ಧರ್ಮಸ್ಥಳಕ್ಕೆ ಹೋಗುತ್ತಿದ್ದ ಬಸ್‌ ಮುಂಬಾಳು ಕ್ರಾಸ್‌ನಲ್ಲಿ ಪಲ್ಟಿ | 20 ಕ್ಕೂ ಹೆಚ್ಚು ಮಂದಿ ಗಾಯ | ನಡೆದಿದ್ದೇನು?

A private bus overturned in Sagar, Shivamogga district, injuring more than twenty people who have been admitted to hospitals in Shivamogga, Sagar, and Anandapur

ಧರ್ಮಸ್ಥಳಕ್ಕೆ ಹೋಗುತ್ತಿದ್ದ ಬಸ್‌ ಮುಂಬಾಳು ಕ್ರಾಸ್‌ನಲ್ಲಿ ಪಲ್ಟಿ | 20 ಕ್ಕೂ ಹೆಚ್ಚು ಮಂದಿ ಗಾಯ | ನಡೆದಿದ್ದೇನು?
private bus overturned, Sagar, Shivamogga district, Shivamogga, Sagar, and Anandapur

SHIVAMOGGA | MALENADUTODAY NEWS | Jun 9, 2024  ಮಲೆನಾಡು ಟುಡೆʼ 

 

ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಖಾಸಗಿ ಬಸ್‌ವೊಂದು ಪಲ್ಟಿಯಾಗಿದೆ. ಘಟನೆಯಲ್ಲಿ ಇಪ್ಪತ್ತುಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರನ್ನ ಶಿವಮೊಗ್ಗ ಸಾಗರ ಆನಂದಪುರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವತ್ತು ಬೆಳಗ್ಗೆ ಈ ಘಟನೆ ಸಂಭವಿಸಿದೆ. 

sagara

ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಸಾಗರ ತಾಲೂಕಿನ ಆನಂದಪುರ ಸಮೀಪ ಮುಂಬಾಳು ಕ್ರಾಸ್ ನಲ್ಲಿ ಈ ಘಟನೆ ಸಂಭವಿಸಿದೆ. ಖಾಸಗಿ ಬಸ್‌  JRB  ಸಾಗರ ದಿಂದ ಧರ್ಮಸ್ಥಳಕ್ಕೆ ಹೊರಟಿತ್ತು. ಈ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರು ಹಿನ್ನೆಲೆಯಲ್ಲಿ ಬಸ್‌ ತಿರುವಿನಲ್ಲಿ ಚಾಲಕ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದೆ. 

sagara

ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲವಾದರೂ ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಇನ್ನೂ ವಿಷಯ ತಿಳಿದು ಮುಖಂಡರು ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸ್ತಿದ್ದಾರೆ. 

sagara

 

sagara

A private bus overturned in Sagar, Shivamogga district, injuring more than twenty people who have been admitted to hospitals in Shivamogga, Sagar, and Anandapura. The accident happened this morning when the bus, traveling from JRB Sagar to Dharmasthala, lost control at a turn near Mumbalu Cross due to heavy rain in the area. No fatalities have been reported, but more than twenty people have been injured. Leaders and officials have visited the hospital and are conducting an inquiry.