾಮಗಾರಿ ಉದ್ಘಾಟನೆ ಮಾಡಬಾರದು ಎಂದು ಡಿಸಿಯವರಿಗೆ ಪತ್ರ ಬರೆದಿದ್ದಾರೆ ಎಂದ ಅಶೋಕ್ ನಾಯ್ಕ್​ ಹಲವು ವಿಚಾರಗಳನ್ನು ಹಂಚಿಕೊಂಡರು. 

ಕೊನೆಯಲ್ಲಿ ನಾವು ಜನರಿಗೆ ನೀರು ಕೂಡುತ್ತೇವೆ ಎಂದು ಆಶ್ವಾಸನೆ ನೀಡಿದ್ದೇವು ಆದೆ ರೀತಿ ನಾವು ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಶಿಕಾರಿಪುರದಲ್ಲಿಯು ಬಂಜಾರ ಸಮುದಾಯ ಬಿಜೆಪಿ ಪರವಾಗಿದ್ದು ಬಿ.ವೈ ವಿಜೇಂದ್ರರವರು 50 ಸಾವಿರಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ರು.

ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ 

ಶಿವಮೊಗ್ಗಕ್ಕೆ ಇಂದು ಅಮಿತ್ ಶಾ ಆಗಮನ



ಶಿವಮೊಗ್ಗ/ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ಹಿನ್ನೆಲೆಯಲ್ಲಿ ಇವತ್ತು ಶಿವಮೊಗ್ಗಕ್ಕೆ ಬಿಜೆಪಿ ವರಿಷ್ಟ ಕೇಂದ್ರ ಗೃಹಸಚಿವ ಅಮಿತ್ ಶಾ (home minister amit shah) ಆಗಮಿಸಲಿದ್ದಾರೆ. 

ಅಮಿತ್​ ಶಾ ಆಗಮನಕ್ಕೆ ಸಕಲ ಸಿದ್ಧತೆ 

ಅಮಿತ್ ಶಾ ಆಗಮನಕ್ಕಾಗಿ ಬಿಜೆಪಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಶಿವಮೊಗ್ಗ ಬಿಜೆಪಿಯಲ್ಲಿ ಹೊಸ ಹುರುಪು ಮನೆ ಮಾಡಿದೆ. ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿಕೊಂಡಿರುವ ಬಿಜೆಪಿ ಕಾರ್ಯಕರ್ತರಿಗೆ ಇವತ್ತು ಅಮಿತ್ ಶಾ ಮತ್ತೊಂದಿಷ್ಟು ಸ್ಪೂರ್ತಿ ತುಂಬಲಿದ್ದಾರೆ. 

ಎಷ್ಟೊತ್ತಿಗೆ ಬರುತ್ತಾರೆ ಅಮಿತ್ ಶಾ

ಬಿಜೆಪಿ ಕಚೇರಿಯ ಮಾಹಿತಿ ಪ್ರಕಾರ ಇವತ್ತು ದಿನಾಂಕ  01.05.23 ರ  ಸೋಮವಾರ  ಸಂಜೆ  06.00 ಕ್ಕೆ 

ಶಿವಮೊಗ್ಗ ನಗರದ  ಶಿವಪ್ಪ ನಾಯಕ ವೃತ್ತ ದಿಂದ  ನೆಹರು ರಸ್ತೆ, ದುರ್ಗಿ ಗುಡಿ  ,ಜೈಲ್ ರಸ್ತೆ, ಲಕ್ಷ್ಮಿ ಟಾಕೀಸ್  ವರೆಗೆ  ಕೇಂದ್ರ  ಗೃಹ ಸಚಿ ಅಮಿತ್ ಶಾ  ರವರು  ಬಿಜೆಪಿ  ಚುನಾವಣಾ  ರೋಡ್ ಶೋ ನಡೆಸಲಿದ್ದಾರೆ. 

ಶೂನ್ಯ ಸಂಚಾರ 

ಇನ್ನೂ ಅಮಿತ್ ಶಾ ರೋಡ್​ ಶೋ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಆಗುವ ಸಾದ್ಯತೆ ಇದ್ದು, ಬದಲಿ ಮಾರ್ಗವನ್ನು ವಾಹನ ಸವಾರರು ಬಳಸುವಂತೆ ಸೂಚಿಸಲಾಗಿದೆ. 

ಮಧ್ಯಾಹ್ನ 03:00 ರಿಂದ ಸಂಜೆ 07:00 ಗಂಟೆಯವರೆಗೆ ಬಿಹೆಚ್ ರಸ್ತೆಯ ಕರ್ನಾಟಕ ಸಂಘ, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತದ ಗೋಪಿ ವೃತ್ತ, ಜೈಲ್ ವೃತ್ತ, ಲಕ್ಷ್ಮೀ ಟಾಕೀಸ್ ವರೆಗೆ ಶೂನ್ಯ ಸಂಚಾರ ಮಾರ್ಗವಾಗಿರಲಿದೆ. ಅಂದರೆ, ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇರೋದಿಲ್ಲ. ಅಲ್ಲದೆ ವಾಹನಗಳ ಪಾರ್ಕಿಂಗ್​ ಕೂಡ ಮಾಡುವಂತಿಲ್ಲ. 

ಪಾರ್ಕಿಂಗ್​ ಎಲ್ಲಿ?

ಸುಗಮ ಸಂಚಾರದ ದೃಷ್ಠಿಯಿಂದ ಸಾರ್ವಜನಿಕರು ಸದರಿ  ಮಾರ್ಗಗಳನ್ನು ಹೊರತು ಪಡಿಸಿ, ಬದಲೀ ಮಾರ್ಗಗಳನ್ನು ಬಳಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ. 

ಇನ್ನೂ   ರೋಡ್ ಶೋ ನಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಫ್ರೀಡಂ ಪಾರ್ಕ್ ಮೈದಾನ, ಎನ್ಇಎಸ್ ಮೈದಾನ ಮತ್ತು ಸೈನ್ಸ್ ಕಾಲೇಜ್ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 

 

Malenadutoday.com Social media