ಶಿವಮೊಗ್ಗದ ಗೂಂಡಾಗಳಿಗೆ ಗಡಿಪಾರು ಖಾಯಂ/ 2 ತಿಂಗಳಿನಲ್ಲಿ 22 / ವರ್ಷದಲ್ಲಿ 45 ಮಂದಿಗೆ ಗೇಟ್​ಪಾಸ್​ ಲಿಸ್ಟ್​

ಶಿವಮೊಗ್ಗ ನಗರ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಗೂಂಡಾವರ್ತನೆ ತೋರುವವರ ವಿರುದ್ಧ ಶಿವಮೊಗ್ಗ ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಕೇಳುವ ಮೊದಲೇ ಶಿವಮೊಗ್ಗ ಪೊಲೀಸ್ ಇಲಾಖೆ ಉತ್ತರ ಕೊಟ್ಟಿದೆ. ಇದಕ್ಕೆ ಪೂರಕವಾಗಿ ಇವತ್ತು ಶಿವಮೊಗ್ಗ ಪೊಲೀಸ್​ ಇಲಾಖೆಯಿಂದ ಪ್ರಕಟಣೆಯೊಂದು ಹೊರಬಿದ್ದಿದೆ.

ಇದನ್ನು ಸಹ ಒದಿ : ಅಡಿಕೆ ದರ  ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ  ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಶಿವಮೊಗ್ಗ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿಗೆ ಭಂಗತರುವಂತಹ ಕೃತ್ಯಗಳನ್ನೆಸಗಿ,  ಸಾರ್ವಜನಿಕವಾಗಿ ಗೂಂಡಾವರ್ತನೆಯನ್ನು ಪ್ರದರ್ಶಿಸುತ್ತಾ, ಸಾರ್ವಜನಿಕರಲ್ಲಿ ಭಯವನ್ನು ಹುಟ್ಟಿಸುವಂತಹ ವ್ಯಕ್ತಿಗಳನ್ನು ಗಡಿಪಾರು ಮಾಡಲು ದೊಡ್ಡ ಲಿಸ್ಟ್​ನ್ನೆ  ಪೊಲೀಸರು ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸಿದ್ದಾರೆ. 

BREAKING NEWS  | India Cyber Cop Award ಪ್ರಶಸ್ತಿ ಪಟ್ಟಿಯಲ್ಲಿ ಶಿವಮೊಗ್ಗದ ಸೈಬರ್​ ಕ್ರೈಂ ಪೊಲೀಸ್​ ಠಾಣೆ ಕೇಸ್​ &  ತನಿಖಾಧಿಕಾರಿ ಕೆ.ಟಿ ಗುರುರಾಜ್​ 

ಜಿಲ್ಲೆ ವ್ಯಾಪ್ತಿಯಲ್ಲಿ ಅಪರಾಧಿಕ ಕೃತ್ಯಗಳನ್ನೆಸಗಿದ ರೌಡಿ ಮತ್ತು ಎಂಓಬಿ ಆಸಾಮಿಗಳು ಹಾಗೂ ರೂಡೀಗತ ಅಪರಾಧಿಗಳ ವಿರುದ್ಧ ದಿನಾಂಕಃ- 01-01-2022  ರಿಂದ ಇಲ್ಲಿಯ ವರೆಗೆ ಒಟ್ಟು 45 ಜನರನ್ನು ಗಡಿಪಾರು ಮಾಡಲು ಆಯಾ ಉಪ ವಿಭಾಗಾಧಿಕಾರಿಗಳಿಗೆ ಪ್ರಸ್ಥಾವನೆಯನ್ನು ಸಲ್ಲಿಸಲಾಗಿದ್ದು, ಈಗಾಗಲೇ 03 ಜನರನ್ನು ಗಡಿಪಾರು ಮಾಡಿ ಆದೇಶ ಮಾಡಲಾಗಿರುತ್ತದೆ. 

  1. ಶಿವಮೊಗ್ಗ ಉಪ ವಿಭಾಗದಿಂದ 31 ಜನ
  2. ಭದ್ರಾವತಿ ಉಪ ವಿಭಾಗದಿಂದ 02 ಜನ
  3. ಸಾಗರ ಉಪ ವಿಭಾಗದಿಂದ 02 ಜನ
  4. ಶಿಕಾರಿಪುರ ಉಪ ವಿಭಾಗದಿಂದ 05 ಜನ
  5. ತೀರ್ಥಹಳ್ಳಿ ಉಪ ವಿಭಾಗದಿಂದ 05 ಜನ

ಇನ್ನೂ ಪೈಕಿ ಕಳೆದ ಎರಡು ತಿಂಗಳಿನಲ್ಲಿಯೇ ಒಟ್ಟು 22 ಜನರನ್ನು ಗಡಿಪಾರು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪೈಕಿ

  1. ಶಿವಮೊಗ್ಗ ಉಪ ವಿಭಾಗದಿಂದ 15 ಜನ
  2. ಭದ್ರಾವತಿ ಉಪ ವಿಭಾಗದಿಂದ 01 ಜನ
  3. ಸಾಗರ ಉಪ ವಿಭಾಗದಿಂದ 02 ಜನ 
  4. ಶಿಕಾರಿಪುರ ಉಪ ವಿಭಾಗದಿಂದ 04 ಜನ   

 ಕಟ್ಸಾರ್ವಜನಿಕರ ಗಮನಕ್ಕೆ | 14 ನೇ ತಾರೀಖು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಪವರ್​ ಕಟ್

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp