BREAKING NEWS / ಒಂದೇ ದಿನ ಮೂರು ಆಕ್ಸಿಡೆಂಟ್ / ಇಬ್ಬರ ಸಾವು!

BREAKING NEWS / Three accidents in a single day / Two dead!

BREAKING NEWS / ಒಂದೇ ದಿನ ಮೂರು ಆಕ್ಸಿಡೆಂಟ್ / ಇಬ್ಬರ ಸಾವು!
ಆಕ್ಸಿಡೆಂಟ್1

KARNATAKA NEWS/ ONLINE / Malenadu today/ SHIVAMOGGA / Apr 22, 2023


 ಸಾಗರ/ ತೀರ್ಥಹಳ್ಳಿ  ಶಿವಮೊಗ್ಗ/  ಜಿಲ್ಲೆಯಲ್ಲಿ ನಿನ್ನೆ ಒಂದೇ  ಮೂರು ಅಪಘಾತಗಳು ಸಂಭವಿಸಿದೆ. ಎರಡು ಘಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿಯಲ್ಲಿ (thirthahalli )ಎರಡು ಅಪಘಾತಗಳು ಸಂಭವಿಸಿದರೆ, ಇತ್ತ ಸಾಗರ ತಾಲ್ಲೂಕಿನಲ್ಲಿ ಕಾರೊಂದು ಅಪಘಾತಕ್ಕೀಡಾಗಿದೆ. 


Read/ BREAKING NEWS/ ಶಿವಮೊಗ್ಗ ಜೆಡಿಎಸ್​ಗೆ ಕಾಂಗ್ರೆಸ್​ & ಬಿಜೆಪಿಯಿಂದ ಪ್ಲಸ್​ 1/ ವರ್ಕ್​ ಆಗುತ್ತಾ ಹೊಸ ಸ್ಟ್ಯಾಟರ್ಜಿ 

ಎಲ್ಲೆಲ್ಲಿ ಹೇಗಾಯ್ತು ಘಟನೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಉಳ್ಳೂರು ಬಳಿ ಸಿಗುವ ಹಕ್ರೆಕೊಪ್ಪದಲ್ಲಿ  ನಿನ್ನೆ ಕಾರೊಂದು ಅಪ್​ಸೆಟ್ ಆಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇವರನ್ನ ಶಿರವಾಳದ ಮೂಲದ ಅಡಿಕೆ ಉದ್ಯಮಿ ಎನ್ನಲಾಗುತ್ತಿದೆ. 

ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.  ಓವರ್​ ಸ್ಪೀಡ್​ನಲ್ಲಿದ್ದ ಕಾರು ಶಿವಮೊಗ್ಗದಿಂದ ಸಾಗರ ಕಡೆಗೆ ಬರುತ್ತಿತ್ತು.

 ಈ ವೇಳೆ ನಿಯಂತ್ರಣ ತಪ್ಪಿಗೆ ಮರಕ್ಕೆ ಗುದ್ದಿದೆ. ಪರಿಣಾಮ  ಕಾರಿನಲ್ಲಿದ್ದ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಆನಂದಪುರ ಪೊಲೀಸ್ ಸ್ಟೇಷನ್​ನಲ್ಲಿ ಪ್ರಕರಣ ದಾಖಲಾಗಿದೆ

ತೀರ್ಥಹಳ್ಳಿಯಲ್ಲಿ  ಬೈಕ್ ಅಪಘಾತ

ಇತ್ತ ತೀರ್ಥಹಳ್ಳಿ ಹೈವೆಯಲ್ಲಿ  ಭಾರತೀಪುರ ಸಮೀಪ ಕಾರು ಮತ್ತು ಬೈಕ್‌ ನಡುವೆ ಆಕ್ಸಿಡೆಂಟ್ ಆಗಿದೆ.

ನಿನ್ನೆ  ಸಂಜೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪಿದ್ಧಾನೆ.  

ಬೈಕ್‌ ಸವಾರನನ್ನ ಶಿವಮೊಗ್ಗದ ಶಿವಕುಮಾರ್ ಎಂದು ಗುರುತಿಸಲಾಗಿದ್ದು,ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬೈಕ್ ನಲ್ಲಿ ಹೋಗುವಾಗ ಶಿವಮೊಗ್ಗದಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ತೀರ್ಥಹಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Read/ BREAKING NEWS /  ಭದ್ರಾವತಿ ಹೊಸಮನೆಯಲ್ಲಿ ಯುವಕನ ಭೀಕರ ಕೊಲೆ 

ಚರ್ಚ್​ ಬಳಿ ಆಕ್ಸಿಡೆಂಟ್​ 

ಇನ್ನೂ ತೀರ್ಥಹಳ್ಳಿ ಪಟ್ಟಣದ ಚರ್ಚ್ ಬಳಿ ಕಾರು ಹಾಗೂ ಪಿಕ್ ಆಪ್ ವಾಹನದ ನಡುವೆ ಆಕ್ಸಿಡೆಂಟ್​ ಸಂಭವಿಸಿ ಕೆಲಕಾಲ ಟ್ರಾಫಿಕ್​ ಸಮಸ್ಯೆಯಾಗಿತ್ತು. 

 

Malenadutoday.com Social media

Tags:Kannadanewspaper, kannadanewslive, kannadanewsonline, kannadanewschannellist, kannadanewspaperlist, kannadanewsnow, kannadanewshunt, kannadanewspaperonline, kannadanewschannel, kannadanewsanchorslist, kannadanewsapp, kannadanewsarticles, malenadutoday, kannadanewsappdownload, kannadanewsall, kannadanewsshivamogga, kannadanewsnow, malenadutoday, malenadu news, malenadu express, malenadu live, #KannadaNews, #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್,   #karnatakaassemblyelection2023,