ಜೆಡಿಎಸ್​ ಶಿವಮೊಗ್ಗ ಜಿಲ್ಲಾ ವಕ್ತಾರರಾಗಿ ನರಸಿಂಹ ಗಂಧದ ಮನೆ ಆಯ್ಕೆ

Malenadu Today

ಚುನಾವಣೆ ಸಮೀಪಿಸುತ್ತಲೇ ಎಲ್ಲಾ ಪಕ್ಷಗಳು ಸಂಘಟನೆಯಲ್ಲಿ ತೊಡಗಿಸಿಕೊಂಡಿವೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಜನತಾದಳ (ಜಾ) ವೂ ಪಕ್ಷ ಸಂಘಟನೆಗೆ ಮುಂಧಾಗಿದ್ದು ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್​, ಪಕ್ಷದಲ್ಲಿ ವಿವಿಧ ಮುಖಂಡರಿಗೆ ಜವಾಬ್ದಾರಿಗಳನ್ನು ನೀಡುತ್ತಿದ್ದಾರೆ.

ಇದನ್ನು ಸಹ ಓದಿ : ಶಿವಮೊಗ್ಗದ ಗೂಂಡಾಗಳಿಗೆ ಗಡಿಪಾರು ಖಾಯಂ/ 2 ತಿಂಗಳಿನಲ್ಲಿ 22 / ವರ್ಷದಲ್ಲಿ 45 ಮಂದಿಗೆ ಗೇಟ್​ಪಾಸ್​ ಲಿಸ್ಟ್​

ಇದಕ್ಕೆ ಪೂರಕವಾಗಿ  ಶಿವಮೊಗ್ಗ ಜಿಲ್ಲೆಯ ಜನತಾದಳ (ಜಾತ್ಯಾತೀತ) ಪಕ್ಷದ ಶಿವಮೊಗ್ಗ ಜಿಲ್ಲೆಯ ‘ವಕ್ತಾರ’ ರನ್ನಾಗಿ  ನರಸಿಂಹ ಗಂಧದಮನೆಯವರನ್ನ ನೇಮಕ ಮಾಡಿದ್ದಾರೆ. ಸುದ್ದಿ ಮಾಧ್ಯಮಗಳಲ್ಲಿ ಪಕ್ಷದ ಕಾರ್ಯಕ್ರಮಗಳು ಮತ್ತು ನಮ್ಮ ಪಕ್ಷದ ಸರ್ಕಾರಗಳು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಪ್ರಯತ್ನಮಾಡಲಿದ್ದಾರೆ ಎಂದು ಶ್ರೀಕಾಂತ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಇದನ್ನು ಸಹ ಒದಿ : ಅಡಿಕೆ ದರ  ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ  ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp 

Share This Article