ತಂದೆಯ ಸಾವಿನ ನೋವಿನಲ್ಲಿಯು ಹಸಮಣೆ ಏರಿದ ಸಹೋದರಿಯರು! ಮಗನ ಕಳೆದುಕೊಂಡ ದುಃಖದಲ್ಲಿಯು ಮೊಮ್ಮಕ್ಕಳನ್ನ ದಾರೆ ಎರೆದುಕೊಟ್ಟ ಅಜ್ಜ! ಸಾಗರದಲ್ಲೊಂದು ಮನ ಮಿಡಿದ ಮದುವೆ!

Grandfather performs the wedding of his grandchildren amid grief over son's death

ತಂದೆಯ ಸಾವಿನ ನೋವಿನಲ್ಲಿಯು ಹಸಮಣೆ ಏರಿದ ಸಹೋದರಿಯರು! ಮಗನ ಕಳೆದುಕೊಂಡ ದುಃಖದಲ್ಲಿಯು ಮೊಮ್ಮಕ್ಕಳನ್ನ ದಾರೆ ಎರೆದುಕೊಟ್ಟ ಅಜ್ಜ! ಸಾಗರದಲ್ಲೊಂದು ಮನ ಮಿಡಿದ ಮದುವೆ!

KARNATAKA NEWS/ ONLINE / Malenadu today/ Jun 30, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರ ಸಮೀಪ, ಮಕ್ಕಳ ಮದುವೆಯ ಓಡಾಟದಲ್ಲಿದ್ದ ತಂದೆಯೊಬ್ಬರು ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ್ದರು ಈ ಬಗ್ಗೆ ಕರುಳಕುಡಿಗಳ ದಾರೆಗೆ ನಿಲ್ಲದೇ ಹೊರಟ ಅಪ್ಪ! ಮಕ್ಕಳ ಮದುವೆಗೂ ಹಿಂದಿನ ದಿನ ನಡೀತು ವಿಧಿಯ ಆಟ! ಸಾಗರದಲ್ಲಿ ಮನಕಲಕುವ ಘಟನೆ ಎಂಬ ಹೆಸರಿನಲ್ಲಿ ಮಲೆನಾಡು ಟುಡೆ ಸುದ್ದಿ ಮಾಡಿತ್ತು.

ಈ ಮಧ್ಯೆ ತಂದೆ ಸಾವಿನ ನೋವಿನ ನಡುವೆಯು ತಂದೆಯ ಇಚ್ಚೆಯಂತೆ ಇಬ್ಬರು ಹೆಣ್ಣುಮಕ್ಕಳು ಹಸಮಣೆಯೇರಿದ್ದಾರೆ. ಮೃತರ ತಂದೆ ಮುಂದೆ ನಿಂತು ಮೊಮ್ಮಕ್ಕಳ ಮದುವೆ ಮಾಡಿಸಿದ್ದಾರೆ. ಮಂಜುನಾಥ ಗೌಡರವರ ಪುತ್ರಿಯರಾದ ಪಲ್ಲವಿ ಮತ್ತು ಪೂಜಾರವರ ವಿವಾಹವಾಗಿದ್ದಾರೆ. ಅಜ್ಜ ರುದ್ರಪ್ಪಗೌಡರು, ಪೂರ್ವ ನಿಗಧಿಯಂತೆ ಮದುವೆ ಮಾಡಲು ಮುಂದಾದರು, ಇದಕ್ಕೆ ಒಪ್ಪಿದ ಸೋದರಿಯರು ಹಸೆ ಮಣೆ ಏರಿದ್ಧಾರೆ. 

ಮೃತರ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಕುಟುಂಬಸ್ಥರು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ನಿಗದಿಯಂತೆ ಮದುವೆಯು ನಡೆಯಲಿದೆ ಎಂದು ತಿಳಿಸಿದ್ದಾರೆ. ಸಂಬಂಧಿಕರು ಹಾಗು ಬಳಗದವರು ಸಹ ಮನೆಗೆ ಬಂದು ಸಾಂತ್ವನ ಹೇಳಿ ಮದುವೆ ಕೆಲಸಗಳಲ್ಲಿ ತೊಡಗಿದ್ದಾರೆ. ಕುಟುಂಬದ ಮನವಿ ಬೀಗರ ಕಡೆಯವರು ಕೂಡ ಸಮ್ಮತಿಸಿದ್ದರಿಂದ ಎರಡುಕಡೆಯಿಂದ ಸರಾಗವಾಗಿ ಮದುವೆ ನಡೆದಿದೆ. ಬಂದುಬಳಗದವರು ಬಂದು ಮಧಮಕ್ಕಳಿಗೆ ಆಶೀರ್ವಾದ ಮಾಡಿ, ಸಾಂತ್ವನವನ್ನು ಸಹ ಹೇಳಿ ಧೈರ್ಯ ತುಂಬಿದ್ದಾರೆ.